Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ತಂಡದಲ್ಲಿದ್ದರೂ ಒಂದೂ ಪಂದ್ಯ ಆಡದ ಸ್ಟಾರ್ಸ್‌

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಮಂಚಕತೆ ಹೆಚ್ಚತಲೇ ಇದೆ. ಹಲವು ತಂಡಗಳು ಇನ್ನು ಪ್ಲೇ ಆಫ್‌ ರೇಸ್‌ನ್ಲಿ ಜೀವಂತವಾಗಿವೆ. ಆದರೆ ಕೆಲವು ತಂಡಗಳು ಲೀಗ್ ಹಂತದಲ್ಲೇ ಗುಡ್ ಬೈ ಹೇಳಲಿವೆ. ಈ ವೇಳೆ ಕ್ರಿಕೆಟ್‌ ಅಭಿಮಾನಿಗಳು ಭರ್ಜರಿ ಪಂದ್ಯಗಳನ್ನು ನೋಡಿ ಖುಷಿ ಪಟ್ಟಿದ್ದಾರೆ. ಆದರೆ ಕೆಲವು ಸ್ಟಾರ್ ಆಟಗಾರರು ಮೈದಾನಕ್ಕೆ ಇಳಿಯದೇ ಇರುವುದು ನಿಜಕ್ಕೂ ನಿರಾಸೆ ಮೂಡಿಸಿದೆ. ಲೀಗ್‌ನಲ್ಲಿ ತಮ್ಮದೇ ಅಭಿಮಾನಿಗಳ ಬಳಗವನ್ನು ಹೊಂದಿರುವ ಸ್ಟಾರ್ ಆಟಗಾರರು ಈ ವರೆಗೆ ಒಂದೇ ಒಂದು ಪಂದ್ಯವನ್ನು ಆಡದೆ ನಿರಾಸೆಯನ್ನು ಅನುಭವಿಸಿದ್ದಾರೆ. ತಮ್ಮ ನೆಚ್ಚಿನ ಆಟಗಾರ ಮೈದಾನದಿಂದ ದೂರ ಉಳಿದ ದೃಶ್ಯಗಳು ಅಭಿಮಾನಿಗಳಿಗೆ ಬೇಸರ ತಂದಿದೆ.

ಚೆನ್ನೈ ತಂಡದ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಈ ವರೆಗೆ ಲೀಗ್‌ನಲ್ಲಿ ಒಂದೇ ಒಂದು ಪಂದ್ಯದಲ್ಲೂ ಮೈದಾನವನ್ನು ಪ್ರವೇಶಿಸಿಲ್ಲ. ಆರಂಭದಲ್ಲಿ ಕೆಲವು ಪಂದ್ಯಗಳಿಂದ ಧೋನಿ ಹೊರಗುಳಿಯಲಿದ್ದಾರೆ ಎಂಬ ಮಾಹಿತಿಯನ್ನು ಟೀಮ್ ಮ್ಯಾನೇಜ್ಮೆಂಟ್ ಆರಂಭದಲ್ಲಿ ನೀಡಿತ್ತು. ಆದರೆ ಶುಕ್ರವಾರದ ವರೆಗೂ ಧೋನಿ ಮೈದಾನಕ್ಕೆ ಇಳಿಯದೇ ಇರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

IPL 2026

ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಪೃಥ್ವಿ ಶಾ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈ ಬಾರಿ ಇನ್ನು ಅವರಿಗೆ ಒಂದೇ ಒಂದು ಅವಕಾಶ ಲಭಿಸಿಲ್ಲ. ಮೊದಲು ಇವರು ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬ ಬಲ್ಲ ಆಟಗಾರ ಎಂದೇ ಭಾವಿಸಲಾಗಿತ್ತು. ಆದರೆ ಈಗ ಇವರು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇವರಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಿಲ್ಲ.

ಇಶಾಂತ್ ಶರ್ಮಾ

ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್‌ ಇಶಾಂತ್ ಶರ್ಮಾ ಗುಜರಾತ್ ಟೈಟಾನ್ಸ್ ತಂಡ ಭಾಗವಾಗಿದ್ದಾರೆ. 37 ವರ್ಷ ಇಶಾಂತ್‌ ಐಪಿಎಲ್‌ನಲ್ಲಿ ಒಟ್ಟಾರೆ 117 ಪಂದ್ಯಗಳನ್ನು ಆಡಿದ್ದು 96 ವಿಕೆಟ್‌ ಪಡೆದ ಸಾಧನೆಯನ್ನು ಮಾಡಿದ್ದಾರೆ. ಅದರೂ ಇವರಿಗೆ ಗುಜರಾತ್ ಪರ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿಲ್ಲ.

ಮತಿಶ ಪತಿರಾಣ

ಡೆತ್ ಓವರ್‌ಗಳಲ್ಲಿ ಮಾರಕ ಬೌಲಿಂಗ್ ಮಾಡುವ ಕ್ಷಮತೆಯನ್ನು ಹೊಂದಿರುವ ಶ್ರೀಲಂಕಾದ ವೇಗದ ಬೌಲರ್ ಮತಿಶ ಪತಿರಾಣ ಗಾಯದ ಸಮಸ್ಯೆಯಿಂದ ಈ ವರೆಗೆ ಮೈದಾನಕ್ಕೆ ಇಳಿದಿಲ್ಲ. ಕಳೆದ ಋತುವಿನಲ್ಲಿ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿದ್ದ ಇವರಿಗೆ ಕೆಕೆಆರ್‌ ಫಿಟ್ ಅದ ಬಳಿಕವೂ ತಂಡದಲ್ಲಿ ಸ್ಥಾನ ನೀಡಿಲ್ಲ.

ರಚಿನ್ ರವೀಂದ್ರ

ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ರಚಿನ್ ರವೀಂದ್ರ ಸಹ ಈ ಬಾರಿ ಇನ್ನುವರೆಗೂ ಮೈದಾನಕ್ಕೆ ಇಳಿದಿಲ್ಲ. ಆದರೆ ಈ ಬಾರಿ ಅವರು ಬೆಂಚ್ ಕಾಯ್ದಿದ್ದಾರೆ. ಕೆಕೆಆರ್‌ ತಂಡದಲ್ಲಿ ವಿದೇಶಿ ಆಟಗಾರರು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದು ಇವರಿಗೆ ಸ್ಥಾನ ಸಿಗುವುದು ಕಷ್ಟವಾಗಿದೆ.

Story first published: Friday, May 15, 2026, 19:31 [IST]
Other articles published on May 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+