
ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ವಾರಾಂತ್ಯದಲ್ಲಿ ಐಪಿಎಲ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಈ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಯಾವೆಲ್ಲಾ ಆಟಗಾರರು ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದ್ದು ಇದರಲ್ಲಿ ಒಟ್ಟು 590 ಆಟಗಾರರು ಬಿಡ್ಡಿಂಗ್‌ನ್ಲಲಿ ಭಾಗಿಯಾಗಲಿದ್ದಾರೆ. ಇದರಲ್ಲಿ 370 ಭಾರತೀಯರಾದರೆ 220 ವಿದೇಶಿ ಆಟಗಾರರಾಗಿದ್ದಾರೆ. ಈ ಆಟಗಾರರಿಗಾಗಿ 10 ತಂಡಗಳು ತೀವ್ರ ಪೈಪೋಟಿ ನಡೆಸಲಿದ್ದು ತಮ್ಮ ತಂಡಗಳಿಗೆ ಬಲಿಷ್ಠ ಆಟಗಾರರನ್ನು ಸೇರ್ಪಡೆಗೊಳಿಸಲು ಸರ್ವ ಪ್ರಯತ್ನವನ್ನು ನಡೆಸಲಿದೆ. ಇನ್ನು ಈ ಹರಾಜಿನ ಬಗ್ಗೆ ಅನುಭವಿ ಕ್ರಿಕೆಟಿಗ ಆರ್ ಅಶ್ವಿನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಓರ್ವ ಆಟಗಾರನಿಗಾಗಿ ಬಹುತೇಕ ಫ್ರಾಂಚೈಸಿಗಳೂ ಖಂಡಿತಾ ಕಟ್ಟಿದ್ದು ಆತನನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಲು ಸಾಕಷ್ಟು ಪೈಪೋಟಿ ನಡೆಯಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಆರ್ ಅಶ್ವಿನ್ ಹೀಗೆ ಹೇಳಿರುವುದು ದಕ್ಷಿಣ ಆಫ್ರಿಕಾದ ಬ್ಯಾಟರ್ ಫಾಫ್ ಡು ಫ್ಲೆಸಿಸ್ ಬಗ್ಗೆ. ಕಳೆದ ಕೆಲ ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ಫಾಫ್ ಡು ಪ್ಲೆಸಿಸ್ ಅವರನ್ನು ಸಿಎಸ್‌ಕೆ ಮರಳಿ ತೆಕ್ಕೆಗೆ ಹಾಕಿ ಕೊಳ್ಳುವುದು ಸುಲಭವಿಲ್ಲ ಎಂದಿದ್ದಾರೆ ಆರ್ ಅಶ್ವಿನ್
ಫಾಫ್ ಡು ಪ್ಲೆಸಿಸ್ 2021ರ ಆವೃತ್ತಿಯ್ಲಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟಕ್ಕೆರಲು ಮಹತ್ವದ ಕೊಡುಗೆ ನೀಡಿದ್ದಾರೆ. 14 ಪಂದ್ಯಗಳನ್ನು ಆಡಿರುವ ಫಾಫ್ ಡು ಪ್ಲೆಸಿಸ್ 633 ರನ್‌ಗಳನ್ನು ಗಳಿಸಿದ್ದರು. ಆರೆಂಜ್ ಕ್ಯಾಪ್‌ಗಿಂತ ಕೇವಲ 2 ರನ್‌ಗಳಷ್ಟು ಅವರು ಹಿಂದುಳಿದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ರೀಟೈನ್ ಮಾಡಿಕೊಂಡಿರುವ ನಾಲ್ವರು ಆಟಗಾರರ ಪಟ್ಟಿಯಲ್ಲಿ ಫಾಫ್ ಇಲ್ಲದಿರುವ ಕಾರಣ ಅವರು ಸಹಜವಾಗಿಯೇ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಆಟಗಾರನನ್ನು ತೆಕ್ಕೆಗೆ ಹಾಕಿಕೊಳ್ಳಲು ಭಾರೀ ಹೋರಾಟವೇ ನಡೆಯಲಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
"ಈ ಹಿಂದಿನ ಬಾರಿ ಫಾಫ್ ಡು ಪ್ಲೆಸಿಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 1.5 ಕೋಟಿ ರೂಪಾಯಿಗೆ ತೆಕ್ಕೆಗೆ ಹಾಕಿಕೊಂಡಿತ್ತು. ಆದರೆ ಈ ಬಾರಿ ಅದು ಸಂಭವಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಸಿಎಸ್‌ಕೆ ಅಭಿಮಾನಿಗಳು ಖಂಡಿತವಾಗಿಯೂ ಆತನನ್ನು ಮರಳಿ ತಂಡಕ್ಕೆ ಸೇರಿಕೊಳ್ಳುವ ಪಟ್ಟಿಯಲ್ಲಿ ಇರಿಸಿಕೊಂಡಿರುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಫಾಫ್ ಡು ಪ್ಲೆಸಿಸ್ ಅವರನ್ನು ಮರಳಿ ತಂಡಕ್ಕೆ ಕರೆತರಬೇಕೆಂದುಕೊಂಡಿದ್ದರೆ ಈ ಹಿಂದಿನ ಬಾರಿ ನೀಡಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡಲು ಸಿದ್ಧವಾಗಬೇಕಿದೆ" ಎಂದು ಆರ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮುಂದುವರಿದು ಮಾತನಾಡಿದ ಅಶ್ವಿನ್ ವಿದೇಶಿ ಆಟಗಾರರ ಪೈಕಿ ಅತ್ಯಂತ ಹೆಚ್ಚಿನ ಬೇಡಿಕೆ ಪಡೆಯಲಿರುವ ಮತ್ತಿಬ್ಬರು ಯಾರು ಎಂಬ ಅಂಶವನ್ನು ಕೂಡ ಹೇಳಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹಾಗೂ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಈ ಇಬ್ಬರು ಕೂಡ ಹರಾಜಿನಲ್ಲಿ ಭಾರಿ ದೊಡ್ಡ ಮೊತಯ್ತವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ವಿದೇಶಿ ಆರಂಭಿಕ ಆಟಗಾರರಲ್ಲಿ ಅತಿ ಹೆಚ್ಚಿನ ಮೊತ್ತವನ್ನು ಪಡೆಯಲಿರುವ ಮತ್ತೋರ್ವ ಆಟಗಾರ ಎಂದು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಅವರನ್ನು ಆರ್ ಅಶ್ವಿನ್ ಹೆಸರಿಸಿದ್ದಾರೆ. "ಬೈರ್‌ಸ್ಟೋವ್ ದೇಹದಲ್ಲಿ ನಕಾರಾತ್ಮಕ ಮೂಳೆಯೇ ಇಲ್ಲ" ಎಂದು ಅಶ್ವಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.