IPL 2026 Winner Prize money: ಚಾಂಪಿಯನ್ ತಂಡಕ್ಕೆ 20 ಕೋಟಿ ಬಂಪರ್, ರನ್ನರ್ಸ್-ಅಪ್ ತಂಡಕ್ಕೆ 13 ಕೋಟಿ ರೂ
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಫೈನಲ್ ಭಾನುವಾರ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಎರಡನೇ ಬಾರಿಗೆ ಪ್ರಶಸ್ತಿ ಎತ್ತುವತ್ತ ಚಿತ್ತ ನೆಟ್ಟಿವೆ.
ಲೀಗ್ ಹಂತದಿಂದ ಹಿಡಿದು ಮೊದಲ ಕ್ವಾಲಿಫೈಯರ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಆರ್‌ಸಿಬಿ 92 ರನ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ಇನ್ನು ಮೊದಲ ಕ್ವಾಲಿಫೈಯರ್‌ನಲ್ಲಿ ಸೋತಿದ್ದ ಗುಜರಾತ್ ಟೈಟಾನ್ಸ್ ಎರಡನೇ ಕ್ವಾಲಿಫೈಯರ್‌ನಲ್ಲಿ 7 ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆದಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು, ಎಲ್ಲರ ಚಿತ್ತ ಅಹಮದಾನಾದ್‌ನತ್ತ ನೆಟ್ಟಿದೆ.

ಈ ಪಂದ್ಯವನ್ನು ಕಿಂಗ್ ಎಂದೇ ಖ್ಯಾತಿ ಪಡೆದಿರುವ ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ಹಾಗೂ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ಗುಜರಾತ್ ನಾಯಕ ಶುಭಮನ್ ಗಿಲ್ ನಡುವಣ ಕಾಳಗ ಎಂದೇ ಬಣ್ಣಿಸಲಾಗುತ್ತಿದೆ. ಈ ಬಾರಿ ಐಪಿಎಲ್ ಎತ್ತುವ ತಂಡಕ್ಕೆ ಎಷ್ಟು ಮೊತ್ತ ಲಭಿಸಲಿದೆ ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಐಪಿಎಲ್ ವಿಜೇತರಿಗೆ ಲಭಿಸುವ ಬಹುಮಾನ ಮೊತ್ತ ಎಷ್ಟು?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2026 ಗಾಗಿ ಒಟ್ಟು ₹46.5 ಕೋಟಿಗೂ ಹೆಚ್ಚಿನ ಬಹುಮಾನಗಳನ್ನು ನಿಗದಿಪಡಿಸಿದೆ. ಚಾಂಪಿಯನ್ ತಂಡವು ₹20 ಕೋಟಿ ಬಹುಮಾನದ ಹಣದೊಂದಿಗೆ ಪ್ರತಿಷ್ಠಿತ ಐಪಿಎಲ್ ಟ್ರೋಫಿಯನ್ನು ಪಡೆಯುತ್ತದೆ.
ಫೈನಲ್ ಪಂದ್ಯದಲ್ಲಿ ಸೋತ ತಂಡಕ್ಕೆ ಲಭಿಸುವ ಬಹುಮಾನ ಮೊತ್ತ ಎಷ್ಟು?
ಫೈನಲ್‌ನಲ್ಲಿ ಸೋತ ತಂಡವು ₹13 ಕೋಟಿ ಬಹುಮಾನದ ರೂಪದಲ್ಲಿ ಪಡೆಯಲಿದೆ.
ಪ್ಲೇ ಆಫ್ ಪ್ರವೇಶಿಸಿದ ತಂಡಗಳಿಗೆ ಸಿಗುವ ಹಣ ಎಷ್ಟು?
ಮೂರನೇ ಸ್ಥಾನ ಪಡೆದ ತಂಡವು ₹7 ಕೋಟಿ ಪಡೆದರೆ, ಎಲಿಮಿನೇಟರ್ ಪಂದ್ಯದಲ್ಲಿ ಸೋತ ತಂಡ ನಾಲ್ಕನೇ ಸ್ಥಾನ ಪಡೆದ ತಂಡವು ₹6.5 ಕೋಟಿ ಬಹುಮಾನ ಪಡೆಯಲಿದೆ.
ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿಜೇತರು ಎಷ್ಟು ಪಡೆಯುತ್ತಾರೆ?
ತಂಡದ ಪ್ರಶಸ್ತಿಗಳ ಜೊತೆಗೆ, ವೈಯಕ್ತಿಕವಾಗಿ ಉತ್ತಮ ಸಾಧನೆ ಮಾಡುವ ಆಟಗಾರರಿಗೆ ಪ್ರತ್ಯೇಕ ಬಹುಮಾನಗಳನ್ನು ಸಹ ಮೀಸಲಿಡಲಾಗಿದೆ. ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಗೆದ್ದ ಕ್ರೀಡಾ ಪಟು 10 ಲಕ್ಷ ರೂಪಾಯಿ ಬಹುಮಾನ ಪಡೆಯಲಿದ್ದಾರೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಟಿಕೆಟ್ ಹಂಚಿಕೆ ಮತ್ತು ಪಾಸ್‌ಗಳ ವಿವಾದದ ನಂತರ ಬಿಸಿಸಿಐ ಪಂದ್ಯಗಳನ್ನು ಅಹಮದಾಬಾದ್‌ಗೆ ಶಿಫ್ಟ್ ಮಾಡಿತ್ತು. ಮೇ 31 ರಂದು ಗ್ರ್ಯಾಂಡ್ ಫೈನಲ್ ನಡೆಯಲಿದ್ದು, ಪಂದ್ಯಕ್ಕೂ ಒಂದು ಗಂಟೆ ಮುನ್ನ ವರ್ಣರಂಜಿತ ಸಮಾರೋಪ ಸಮಾರಂಭವೂ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

