Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: RCB ಮುಂಬೈ ವಿರುದ್ಧ ಗೆಲ್ಲಲು ಕಾರಣವಾಗಿದ್ದು ಆ ಒಂದು ಜೊತೆಯಾಟ

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಜತ್ ಪಾಟಿದಾರ್ ಪಡೆ 23 ರನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದೆ. ಈ ಮೂಲಕ ಲೀಗ್‌ನಲ್ಲಿ ಮೂರನೇ ಜಯ ಸಾಧಿಸಿದ್ದು, ಮೂರನೇ ಸ್ಥಾನ ಪಡೆದಿದೆ. ಈ ಪಂದ್ಯವನ್ನು ಆರ್‌ಸಿಬಿ ಗೆಲ್ಲುವಲ್ಲಿ ಹಲವು ಪ್ರಮುಖ ಅಂಶಗಳು ಕಾಣುತ್ತವೆ. ಆದರೆ ಆ ಒಂದು ಕಾರಣದಿಂದ ಮುಂಬೈ ಇಂಡಿಯನ್ಸ್ ಗೆಲುವಿನ ಆಸೆಗೆ ಪೆಟ್ಟು ಬಿದ್ದಿದೆ.

ಆರ್‌ಸಿಬಿ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡಕ್ಕೆ ಮೊದಲ ಪೆಟ್ಟು ಬಿದ್ದಿದ್ದು ರೋಹಿತ್ ಶರ್ಮಾ ಹೊರನಡೆದಾಗ. ನಿಜಕ್ಕೂ ಮುಂಬೈ ತಂಡಕ್ಕೆ ಇದು ದೊಡ್ಡ ಪೆಟ್ಟು ನೀಡಿದಂತೆ ಆಯಿತು. ಇನ್ನು ಆರಂಭಿಕ ಆಟಗಾರ ರಯಾನ್ ರಿಕಲ್ಟನ್ 37 ರನ್‌ಗಳ ಇನಿಂಗ್ಸ್‌ನ್ನು ದೊಡ್ಡ ಇನಿಂಗ್ಸ್‌ ಆಗಿ ಕನ್ವರ್ಟ್ ಮಾಡುವಲ್ಲಿ ವಿಫಲವಾಗಿದ್ದು ಮುಂಬೈ ತಂಡಕ್ಕೆ ದೊಡ್ಡ ಪೆಟ್ಟು ನೀಡಿತು.

IPL 2026

ಭರವಸೆಯ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ನೈಜ ಆಟವನ್ನು ಆಡುತ್ತಿದ್ದಾಗ ಕೃನಾಲ್‌ ಪಾಂಡ್ಯ ಅವರ ನೆಚ್ಚಿನ ಶಾಟ್ ಪ್ರಯೋಗಿಸಲು ಆಮಿಷ ಒಡ್ಡಿದರು. ಲೆಗ್‌ ಸ್ಟಂಪ್‌ ಮೇಲೆ ಲೆಂತ್ ಇಟ್ಟುಕೊಂಡು ಹಾಕಿದ್ದ ಎಸೆತವನ್ನು ಕಂಡು ಸೂರ್ಯ ಕಣ್ಣುಗಳು ಅರಳಿದವು. ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್‌ ಲೆಗ್‌ನಲ್ಲಿ ಸಿಕ್ಸರ್ ಬಾರಿಸಲು ಮುಂದಾದರು. ಕೃನಾಲ್ ಪಾಂಡ್ಯ ಅಲ್ಲಿ ಫೀಲ್ಡರ್ ಇಟ್ಟುಕೊಂಡಿದ್ದರು. ಪರಿಣಾಮ ಸೂರ್ಯ ನಿರಾಸೆ ಅನುಭವಿಸಿದರು. ಇದು ಸಹ ಮುಂಬೈ ತಂಡಕ್ಕೆ ದೊಡ್ಡ ಪೆಟ್ಟು ನೀಡಿತು.

ಆರ್‌ಸಿಬಿ ಪಂದ್ಯ ಗೆಲ್ಲಲು ಕಾರಣವಾಗಿದ್ದು ಇದೇ ಅಂಶ

ಮುಂಬೈ ತಂಡದ ಗೆಲುವಿನ ಆಸೆಗೆ ಪೆಟ್ಟು ನೀಡಿದ್ದ ಇನ್ನೊಂದು ಅಂಶ ರನ್‌ ರೇಟ್‌. ಆರ್‌ಸಿಬಿ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನಟ್ಟುವಾಗ ಮುಂಬೈ ತಂಡ ರನ್‌ ರೇಟ್‌ ಹಿಗ್ಗಿಸಲು ಹೋಗಿ ವಿಕೆಟ್‌ ಗಳನ್ನು ನೀಡಿತು. ಇದು ಮುಂಬೈ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದು. ಆದರೆ ಈ ಎಲ್ಲದಕ್ಕೂ ವೇದಿಕೆ ಕಲ್ಪಿಸಿದ್ದು ಆರ್‌ಸಿಬಿ ಬ್ಯಾಟಿಂಗ್.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಫಿಲ್ ಸಾಲ್ಟ್ ಮೈಚಳಿ ಬಿಟ್ಟು ಬ್ಯಾಟ್ ಮಾಡಿದರು. ಇವರು 36 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಾಯದಿಂದ 78 ರನ್‌ ಬಾರಿಸಿದರು. ವಿರಾಟ್ ಕೊಹ್ಲಿ ಸಹ 50 ರನ್ ಬಾರಿಸಿ ತಂಡಕ್ಕೆ ನೆರವಾದರು. ಈ ಜೋಡಿ 10.5 ಓವರ್‌ಗಳಲ್ಲಿ 120 ರನ್‌ ಸೇರಿಸಿದ್ದು, ತಂಡದ ಆತ್ಮವಿಶ್ವಾಸವನ್ನೇ ಹೆಚ್ಚಿಸಿತು. ಅಲ್ಲದೆ ಮುಂದೆ ಬರುವ ಬ್ಯಾಟರ್‌ಗಳ ಮೇಲಿನ ಹೊರೆಯನ್ನು ಕೊಂಚ ಕಡಿಮೆ ಮಾಡಿತು. ಪರಿಣಾಮ ನಂತರ ಬಂದ ಬ್ಯಾಟರ್‌ಗಳು ಬಿರುಸಿನ ಬ್ಯಾಟಿಂಗ್ ಮಾಡಲು ಅಡಿಪಾಯ ಹಾಕಿಕೊಟ್ಟಿತು. ನಿಜಕ್ಕೂ ಇದುವೇ ಆರ್‌ಸಿಬಿ ತಂಡ ಪಂದ್ಯ ಗೆಲ್ಲಲು ಪ್ರಮುಖ ಕಾರಣವಾಯಿತು.

Story first published: Monday, April 13, 2026, 6:15 [IST]
Other articles published on Apr 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+