Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಚೆನ್ನೈ ಗೆಲುವಿಗೆ 156 ರನ್‌ ಗುರಿ ನೀಡಿದ ಕ್ಯಾಪಿಟಲ್ಸ್‌

ನವದೆಹಲಿ: ಭರವಸೆಯ ಬ್ಯಾಟರ್ ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಸಮೀರ್ ರಿಜ್ವಿ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 156 ರನ್‌ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನೀಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಪತುಮ್ ನಿಸ್ಸಂಕಾ ಹಾಗೂ ಕೆಎಲ್ ರಾಹುಲ್ ಜೋಡಿ 4 ಓವರ್‌ಗಳಲ್ಲಿ 29 ರನ್‌ಗಳ ಜೊತೆಯಾಟವನ್ನು ನೀಡಿತು. ಈ ಹಂತದಲ್ಲಿ 19 ರನ್ ಬಾರಿಸಿದ್ದ ಪತುಮ್ ನಿಸ್ಸಂಕಾ ಮುಕುಲ್ ಚೌಧರಿ ಅವರು ಎಸೆದ ಗುಡ್ ಲೆಂತ್ ಎಸೆತದಲ್ಲಿ ಮಿಡ್‌ ಆನ್‌ನಲ್ಲಿ ಡೆವಾಲ್ಡ್ ಬ್ರೇವಿಸ್‌ಗೆ ವಿಕೆಟ್‌ ಒಪ್ಪಿಸಿದರು.

IPL 2026

2 ಬೌಂಡರಿ ಬಾರಿಸಿ 12 ರನ್‌ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಅಕೀಲ್‌ ಹುಸೇನ್‌ ಎಸೆತದಲ್ಲಿ ರುತುರಾಜ್‌ ಗಾಯಕ್ವಾಡ್‌ ಅವರಿಗೆ ಕ್ಯಾಚ್ ನೀಡಿದರು. ಈ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮೊತ್ತ 36 ರನ್ ಆಗಿತ್ತು. ಆದರೆ ನಿತೀಶ್‌ ರಾಣಾ ಹಾಗೂ ಕರುಣ್ ನಾಯರ್ ಪವರ್‌ ಪ್ಲೇನಲ್ಲಿ ವಿಕೆಟ್‌ ಕಳೆದುಕೊಳ್ಳದಂತೆ ಬ್ಯಾಟ್ ಮಾಡಿದರು. ಡೆಲ್ಲಿ ಪವರ್ ಪ್ಲೇನಲ್ಲಿ 2 ವಿಕೆಟ್‌ ನಷ್ಟಕ್ಕೆ 37 ರನ್‌ ಸೇರಿಸಿತು.

ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳುವಲ್ಲಿ ಅನುಭವಿ ಬ್ಯಾಟರ್‌ ಕರುಣ್ ನಾಯರ್ ವಿಫಲರಾದರು. ಇವರು 13 ಎಸೆತಗಳಲ್ಲಿ 13 ರನ್‌ ಸಿಡಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ನೂರ್ ಅಹ್ಮದ್‌ಗೆ ವಿಕೆಟ್‌ ಒಪ್ಪಿಸಿದರು. ಕೆಲ ಪಂದ್ಯಗಳಿಂದ ಡೆಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಜೀವ ತುಂಬಿದ್ದ ನಿತೀಶ್‌ ರಾಣಾ ಅವರ ಆಟ ಸಹ 15 ರನ್‌ಗಳಿಗೆ ಕೊನೆಯಾಯಿತು. ನಾಯಕ ಅಕ್ಷರ್ ಪಟೇಲ್‌ (2 ರನ್) ಸಹ ಗುರ್ಜಪ್ನೀತ್ ಸಿಂಗ್ ಅವರ ಔಟ್ ಸೈಡ್ ಆಫ್ ಸ್ಟಂಪ್‌ ಎಸೆತವನ್ನು ಕೆಣಕಿ ಕವರ್‌ನಲ್ಲಿದ್ದ ಅಕೀಲ್‌ ಹುಸೆನ್‌ಗೆ ಕ್ಯಾಚ್ ನೀಡಿದರು.

65 ರನ್‌ ಜೊತೆಯಾಟ

ಆರನೇ ವಿಕೆಟ್‌ಗೆ ಭರವಸೆಯ ಆಟಗಾರ ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಇಂಪ್ಯಾಕ್ಟ್ ಪ್ಲೇಯರ್‌ ರೂಪದಲ್ಲಿ ಆಡುವ ಅವಕಾಶ ಪಡೆದ ಸಮೀರ್ ರಿಜ್ವಿ ತಂಡಕ್ಕೆ ಕೊಂಚ ಆಧಾರವಾಯಿತು. 69 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾದರು. ಈ ಜೋಡಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಈ ಜೋಡಿ 47 ಎಸೆತಗಳಲ್ಲಿ 65 ರನ್‌ ಸೇರಿಸಿತು. ಈ ಹಂತದಲ್ಲಿ 1 ಬೌಂಡರಿ, 2 ಸಿಕ್ಸರ್ ಬಾರಿಸಿದ್ದ ಟ್ರಿಸ್ಟನ್ ಸ್ಟಬ್ಸ್‌ 38 ರನ್‌ ಬಾರಿಸಿ ಔಟ್ ಆದರು.

IPL 2026

ಇಂಪ್ಯಾಕ್ಟ್‌ ಪ್ಲೇಯರ್ ಸಮೀರ್ ರಿಜ್ವಿ 24 ಎಸೆತಗಳಲ್ಲಿ 4 ಸಿಕ್ಸರ್ ಸಹಾಯದಿಂದ ಅಜೇಯ 40 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಆಶುತೋಷ್ ಶರ್ಮಾ ಅಜೇಯ 14 ರನ್‌ ಬಾರಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155 ರನ್‌ ಸಿಡಿಸಿತು. ಚೆನ್ನೈ ಪರ ನೂರ್ ಅಹ್ಮದ್‌ 22 ರನ್‌ಗೆ 2 ವಿಕೆಟ್‌ ಪಡೆದರು.

Story first published: Tuesday, May 5, 2026, 21:18 [IST]
Other articles published on May 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+