For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ಅಕಿಬ್ ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್‌ 2026ರ ಹರಾಜಿನಲ್ಲಿ ಅನ್‌ಕ್ಯಾಪ್ಡ್‌ ಭಾರತೀಯ ಆಟಗಾರರು ಫ್ರಾಂಚೈಸಿಗಳ ಚಿತ್ತ ಕದಿಯುವಲ್ಲಿ ಸಫಲರಾಗಿದ್ದಾರೆ. ಈ ಬಾರಿ ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರರಿಗೆ ಮಾಲೀಕರು ಹಣವನ್ನು ಹೂಡಿದ್ದಾರೆ. ಮೂಲ ಬೆಲೆಗಿಂತ ಅತಿ ಹೆಚ್ಚು ಹಣವನ್ನು ಪಡೆದು ಅಬ್ಬರಿಸಿರುವ ದೇಶೀಯ ಆಟಗಾರರ ಪಟ್ಟಿಯಲ್ಲಿ ಹಲವು ಯುವ ಆಟಗಾರರು ಇದ್ದಾರೆ. ಇದರಲ್ಲಿ ಜಮ್ಮು-ಕಾಶ್ಮೀರ್‌ದ ಅಕೀಬ್‌ ನಬಿ ದಾರ್‌ ಅವರು ಸೇರಿಕೊಂಡಿದ್ದಾರೆ. ಹಾಗಿದ್ದರೆ ಅಕೀಬ್ ದಾರ್ ಯಾರು?

ಪ್ರಸಕ್ತ ಸಾಲಿನ ದೇಶೀಯ ಟೂರ್ನಿಗಳಲ್ಲಿ ಇವರು ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ತಮ್ಮ ವೇಗದ ಬೌಲಿಂಗ್ ಮೂಲಕ ಮಿಂಚಿದ ಆಟಗಾರ. ಇವರು ಚೆಂಡನ್ನು ಸ್ವಿಂಗ್‌ ಮಾಡಲು ಹೆಸರುವಾಸಿ. ಇವರಿಗೆ ಹರಾಜಿನಲ್ಲಿ ಮಾಲೀಕರು ದೊಡ್ಡ ಮೊತ್ತವನ್ನು ನೀಡುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಊಹೆಗೂ ಮೀರಿದ ಮೊತ್ತ ಇವರ ಜೇಬು ಸೇರಿದೆ. ಇವರನ್ನು ಸೇರಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ 8.40 ಕೋಟಿ ರೂ. ನೀಡಿದೆ.

IPL 2026 Uncapped Pacer Aaqib Dar joins Delhi Capitals for 8 40 Cr after Domestic Heroics

ದೇಶೀಯ ಟೂರ್ನಿಯಲ್ಲಿ ಸದ್ದು ಮಾಡಿರುವ ಜಮ್ಮು ತಂಡದ ಆಟಗಾರ ಅಕೀಬ್‌ ದಾರ್‌, ಸೈಯದ್ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅಬ್ಬರಿಸಿರುವ ಪ್ರತಿಭೆ. ಇವರು ಆಡಿರುವ 7 ಪಂದ್ಯಗಳಲ್ಲಿ 13.26ರ ಸರಾಸರಿಯಲ್ಲಿ 15 ವಿಕೆಟ್‌ ಕಬಳಿಸಿದ್ದಾರೆ. ಇನ್ನು ದುಲೀಪ್‌ ಟ್ರೋಫಿಯಲ್ಲಿ ಅಕೀಬ್‌ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಆಟಗಾರ. ಉತ್ತರ ವಲಯವನ್ನು ಪ್ರತಿನಿಧಿಸಿರುವ ಅಕೀಬ್‌ ಆಡಿದ 2 ಪಂದ್ಯಗಳಲ್ಲಿ 6 ವಿಕೆಟ್‌ ಪಡೆದಿದ್ದಾರೆ.

ದೇಶೀಯ ಟೂರ್ನಿಯಲ್ಲಿ ಅಬ್ಬರ

29 ವರ್ಷದ ಜಮ್ಮು ವೇಗಿ ಕಳೆದ ಬಾರಿಯ ರಣಜಿ ಟ್ರೋಫಿಯಲ್ಲೂ ಸದ್ದು ಮಾಡಿದ ಆಟಗಾರ. ಇವರು ಕಳೆದ ವರ್ಷ ಆಡಿದ 15 ಇನಿಂಗ್ಸ್‌ಗಳಲ್ಲಿ 13.93ರ ಸರಾಸರಿಯಲ್ಲಿ 44 ವಿಕೆಟ್‌ ಕಬಳಿಸಿದ್ದಾರೆ. ಈ ಮೂಲಕ 2024-25ನೇ ಸಾಲಿನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ. ಇವರ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ. ಇವರು ಈ ಬಾರಿ ಐಪಿಎಲ್‌ 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ. ಹೊಸ ಚೆಂಡಿನಲ್ಲಿ ಇವರು ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕುವ ಕ್ಷಮತೆಯನ್ನು ಹೊಂದಿದ್ದಾರೆ. ಪವರ್‌ ಪ್ಲೇನಲ್ಲಿ ಇವರು ಮಾರಕವಾಗುವ ಸಾಧ್ಯತೆ ಇದೆ.

Story first published: Tuesday, December 16, 2025, 19:00 [IST]
Other articles published on Dec 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+