IPL 2027: ಅಂಬಾನಿ ತಂಡ ಬಿಟ್ಟು ಶಾರುಖ್ ತಂಡ ಸೇರುತ್ತಾರಾ ಹಾರ್ದಿಕ್ ಪಾಂಡ್ಯ?
ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ನಲ್ಲಿ ಮುಂದುವರೆಯುತ್ತಾರಾ ಎಂಬ ಭವಿಷ್ಯ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ. ಐಪಿಎಲ್ ಮುಗಿದು ತಿಂಗಳುಗಳೇ ಕಳೆದಿದ್ದು, ಟ್ರೇಡ್ ವಿಂಡೋ ಓಪನ್ ಆಗಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸೇರುವ ಬಗ್ಗೆ ಮಾತುಕತೆಗಳು ಚುರುಕು ಪಡೆಯುತ್ತಿವೆ.
ಹಾರ್ದಿಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಲವು ತಂಡಗಳು ಆಸಕ್ತಿ ತೋರಿವೆ ಎಂದು ವರದಿಗಳು ತಿಳಿಸುತ್ತಿವೆ. ಈ ಮೊದಲು ಹಾರ್ದಿಕ್ ಅವರನ್ನು ಕೊಳ್ಳಲು ರಾಜಸ್ಥಾನ ರಾಯಲ್ಸ್ ಆಸಕ್ತಿ ಹೊಂದಿತ್ತು ಎಂಬ ಊಹಾಪೋಹಗಳು ಸುದ್ದಿಯಾಗಿದ್ದವು. ಈಗ ಬರುತ್ತಿರುವ ಸುದ್ದಿಗಳ ಪ್ರಕಾರ ಐಪಿಎಲ್ 2027 ರ ಋತುವಿಗೆ ಮುಂಚಿತವಾಗಿ ಹಾರ್ದಿಕ್ ಕೆಕೆಆರ್ ತಂಡವನ್ನು ಸೇರಬಹುದು ಎಂಬ ಚರ್ಚೆಗಳು ಹರಿದಾಡುತ್ತಿವೆ. ಇನ್ನು ಕೆಕೆಆರ್ ತಂಡದ ಸಹ ಮಾಲೀಕ ಶಾರುಖ್ ಖಾನ್ ಸಹ ಹಾರ್ದಿಕ್ ಅವರನ್ನು ಕೆಕೆಆರ್‌ಗೆ ಕರೆತರಲು ಆಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ಸೂಚಿಸುತ್ತಿವೆ.

ಕೆಕೆಆರ್ ಪರ ಹಾರ್ದಿಕ್ ಪಾಂಡ್ಯ ಆಡಬೇಕು ಎಂದು ಶಾರುಖ್ ಖಾನ್ ಬಯಸುತ್ತಿದ್ದಾರೆ. ಹಾರ್ದಿಕ್ ಬಗ್ಗೆ ಕೆಕೆಆರ್ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದೆ. ಇದಕ್ಕೆ ಪ್ರಮುಖ ಕಾರಣ, ಕಳೆದ ಎರಡು ಆವೃತ್ತಿಗಳಲ್ಲಿ ತಂಡ ನೀಡಿದ ಪ್ರದರ್ಶನ ನೀರಸವಾಗಿದೆ. ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿ ತರಲು ಶಾರುಖ್ ಖಾನ್ ಬಯಕೆ ಇರುವುದಾಗಿ ಮೈಖೇಲ್‌ಗೆ ಮೂಲಗಳು ತಿಳಿಸಿವೆ.
ಹಾರ್ದಿಕ್ ಬಗ್ಗೆ ಶಾರುಖ್ ಒಲವು
ಕೆಕೆಆರ್ 2024ರಲ್ಲಿ ಶ್ರೇಯಸ್ ಅಯ್ಯರ್ ಅವರ ಮುಂದಾಳತ್ವದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಕೆಕೆಆರ್ ಈ ಮೂಲಕ ಮೂರನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿತ್ತು. 18 ಹಾಗೂ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೆಕೆಆರ್ ತಂಡ ನೀಡಿದ ಪ್ರದರ್ಶನ ಅಭಿಮಾನಿಗಳಿಗೆ ಹಾಗೂ ಮಾಲೀಕರಿಗೆ ಬೇಸರ ತಂದಿದೆ. ಮೂಲಗಳ ಪ್ರಕಾರ ಶಾರುಖ್ ಖಾನ್ ಕ್ರಿಕೆಟ್ ತಂಡದ ದೈನಂದಿನ ವ್ಯವಹಾರಗಳಿಂದ ದೂರ ಉಳಿದಿದ್ದಾರೆ. ಆದರೆ ಮೈದಾನದಲ್ಲಿ ತಂಡ ನೀಡುವ ಪ್ರದರ್ಶನ ಶಾರುಖ್ ಖಾನ್‌ಗೂ ಬೇಸರ ತಂದಿದೆ. ಇನ್ನು ತಂಡದ ಆಡಳಿತ ಮಂಡಳಿಯ ದೀರ್ಘಾವಧಿ ದೃಷ್ಟಿಕೋನ ಹಾಗೂ ರಣತಂತ್ರದಿಂದ ನಟ ಶಾರುಖ್ ಅತೃಪ್ತಿ ಹೊಂದಿದ್ದಾರೆ ಎಂದು ಚರ್ಚೆಗಳು ನಡೆದಿವೆ. ಇನ್ನು ಶಾರುಖ್ ಬೆಸ್ಟ್ ಇಂಡಿಯನ್ ಕೋರ್ ಟೀಮ್ ಕಟ್ಟುವ ನಿಟ್ಟಿನಲ್ಲಿ ದೃಷ್ಟಿ ನೆಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹಾರ್ದಿಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಶಾರುಖ್ ಖಾನ್ ಸಂಪೂರ್ಣ ಹಣದ ವ್ಯವಹಾರದ ಮೂಲಕ ಒಪ್ಪಂದ ಮಾಡಿಕೊಳ್ಳಲು ಸಹ ಅವರು ಸಿದ್ಧರಾಗಿದ್ದಾರೆ ಎಂದು 'ಮೈಖೇಲ್' ಮೂಲಗಳು ತಿಳಿಸಿವೆ. ಇನ್ನು ಶಾರುಖ್ ಅವರ ಪ್ರಯತ್ನದಿಂದ ಹಾರ್ದಿಕ್ ಅವರನ್ನು ಖರೀದಿಸಲು ಬೇರೆ ತಂಡಗಳಿಗಿಂತ ಹೆಚ್ಚಿನ ಒಲವನ್ನು ಕೆಕೆಆರ್ ಹೊಂದಿರುವುದಾಗಿ ತಿಳಿದು ಬರುತ್ತಿದೆ.
ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಮತ್ತು ಯಶಸ್ವಿ ಜೈಸ್ವಾಲ್ ಅವರ ನಡುವೆ ಆಟಗಾರರ ಟ್ರೇಡ್ ಆಗುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು.ಈ ಬಗ್ಗೆ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಆಲೋಚಿಸಿದ್ದವು. ಈಗ ಈ ರೇಸ್‌ನಲ್ಲಿ ಶಾರುಖ್ ಖಾನ್ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಇದರಿಂದ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಸೇರಬಹುದು ಎಂಬ ಕುತೂಹಲ ಇನ್ನು ಹೆಚ್ಚಾಗಿದೆ.
ಹಾರ್ದಿಕ್ ಪಾಂಡ್ಯ ಸಾಧನೆ
32 ವರ್ಷದ ಹಾರ್ದಿಕ್ ಪಾಂಡ್ಯ ಈಗಾಗಲೇ ಐಪಿಎಲ್‌ನಲ್ಲಿ 162 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದು, 27ರ ಸರಾಸರಿಯಲ್ಲಿ 2955 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು 82 ವಿಕೆಟ್ ಸಹ ಪಡೆದಿದ್ದಾರೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಆಡಿದ 10 ಪಂದ್ಯಗಳಲ್ಲಿ 206 ರನ್ ಸಿಡಿಸಿದ್ದು, 4 ವಿಕೆಟ್ ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications