IPL 2026: ರೀಲ್ ಮಾಡಲು ಹೋಗಿ 70 ಸಾವಿರ ಪಂಗನಾಮ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದೆ. ಈ ಲೀಗ್‌ನಲ್ಲಿ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಐಪಿಎಲ್ ನಡೆಯುತ್ತಿರುವ ಎಲ್ಲ ಸ್ಥಳಗಳು ಹೌಸ್ ಫುಲ್ ಆಗಿವೆ. ಈಗಿನ ಸಾಮಾಜಿಕ ಯುಗದಲ್ಲಿ ಅಭಿಮಾನಿಗಳು ಮೈದಾನಕ್ಕೆ ಹೋದರೆ, ಅಲ್ಲಿನ ವಿಡಿಯೋ, ಫೋಟೋಗಳನ್ನು ತೆಗೆದುಕೊಂಡು ಹಂಚಿಕೊಳ್ಳುತ್ತಾರೆ. ಇನ್ನು ಮುಂದೆ ಹೋಗುವ ಅಭಿಮಾನಿಗಳು ಮೈದಾನದಲ್ಲಿ ರೀಲ್ ಮಾಡಿ ತಮ್ಮ ಖಾತೆಗಳಲ್ಲಿ ಹಂಚಿಕೊಂಡು ವೈರಲ್ ಆಗುತ್ತಾರೆ. ಇಂತಹದ್ದೇ ಒಂದು ಪ್ರಸಂಗ ಇತ್ತೀಚಿಗೆ ನ್ಯೂ ಚಂಡಿಗಢ ಮೈದಾನದಲ್ಲಿ ನಡೆದಿದೆ. ಆದರೆ ರೀಲ್ ಮಾಡುವ ಹುಚ್ಚಾಟದಲ್ಲಿ ಯುವತಿಗೆ ಬರೋಬ್ಬರಿ 70 ಸಾವಿರ ರೂಪಾಯಿ ಪಂಗನಾಮ ಬಿದ್ದಿದೆ. ಆಗಿದ್ದು ಏನು? 70 ಸಾವಿರ ಪಂಗನಾಮ ಬಿದ್ದಿದ್ದು ಹೇಗೆ ಎಂಬ ಬಗ್ಗೆ ವಿವರ ಇಲ್ಲಿದೆ.
ಈ ಘಟನೆ ಏಪ್ರಿಲ್ 11 ರ ಶನಿವಾರದಂದು ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆದ ಐಪಿಎಲ್ 2026 ರ 17 ನೇ ಪಂದ್ಯದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಪಂಜಾಬ್ ಭರ್ಜರಿ ಪ್ರದರ್ಶನ ನೀಡಿ 6 ವಿಕೆಟ್‌ಗಳಿಂದ ಜಯ ಸಾಧಿಸಿತು. ಈ ಪಂದ್ಯವನ್ನು ನೋಡಲು ಬಂದಿದ್ದ ಅಭಿಮಾನಿಯೊಬ್ಬಳು ರೀಲ್ ಮಾಡಲು ಮುಂದಾಗಿದ್ದಾಳೆ. ಆಗಲೇ ಪಂಗನಾಮ ಬಿದ್ದಿದೆ.

ಆಗಿದ್ದೇನು?
ಈಗ ಸಾಮಾಜಿಕ ತಾಣದಲ್ಲಿ ಬರುತ್ತಿರುವ ಹುಚ್ಚಾಟಗಳ ರೀಲ್‌ಗಳನ್ನು ನೋಡಿ ತಾನು ಸಹ ಇದೇ ರೀತಿ ವಿಡಿಯೋ ಮಾಡಲು ಮುಂದಾಗಿದ್ದಾಳೆ. ತಾನು ಧರಿಸಿದ್ದ ಉಂಗರವನ್ನು ಗಾಳಿಯಲ್ಲಿ ತೇಲಿ ಹಿಡಿಯುವ ವೇಳೆ ಉಂಗರ ಇವಳ ಕೈ ಸೇರುವ ಬದಲು ಬೇರೆ ಕಡೆ ಬಿದ್ದಿದೆ. ಕೈಯಿಂದ ಜಾರಿದ ಅಮೂಲ್ಯ ಬೆಲೆಬಾಳುವ ಉಂಗುರವನ್ನು ಹುಡುಕುತ್ತಾ ಯುವತಿ ಎಲ್ಲ ಚೇರ್‌ಗಳ ತಳದಲ್ಲಿ ನೋಡಿದ್ದಾಳೆ.
ತಕ್ಷಣ ಕೆಳಗೆ ಬಿದ್ದ ಉಂಗುರ ಎಲ್ಲಿಗೆ ಹೋಯಿತು ಎಂದು ತಿಳಿಯದೇ ಕಂಗಾಲಾಗಿದ್ದಾಳೆ. ಇವರು ಹಾಗೂ ಅವರ ಸ್ನೇಹಿತರು ಉಂಗುರವನ್ನು ಹುಡುಕಲು ಆರಂಭಿಸಿದ್ದಾರೆ. ಈಗ ಯುವತಿ ಸೀಟುಗಳ ಕೆಳಗೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಉಂಗುರವನ್ನು ಹುಡುಕುತ್ತಿರುವುದನ್ನು ವೀಡಿಯೊ ವೈರಲ್ ಆಗುತ್ತಿದೆ.
ಇದೇ ವಿಡಿಯೋವನ್ನು ಹಂಚಿಕೊಂಡಿರುವ ಯುವತಿ 70 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ. ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ಯಾರಿಗಾದ್ರೂ ಈ ಉಂಗುರ ಸಿಕ್ಕಿದರೆ ದಯವಿಟ್ಟು ನೀಡಿ ಎಂದು ಅಂಗಲಾಚಿದ್ದಾಳೆ. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಭಿನ್ನ ವಿಭಿನ್ನ ಕಮೆಂಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications