IPL 2026: ರಜತ್ ಪಾಟೀದಾರ್ ಮಾಸ್ಟರ್ ಸ್ಟ್ರೋಕ್‌ಗೆ ವಿರಾಟ್ ಕೊಹ್ಲಿ ಸ್ಟನ್: ವೈರಲ್ ವಿಡಿಯೋ
ಧರ್ಮಶಾಲಾದ ಎಚ್‌ಪಿಸಿಎ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟನ್ಸ್ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿ ಮಿಂಚಿದರು. ಅವರ ಈ ಸ್ಫೋಟಕ ಇನಿಂ ಗ್ಸ್‌ನಿಂದಾಗಿ, ಆರ್‌ಸಿಬಿ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ದಾಖಲಿಸಿತು.
ಪಾಟೀದಾರ್ ಸಿಡಿಸಿದ ಒಂದು ಭರ್ಜರಿ ಸಿಕ್ಸರ್ ವಿರಾಟ್ ಕೊಹ್ಲಿ ಸೇರಿದಂತೆ ಸ್ಟೇಡಿಯಂನಲ್ಲಿದ್ದ ಎಲ್ಲರನ್ನೂ ಅಚ್ಚರಿಗೊಳಿಸಿತು. 17ನೇ ಓವರ್‌ನ ಮೂರನೇ ಎಸೆತದಲ್ಲಿ ಕೌ ಕಾರ್ನರ್ ಮೇಲೆ ಸಿಕ್ಸರ್ ಬಾರಿಸಿ ಅರ್ಧಶತಕ ಪೂರೈಸಿದರು.

ರಜತ್ ಪಾಟೀದಾರ್ ಅವರು ತಮ್ಮ ವಿಶ್ವರೂಪವನ್ನು ತೋರಿಸಲು ಸಿದ್ಧರಾಗಿದ್ದರು. ಇದೇ ಓವರ್‌ನ ನಾಲ್ಕನೇ ಎಸೆತ ಆಫ್-ಸ್ಟಂಪ್ ಹೊರಗಿತ್ತು. ಗುಡ್ ಲೆಂಗ್ತ್ ಎಸೆತವನ್ನು ಪಾಟೀದಾರ್ ಬ್ಯಾಕ್‌ಫೂಟ್‌ನಿಂದ ಕವರ್ಸ್ ಮೇಲಿಂದ ಸಿಕ್ಸರ್ ಬಾರಿಸಿದರು. ಈ ಅಮೋಘ ಶಾಟ್ ಕಂಡು ವೀಕ್ಷಕ ವಿವರಣೆ ಮಾಡುತ್ತಿದ್ದ ರವಿಶಾಸ್ತ್ರಿ ಆಶ್ಚರ್ಯಚಕಿತರಾದರು. ಅಲ್ಲದೆ, ಈ ಸಿಕ್ಸರ್ ಅನ್ನು "ಈ ಪಂದ್ಯದ ಇದುವರೆಗಿನ ಅತ್ಯುತ್ತಮ ಶಾಟ್" ಎಂದು ಬಣ್ಣಿಸಿದರು. ಈ ಅದ್ಭುತ ಸಿಕ್ಸರ್ ನಂತರ ವಿರಾಟ್ ಕೊಹ್ಲಿ ನೀಡಿದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿರಾಟ್ ಈ ಸಿಕ್ಸರ್ ಕಂಡು ಅಚ್ಚರಿ ವ್ಯಕ್ತ ಪಡಿಸಿದರು.
ರಜತ್ ಪಾಟೀದಾರ್ ದಾಖಲೆ
ಈ ಪಂದ್ಯದಲ್ಲಿ ರಜತ್ ಪಾಟೀದಾರ್ ಕೇವಲ 21 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದು, ಇದು ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಜಂಟಿ ಮೂರನೇ ಅತಿ ವೇಗದ ಅರ್ಧಶತಕವಾಗಿದೆ. 2014ರಲ್ಲಿ ವೀರೇಂದ್ರ ಸೆಹ್ವಾಗ್ (ಚೆನ್ನೈ ವಿರುದ್ಧ ವಾಂಖೆಡೆ) ಹಾಗೂ 2013ರಲ್ಲಿ ಡ್ವೇನ್ ಸ್ಮಿತ್ (ಚೆನ್ನೈ ವಿರುದ್ಧ) ಸಹ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಐಪಿಎಲ್ ಪ್ಲೇಆಫ್‌ನಲ್ಲಿ ಅತಿ ವೇಗದ ಅರ್ಧಶತಕದ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ. 2014ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 16 ಎಸೆತಗಳಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಅವರು ಈ ದಾಖಲೆ ನಿರ್ಮಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications