Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ ಟಾಪ್ 5 ಭವಿಷ್ಯದ ಆಟಗಾರರು

ಇಂಡಿಯನ್ ಪ್ರೀಮಿಯರ್‌ ಲೀಗ್‌ ( ಐಪಿಎಲ್) ಇದು ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌. ಈ ಲೀಗ್‌ 19ನೇ ವಸಂತಕ್ಕೆ ಕಾಲಿಟ್ಟಿದೆ. ಈ ವೇದಿಕೆಯಲ್ಲಿ ಮಿಂಚಿನ ಪ್ರದರ್ಶನ ನೀಡಿ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಯುವ ಆಟಗಾರರಿಗೆ ಬೆಸ್ಟ್‌ ಚಾನ್ಸ್‌. ಯುವ ಆಟಗಾರರ ಹಲವು ವರ್ಷಗಳಿಂದ ಪಟ್ಟ ಕಷ್ಟಕ್ಕೆ ಈಗ ಬೆಲೆ ಸಿಗುವಂತೆ ಆಗಿದೆ. ಐಪಿಎಲ್‌ ಎಂದರೆ ಯುವ ಆಟಗಾರರ ಉಗಮ ಸ್ಥಾನ ಎಂದರೆ ತಪ್ಪಾಗಲಾರದು. ಈ ಬಾರಿಯೂ ಅನುಭವಿ ಆಟಗಾರರ ನಡುವೆ ತಮ್ಮ ಆಟದ ಮೂಲಕ ಮೋಡಿ ಮಾಡಲು ಈ ಐದು ಯುವ ಆಟಗಾರರು ಸಜ್ಜಾಗಿದ್ದಾರೆ.

ಈ ಯುವ ಆಟಗಾರರು ಈಗಾಗಲೇ ದೇಶೀಯ ಹಲವು ವಯೋಮಿತಿ ಟೂರ್ನಿಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಐಪಿಎಲ್‌ ವೇದಿಕೆಯಲ್ಲಿ ಯುವ ಆಟಗಾರರ ಕಲಿಕೆಯ ಜೊತೆಗೆ, ಹಿರಿಯ ಆಟಗಾರರೊಂದಿಗೆ ಆಡಿದ ಅನುಭವ ಪಡೆಯಲಿದ್ದಾರೆ. ಅಲ್ಲದೆ ಯುವ ಆಟಗಾರರ ಉಜ್ವಲ ಭವಿಷ್ಯಕ್ಕೆ ಶ್ರೀಮಂತ ಲೀಗ್‌ ವೇದಿಕೆ ಆಗಬಹುದಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಲು ಈ ಯುವ ಆಟಗಾರರು ತಯಾರಾಗಿದ್ದಾರೆ.

IPL 2026 Young Stars

ಆಯುಷ್ ಮಾತ್ರೆ

ಈಗಾಗಲೇ ಅಂಡರ್ 19 ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಯುವ ಆಟಗಾರ ಆಯುಷ್ ಮಾತ್ರೆ, ಕಳೆದ ಆವೃತ್ತಿಯ ಐಪಿಎಲ್‌ನಲ್ಲೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡಿದ್ದರು. ಈ ಬಾರಿಯೂ ಇವರು ಹಳದಿ ಜೆರ್ಸಿಯಲ್ಲಿ ಅಂಗಳಕ್ಕೆ ಇಳಿಯಲಿದ್ದಾರೆ. ಇವರು ರನ್‌ ವೇಗಕ್ಕೆ ಚುರುಕು ಮುಟ್ಟಿಸಲು ಹೆಸರುವಾಸಿ. ಸಿಎಸ್‌ಕೆ ಪರ ಆಡಿದ 7 ಪಂದ್ಯಗಳಲ್ಲಿ ಆಯುಷ್‌ 34ರ ಸರಾಸರಿಯಲ್ಲಿ 240 ರನ್‌ ಸಿಡಿಸಿದ್ದಾರೆ.

ಮಂಗೇಶ್ ಯಾದವ್

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈ ಬಾರಿಯ ಮಿನಿ ಹರಾಜಿನಲ್ಲಿ ಪಡೆದ ದೇಶೀಯ ಬೌಲರ್ ಮಂಗೇಶ್ ಯಾದವ್. ಇವರು ವೇಗದ ಬೌಲಿಂಗ್‌ನಿಂದ ದೇಶೀಯ ಟೂರ್ನಿಗಳಲ್ಲಿ ಸದ್ದು ಮಾಡಿದ್ದಾರೆ. ಅಲ್ಲದೆ ವಿಕೆಟ್‌ ಕಬಳಿಸುವ ಕ್ಷಮತೆ ಹೊಂದಿದ್ದಾರೆ. ಇವರು ಮಧ್ಯ ಪ್ರದೇಶ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು.

ಪ್ರಶಾಂತ್ ವೀರ್‌

ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಹರಾಜಿನಲ್ಲಿ ಭಾರೀ ಮೊತ್ತ ನೀಡಿ ಖರೀದಿಸಿದ ಆಟಗಾರರಲ್ಲಿ ಪ್ರಶಾಂತ್ ವೀರ್ ಸಹ ಒಬ್ಬರು. ಇವರು ಎಡಗೈ ಸ್ಪಿನ್ ಬೌಲರ್ ಆಗಿದ್ದು, ಕೆಳಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಬಲ್ಲ ಬ್ಯಾಟರ್‌. ಇವರು ದೇಶೀಯ ಟಿ20 ಕ್ರಿಕೆಟ್‌ನಲ್ಲಿ ಬಿಗುವಿನ ದಾಳಿ ನಡೆಸಿ ಸದ್ದು ಮಾಡಿದ್ದಾರೆ.

ಕಾರ್ತಿಕ್ ಶರ್ಮಾ

19 ವರ್ಷದ ಯುವ ಆಟಗಾರ ಕಾರ್ತಿಕ್ ಶರ್ಮಾ ದೇಶೀಯ ಟಿ20 ಕ್ರಿಕೆಟ್ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ಆಟಗಾರ. ರಾಜಸ್ಥಾನ ತಂಡದ ಪರ ಆಡುವ ಈ ಆಟಗಾರ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಇವರಿಗೂ ಸಹ ಚೆನ್ನೈ ದೊಡ್ಡ ಮೊತ್ತವನ್ನು ನೀಡಿ ಖರೀದಿ ಮಾಡಿದೆ.

ವೈಭವ್ ಸೂರ್ಯವಂಶಿ

ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿರುವ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್‌ ವೈಭವ್ ಸೂರ್ಯವಂಶಿ. 14 ವರ್ಷದ ಯುವ ಆಟಗಾರ ವೈಭವ್, ಆರಂಭಿಕ ಆಟಗಾರ. ಕಳೆದ ವರ್ಷದ ಐಪಿಎಲ್‌ನಲ್ಲಿ 35 ಎಸೆತಗಳಲ್ಲಿ ಶತಕ ಬಾರಿಸಿ ಸುದ್ದಿಯಲ್ಲಿದ್ದರು. ಅಲ್ಲಿಂದ ವೈಭವ್ ಸೂರ್ಯವಂಶಿ ಅಂಡರ್ 19 ವಿಶ್ವಕಪ್‌ನಲ್ಲೂ ಅಬ್ಬರ ನಡೆಸಿದರು. ಪರಿಣಾಮ ಇವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಹೀಗಾಗಿ ಈ ಆಟಗಾರನ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ.

Story first published: Sunday, March 22, 2026, 8:00 [IST]
Other articles published on Mar 22, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+