IPL 2026: ಆರೆಂಜ್ ಕ್ಯಾಪ್‌ಗಾಗಿ ಅನುಭವಿ ಹಾಗೂ ಯುವ ಆಟಗಾರರ ನಡುವೆ ಫೈಟ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಎಲ್ಲ ತಂಡಗಳು ಸ್ಥಿರ ಪ್ರದರ್ಶನ ನೀಡುತ್ತಿವೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸುತ್ತಿದೆ. ಅಲ್ಲದೆ ಟ್ರೋಫಿ ಉಳಿಸಿಕೊಳ್ಳುವ ಅಭಿಯಾನವನ್ನು ಆರ್‌ಸಿಬಿ ಭರ್ಜರಿಯಾಗಿ ಆರಂಭಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಗೆಲುವು ದಾಖಲಿಸಿದೆ. ಈಗ ಆರೆಂಜ್, ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಯಾರು ಮುಂಚೂಣಿಯಲ್ಲಿದ್ದಾರೆ ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಈ ಬಾರಿಯ ಆರೆಂಜ್ ಕ್ಯಾಪ್‌ಗಾಗಿ ಯುವ ಹಾಗೂ ಅನುಭವಿ ಬ್ಯಾಟರ್‌ಗಳ ನಡುವೆ ಜಿದ್ದಾಜಿದ್ದಿನ ಕಾಳಗ ನಡೆಯುತ್ತಿದೆ.
ಸದ್ಯ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಮುಂಚೂಣಿಯಲ್ಲಿದ್ದಾರೆ. ಇವರು ಆಡಿದ 4 ಪಂದ್ಯಗಳಲ್ಲಿ 266ರ ಸರಾಸರಿಯಲ್ಲಿ 200 ರನ್ ಕಲೆ ಹಾಕಿದ್ದಾರೆ. ಈ ವೇಳೆ ವೈಭವ್ ಬ್ಯಾಟ್‌ನಿಂದ 18 ಬೌಂಡರಿ, 18 ಸಿಕ್ಸರ್ ಹರಿದು ಬಂದಿವೆ. ಇದೇ ಪಟ್ಟಿಯ ಎರಡನೇ ಸ್ಥಾನದಲ್ಲಿ ಆರ್‌ಸಿಬಿ ಬ್ಯಾಟರ್ ಇದ್ದಾರೆ.

ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರು ಆಡಿದ 4 ಪಂದ್ಯಗಳಲ್ಲಿ 65ರ ಸರಾಸರಿಯಲ್ಲಿ 195 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 2 ಅರ್ಧಶತಕವು ಸೇರಿವೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಹೆನ್ರಿಕ್ ಕ್ಲಾಸೆನ್ ಇದ್ದಾರೆ. ಇವರು 4 ಪಂದ್ಯಗಳಲ್ಲಿ 184 ರನ್ ಸಿಡಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇದ್ದಾರೆ. ಇವರು 4 ಪಂದ್ಯಗಳಲ್ಲಿ 183 ರನ್ ಬಾರಿಸಿದ್ದಾರೆ. ಈ ಪಟ್ಟಿಯ ಐದನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು, ಇವರು 4 ಪಂದ್ಯಗಳಲ್ಲಿ 179 ರನ್ ಬಾರಿಸಿದ್ದಾರೆ.
ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುವ ಪ್ರಸಿದ್ಧ್ ಕೃಷ್ಣ ಸದ್ಯ ಅಗ್ರಸ್ಥಾನದಲ್ಲಿದ್ದಾರೆ. ಇವರು ಆಡಿದ 4 ಪಂದ್ಯಗಳಲ್ಲಿ 10 ವಿಕೆಟ್ ಪಡೆದು ಮಿಂಚಿದ್ದಾರೆ. ಇವರು ಒಮ್ಮೆ ಪಂದ್ಯದಲ್ಲಿ 4 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ರವಿ ಬಿಷ್ಣೋಯಿ ಇದ್ದಾರೆ. ಇವರು 9 ವಿಕೆಟ್ ಕಬಳಿಸಿದ್ದಾರೆ. ಈ ಪಟ್ಟಿಯ ಮೂರನೇ ಸ್ಥಾನದಲ್ಲಿ ಅಂಶುಲ್ ಕಂಬೋಜ್ ಇದ್ದಾರೆ. ಇವರು 4 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ಪ್ರಿನ್ಸ್ ಯಾದವ್ ಇದ್ದು ಇವರು 6 ವಿಕೆಟ್ ಹೊಂದಿದ್ದಾರೆ. ಆರ್‌ಸಿಬಿ ತಂಡದ ವೇಗದ ಬೌಲರ್ ಜೇಕಬ್ ಡಫಿ ಆಡಿದ 3 ಪಂದ್ಯಗಳಲ್ಲಿ 6 ವಿಕೆಟ್ ಉರುಳಿಸಿದ್ದಾರೆ.
ಅಂಕ ಪಟ್ಟಿಯಲ್ಲಿ ಯಾರಿಗೆ ಅಗ್ರಸ್ಥಾನ
ಅಂಕ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಆಡಿದ 4 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನವನ್ನು ಪಡೆದಿದೆ. ಎರಡನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್, ಮೂರನೇ ಸ್ಥಾನದಲ್ಲಿ ಆರ್‌ಸಿಬಿ, ನಾಲ್ಕನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications