Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ವೈಭವ್ ಸೂರ್ಯವಂಶಿಯಿಂದ ಪ್ರಿನ್ಸ್‌ ಯಾದವ್ ವರೆಗೆ ಗಮನ ಸೆಳೆದ ಟಾಪ್‌ 5 ಅನ್‌ಕ್ಯಾಪ್ಡ್ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಮುಕ್ತಾಯವಾಗಿದೆ. ಈ ಲೀಗ್‌ನಲ್ಲಿ ಭರವಸೆಯ ಆಟಗಾರರು ಮನಮೋಹಕ ಪ್ರದರ್ಶನ ನೀಡಿದ್ದಾರೆ. ಇನ್ನು ಯುವ ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದ್ದಾರೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಯುವ ಆಟಗಾರರ ಬಗ್ಗೆ ಟಾಪ್ 5 ಆಟಗಾರರ ವಿವರ ಇಲ್ಲಿದೆ.

19ನೇ ಆವೃತ್ತಿಯಲ್ಲಿ ಯುವ ಆಟಗಾರರ ಆಟ ಮನಮೋಹಕವಾಗಿತ್ತು. ಈ ಲೀಗ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಮ್ಮ ಸ್ಥಿರ ಪ್ರದರ್ಶನ ನೀಡಿದ ಆಟಗಾರರು ತಂಡಕ್ಕೆ ಆಧಾರವಾಗಿದ್ದಾರೆ. ಈ ಬಾರಿ ಗಮನ ಸೆಳೆದ ಟಾಪ್‌ 5 ಆಟಗಾರರ ಪಟ್ಟಿ ಇಲ್ಲಿದೆ.

IPL 2026

ವೈಭವ್ ಸೂರ್ಯವಂಶಿ

ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್ಭಟಿಸಿದ್ದಾರೆ. ಇವರು ಆಡಿದ 16 ಪಂದ್ಯಗಳಲ್ಲಿ 237.31ರ ಸ್ಟ್ರೈಕ್‌ ರೇಟ್‌ನಲ್ಲಿ 776 ರನ್‌ ಕಲೆ ಹಾಕಿದ್ದಾರೆ. ಇವರ ಸರಾಸರಿ 48.50 ಆಗಿದೆ. ವೈಭವ್ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು 72 ಸಿಕ್ಸರ್ ಬಾರಿಸಿದ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

ಸಕೀಬ್‌ ಹುಸೇನ್‌

21 ವರ್ಷದ ಬಿಹಾರ ವೇಗದ ಬೌಲರ್‌ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಕಣಕ್ಕೆ ಇಳಿದು ಮಿಂಚು ಹರಿಸಿದ್ದಾರೆ. ಇವರು ತಮ್ಮ ಸ್ಲೋವರ್ ಒನ್ ಎಸೆತಗಳ ಮೂಲಕ ಎದುರಾಳಿಗಳನ್ನು ಕಾಡಿದ್ದಾರೆ. ಇವರು ಆಡಿದ 11 ಪಂದ್ಯಗಳಲ್ಲಿ 9.45 ಎಕಾನಮಿಯೊಂದಿಗೆ 15 ವಿಕೆಟ್‌ ಕಬಳಿಸಿದ್ದಾರೆ. ಇವರು ಬೌಲಿಂಗ್‌ನಲ್ಲಿ ಮಿಶ್ರಣವನ್ನು ಹೊಂದಿದ್ದಾರೆ. ಇದರಿಂದಾಗಿ ಸ್ಟಾರ್ ಬ್ಯಾಟರ್‌ಗಳು ಸಹ ರನ್‌ ಕಲೆ ಹಾಕಲು ಪರದಾಟ ನಡೆಸಿದ್ದಾರೆ. ಡೆತ್‌ ಓವರ್‌ಗಳಲ್ಲಿ ತಂಡಕ್ಕೆ ಆಧಾರವಾಗಬಲ್ಲ ಕ್ಷಮತೆ ಇವರದ್ದಾಗಿದೆ.

ಪ್ರಭ್‌ಸಿಮ್ರನ್‌ ಸಿಂಗ್‌

ಪಂಜಾಬ್‌ ಕಿಂಗ್ಸ್ ತಂಡದ ವಿಕೆಟ್‌ ಕೀಪರ್‌ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನದಿಂದ ಹೆಸರು ಮಾಡಿದ ಆಟಗಾರ. ಇವರು ಆಡಿದ 14 ಪಂದ್ಯಗಳಲ್ಲಿ 510 ರನ್‌ ಸಿಡಿಸಿದ್ದು, 42.50ರ ಸರಾಸರಿಯಲ್ಲಿ ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿವೆ. ಇವರು ತಂಡಕ್ಕೆ ಬಿರುಸಿನ ಆರಂಭ ನೀಡಿ ಗಮನ ಸೆಳೆದಿದ್ದಾರೆ.

ಪ್ರಿನ್ಸ್‌ ಯಾದವ್

ಲಕ್ನೋ ಸೂಪರ್‌ ಜೈಂಟ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೆ ಉತ್ತರ ಪ್ರದೇಶದ 29 ವರ್ಷದ ಪ್ರಿನ್ಸ್‌ ಯಾದವ್ ತನ್ನ ಮೊನಚಾದ ದಾಳಿಯಿಂದ ಆರ್ಭಟಿಸಿದ್ದಾರೆ. ಇವರು ಆಡಿದ 14 ಪಂದ್ಯಗಳಲ್ಲಿ 8.83ರ ಎಕಾನಮಿಯಲ್ಲಿ 16 ವಿಕೆಟ್‌ ಪಡೆದಿದ್ದಾರೆ. ಇವರು ಸ್ವಿಂಗ್ ಹಾಗೂ ಯಾರ್ಕರ್‌ಗಳನ್ನು ಎಸೆಯುವಲ್ಲಿ ನಿಸ್ಸೀಮರು. ಇವರ ಸ್ಥಿರ ಪ್ರದರ್ಶನದ ಫಲವಾಗಿ ಇವರಿಗೆ ಟೀಮ್ ಇಂಡಿಯಾದಿಂದ ಬುಲಾವ್ ಸಹ ಬಂದಿದೆ.

IPL 2026

ರಸಿಕ್‌ ಸಲಾಂ ದಾರ್‌

ಜಮ್ಮು ಕಾಶ್ಮೀರ್ ತಂಡದ ಬಲಗೈ ವೇಗದ ಬೌಲರ್‌ ರಸಿಕ್ ಸಲಾಂ ದಾರ್ ಆರ್‌ಸಿಬಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಬೌಲರ್‌. ಇವರು ಪಂದ್ಯದ ಯಾವುದೇ ಹಂತದಲ್ಲಾದರೂ ಬೌಲಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ. ಇವರು ಈ ಆವೃತ್ತಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 9.45ರ ಎಕಾನಮಿಯಲ್ಲಿ 19 ವಿಕೆಟ್‌ ಕಬಳಿಸಿದ್ದಾರೆ.

Story first published: Thursday, June 4, 2026, 9:10 [IST]
Other articles published on Jun 4, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+