ಸಿಎಸ್‌ಕೆ ಹೊರತುಪಡಿಸಿ ಉಳಿದೆಲ್ಲಾ ಐಪಿಎಲ್ ತಂಡಗಳ ಪರ ಆಡಿರುವ ಏಕೈಕ ಆಟಗಾರ ಈತ!

ಮಾರ್ಚ್ 26ರಂದು ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಳೆದ ಬಾರಿಯ ಐಪಿಎಲ್ ಟೂರ್ನಿಯ ರನ್ನರ್ ಅಪ್ ಆದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿರುವ ಉದ್ಘಾಟನಾ ಪಂದ್ಯದ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಆರಂಭಗೊಳ್ಳಲಿವೆ. ಇನ್ನು ಟೂರ್ನಿಯ ಮೊದಲನೇ ದಿನ ಕೇವಲ ಒಂದು ಪಂದ್ಯ ಮಾತ್ರ ನಡೆಯಲಿದ್ದು ಎರಡನೇ ದಿನ ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಹೌದು, ಮಾರ್ಚ್ 27ರ ಭಾನುವಾರದಂದು ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಮಧ್ಯಾಹ್ನ 3.30ಕ್ಕೆ ನಡೆದರೆ, ಅದೇ ದಿನ ಸಂಜೆ 7.30ಕ್ಕೆ ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯ ನಡೆಯಲಿದೆ. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 12 ಡಬಲ್ ಹೆಡರ್ ಪಂದ್ಯಗಳು ನಡೆಯಲಿದ್ದು, ಲೀಗ್ ಹಂತದ ಒಟ್ಟು 70 ಪಂದ್ಯಗಳು 58 ದಿನಗಳಲ್ಲಿ ನಡೆಯಲಿವೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ಈ ಎರಡು ನೂತನ ತಂಡಗಳು ಸೇರ್ಪಡೆಯಾಗಿದ್ದು ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆದಿದೆ. ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸಾವಿರಕ್ಕೂ ಹೆಚ್ಚು ಆಟಗಾರರು ಭಾಗವಹಿಸಿ ಕೆಲವರು ಬಿಕರಿಯಾದರೆ, ಇನ್ನೂ ಕೆಲವರು ಬಿಕರಿಯಾಗದೇ ಹಾಗೆಯೇ ಉಳಿದರು. ಹೀಗೆ ಹರಾಜಿನಲ್ಲಿ ಬಿಕರಿಯಾಗದೇ ಉಳಿದ ಆಟಗಾರರ ಪೈಕಿ ಕೆಲ ಸ್ಟಾರ್ ಆಟಗಾರರೂ ಕೂಡ ಇದ್ದು, ಈ ಸ್ಟಾರ್ ಆಟಗಾರರು ನಂತರದ ದಿನಗಳಲ್ಲಿ ಬಿಕರಿಯಾಗಿರುವ ಆಟಗಾರರು ಈ ಬಾರಿಯ ಟೂರ್ನಿಯಿಂದ ಹೊರಬಿದ್ದರೆ ಸ್ಥಾನ ಪಡೆದುಕೊಳ್ಳಬಹುದು ಎಂಬ ಅಭಿಪ್ರಾಯಗಳೂ ಕೂಡ ವ್ಯಕ್ತವಾಗಿದ್ದವು. ಅದರಂತೆ ಇದೀಗ ಇಂಗ್ಲೆಂಡ್ ಮೂಲದ ಆಟಗಾರರಾದ ಜೇಸನ್ ರಾಯ್ ಮತ್ತು ಅಲೆಕ್ಸ್ ಹೇಲ್ಸ್ ಕೊವಿಡ್ ಮತ್ತು ಬಯೋ ಬಬಲ್‌ಗೆ ಹೆದರಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಈ ರೀತಿ ಜೇಸನ್ ರಾಯ್ ಮತ್ತು ಅಲೆಕ್ಸ್ ಹೇಲ್ಸ್ ಟೂರ್ನಿಯಿಂದ ಹಿಂದೆ ಸರಿದಿರುವುದರಿಂದ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿ ಉಳಿದಿದ್ದ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಸಜ್ಜಾಗಿವೆ. ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ 1.2 ಕೋಟಿಗೆ ಅಲೆಕ್ಸ್ ಹೇಲ್ಸ್ ಅವರನ್ನು ಖರೀದಿಸಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹೇಲ್ಸ್ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದಂತೆ ಬದಲಿ ಆಟಗಾರನನ್ನು ಖರೀದಿಸಿದೆ. ಹೀಗೆ ಕೋಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿರುವ ಬದಲಿ ಆಟಗಾರ ಈ ಮೂಲಕ ನೂತನ ದಾಖಲೆಯೊಂದನ್ನು ಬರೆದಿದ್ದು, ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ತಂಡಗಳ ಪರ ಆಡಿರುವ ಆಟಗಾರ ಎನಿಸಿಕೊಂಡಿದ್ದಾರೆ. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಅಲೆಕ್ಸ್ ಹೇಲ್ಸ್ ಬದಲಿ ಆಟಗಾರನನ್ನು ಖರೀದಿಸಿದ ಕೆಕೆಆರ್
ಅಲೆಕ್ಸ್ ಹೇಲ್ಸ್ ಬಯೋ ಬಬಲ್ ಸಮಸ್ಯೆಯಿಂದ ಟೂರ್ನಿಯಿಂದ ಹಿಂದೆ ಸರಿದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹರಾಜಾಗದೇ ಉಳಿದಿದ್ದ ಆಸ್ಟ್ರೇಲಿಯಾದ ವೈಟ್ ಬಾಲ್ ನಾಯಕ ಆರನ್ ಫಿಂಚ್ ಅವರನ್ನು 1.5 ಕೋಟಿಗೆ ಖರೀದಿಸಿದೆ. ಈ ಮೂಲಕ ಆರನ್ ಫಿಂಚ್ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಫ್ರಾಂಚೈಸಿಗಳ ಪರ ಆಡಲಿರುವ ಆಟಗಾರ ಎನಿಸಿಕೊಂಡಿದ್ದಾರೆ.

ದಾಖಲೆ ಬರೆದ ಫಿಂಚ್
ಇದೀಗ ಅಲೆಕ್ಸ್ ಹೇಲ್ಸ್ ಬದಲಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿರುವ ಆರನ್ ಫಿಂಚ್ ಈ ಮೂಲಕ ಒಂಬತ್ತನೇ ಫ್ರಾಂಚೈಸಿಯನ್ನು ಪ್ರತಿನಿಧಿಸಲು ಮುಂದಾಗಿದ್ದಾರೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್ ಹೊರತುಪಡಿಸಿ ಉಳಿದ ಎಲ್ಲಾ ಹಳೆಯ ಫ್ರಾಂಚೈಸಿಗಳ ಜೆರ್ಸಿ ತೊಟ್ಟಿರುವ ಆರನ್ ಫಿಂಚ್ 9 ತಂಡಗಳ ಪರ ಆಡಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಈ ಕುರಿತಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ಗಳೂ ಕೂಡ ನಡೆಯುತ್ತಿವೆ. ಆರನ್ ಫಿಂಚ್ ಪ್ರತಿನಿಧಿಸಿರುವ ತಂಡಗಳ ವಿವರ ಈ ಕೆಳಕಂಡಂತಿದೆ.ರಾಜಸ್ಥಾನ್ ರಾಯಲ್ಸ್ - 2010
ಡೆಲ್ಲಿ ಡೇರ್ ಡೆವಿಲ್ಸ್ - 2011-12
ಪುಣೆ ವಾರಿಯರ್ಸ್ ಇಂಡಿಯಾ - 2013
ಸನ್ ರೈಸರ್ಸ್ ಹೈದರಾಬಾದ್ - 2014
ಮುಂಬೈ ಇಂಡಿಯನ್ಸ್ - 2015
ಗುಜರಾತ್ ಲಯನ್ಸ್ - 2016-17
ಕಿಂಗ್ಸ್ ಇಲೆವೆನ್ ಪಂಜಾಬ್ - 2018
ರಾಯಲ್ ಚಾಲೆಂಜರ್ಸ್ ಬೆಂಗಳೂರು - 2020
ಕೋಲ್ಕತ್ತಾ ನೈಟ್ ರೈಡರ್ಸ್ - 2022

ಕೋಲ್ಕತ್ತಾ ನೈಟ್ ರೈಡರ್ಸ್ ಸಂಪೂರ್ಣ ಸ್ಕ್ವಾಡ್
ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ಸಿ), ಪ್ಯಾಟ್ ಕಮ್ಮಿನ್ಸ್, ಆರೋನ್ ಫಿಂಚ್, ನಿತೀಶ್ ರಾಣಾ, ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅನುಕುಲ್ ರಾಯ್, ರಸಿಖ್ ದರ್ನೆ, ಚಾಮಿಕಾ ಇಂದ್ರಜಿತ್, ಚಾಮಿಕಾ , ಅಶೋಕ್ ಶರ್ಮಾ, ಪ್ರಥಮ್ ಸಿಂಗ್, ಅಭಿಜೀತ್ ತೋಮರ್, ಸ್ಯಾಮ್ ಬಿಲ್ಲಿಂಗ್ಸ್, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಅಮನ್ ಖಾನ್, ಉಮೇಶ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications