IPL Auction 2014: ಆರ್‌ಸಿಬಿಯಲ್ಲಿ ಕನ್ನಡಿಗರಿಗೆ ಇಲ್ಲ ಬೆಲೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲಿನ ಕರ್ನಾಟಕದ ಜನರ ಪ್ರೀತಿ ದಿನೇ ದಿನೇ ಕಡಿಮೆ ಆಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ರೆಡ್ ಆಂಡ್ ಯೆಲ್ಲೋ ಜೆರ್ಸಿಯಲ್ಲಿ ಕನ್ನಡ ನಾಡಿನ ಹೆಮ್ಮೆಯ ಪುತ್ರರು ಆಡಿದ್ದಾರೆ. ಆಗೆಲ್ಲಾ ನಮ್ಮದೇ ಟೀಮ್ ಎಂಬ ಭಾವನೆ ನಮ್ಮಲ್ಲಿ ಇರುತ್ತಿತ್ತು.
ಆರ್‌ಸಿಬಿ ತಂಡದ ಪರ ಖ್ಯಾತ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಮನೀಷ್ ಪಾಂಡೆ, ಮಯಾಂಕ್ ಅಗರ್‌ವಾಲ್, ಕೆ.ಎಲ್ ರಾಹುಲ್, ರಾಬಿನ್ ಉತ್ತಪ್ಪ, ಎಸ್.ಅರವಿಂದ್, ವಿನಯ್ ಕುಮಾರ್, ದೇವದತ್ ಪಡೀಕ್ಕಲ್, ಸೇರಿದಂತೆ ಹಲವು ಆಟಗಾರರು ಆಡಿದ್ದಾರೆ. ಆಗೆಲ್ಲಾ ಪಂದ್ಯ ನೋಡುವ ಜೋಷ್ ಬೇರೆಯದ್ದೇ ಇರುತ್ತಿತ್ತು. ಆದರೆ ಈಗ ಆರ್‌ಸಿಬಿ ತಂಡದಲ್ಲಿ ಬೆಂಗಳೂರು ಎನ್ನುವ ಪದಕ್ಕೆ ಬೆಂಬಲಿಸ ಬೇಕು ಬಿಟ್ಟರೆ ಬೇರೆ ಯಾವ ಕಾರಣವೂ ಇಲ್ಲ.

ಆರ್‌ಸಿಬಿ ಕಳೆದ ಕೆಲವು ವರ್ಷಗಳಿಂದ ಕನ್ನಡಿಗರನ್ನು ಕಡೆಗಣನೆ ಮಾಡುತ್ತಾ ಬಂದಿದೆ. ಇದಕ್ಕೆ ಬೆಸ್ಟ್ ಉದಾಹರಣೆ ಅಂದರೆ ದೇವದತ್ ಪಡೀಕ್ಕಲ್. ದೇವದತ್ ಅವರ ಆಟವನ್ನು ಆರಂಭದಲ್ಲಿ ಗುರುತಿಸಿ ಪೋಷಿಸಿದ್ದ ಆರ್‌ಸಿಬಿ, ನಂತರ ಅವರನ್ನು ಕೈ ಬಿಟ್ಟಿತು. ತದನಂತರ ದೇವದತ್ ಭಾರೀ ಮೊತ್ತದೊಂದಿಗೆ ಬೇರೆ ತಂಡ ಸೇರಿದರು.
ಇದೇ ರೀತಿ ಈ ಬಾರಿಯ ಆಕ್ಷನ್‌ನಲ್ಲೂ ಆರ್‌ಸಿಬಿ ಕರ್ನಾಟಕದ ಕ್ರಿಕೆಟ್ ಆಟಗಾರರು ಬಂದಾಗ, ಬಿಡ್ ಅಂಗಳದಿಂದ ದೂರವೇ ಉಳಿದಿತ್ತು. ಆರ್‌ಸಿಬಿ ತಂಡಕ್ಕೆ ಮಿಡ್ಲ್ ಆರ್ಡರ್‌ನಲ್ಲಿ ಒಬ್ಬ ಬ್ಯಾಟ್ಸ್‌ಮನ್ ಅವಶ್ಯಕತೆ ಇತ್ತು. ಆದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಒಂದು ವೇಳೆ ಈ ಬಗ್ಗೆಯೂ ಚಿಂತೆ ಮಾಡಿದ್ದರೆ ಮನೀಷ್ ಪಾಂಡೆ ಅವರನ್ನು ಬೇಸ್ ಪ್ರೈಸ್‌ಗೆ ತಂಡಕ್ಕೆ ಸೇರಿಸಿಕೊಳ್ಳಬಹುದಿತ್ತು. ಮನೀಷ್ ಬ್ಯಾಟರ್ ಅಷ್ಟೇ ಅನ್ನೋದನ್ನು ಲೆಕ್ಕಿಸುವುದು ತಪ್ಪು. ಅವರೊಬ್ಬ ಸ್ಟಾರ್ ಫೀಲ್ಡರ್. ತಮ್ಮ ಫೀಲ್ಡಿಂಗ್‌ನಿಂದಲೇ ಸುಮಾರು ರನ್‌ಗಳನ್ನು ತಡೆಯುವ ಸಾಮರ್ಥ್ಯ ಅವರಿಗೆ ಇತ್ತು. ಇವರ ಮೇಲೂ ಆರ್‌ಸಿಬಿ ಹಣ ಹೂಡಲಿಲ್ಲ.

ಅನ್ ಸೋಲ್ಡ್ ಆಟಗಾರರ ಪಟ್ಟಿಯಲ್ಲಿರುವ ಕರುಣ್ ನಾಯರ್ ಅವರಿಗೂ ಆರ್‌ಸಿಬಿ ಹಣವನ್ನು ಸುರಿಯಬಹುದಿತ್ತು. ಇವರ ಆಗಮನದಿಂದಲೂ ಬೆಂಗಳೂರು ತಂಡದ ಬ್ಯಾಟಿಂಗ್ ಬ್ಯಾಲೆನ್ಸ್ ಆಗುತ್ತಿತ್ತು.
ಇದೆಲ್ಲಾ ಬಿಡಿ ಕರ್ನಾಟಕದ ಪರ ದೇಶೀಯ ಟೂರ್ನಿಗಳಲ್ಲಿ ಮಿಂಚಿ ಈಗ ಕೇರಳ ಪರ ಆಡುತ್ತಿರುವ ಶ್ರೇಯಸ್ ಗೋಪಾಲ್ ಹೆಸರು ಬಂದಾಗ ಜಣ ಕುರುಡಿಗೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಶರಣಾಗಿತ್ತು. ಶ್ರೇಯಸ್ ಗೋಪಾಲ್ ಒಬ್ಬ ಉತ್ತಮ ಲೆಗ್ ಸ್ಪಿನ್ ಬೌಲರ್. ಆರ್‌ಸಿಬಿ ಸ್ಪಿನ್ ವಿಭಾಗ ದುರ್ಬಲವಾಗಿದೆ. ಇವರ ಬೇಸ್ ಪ್ರೈಸ್‌ಗೂ ಇವರನ್ನು ಖರೀದಿ ಮಾಡಿದ್ದೇ ಆದಲ್ಲಿ ಸ್ಪಿನ್ ವಿಭಾಗಕ್ಕೆ ಒಂಚೂರು ಬಲ ಬರುತ್ತಿತ್ತು. ಈ ಎಲ್ಲ ಕೆಲಸಗಳನ್ನು ಮಾಡುವಲ್ಲಿ ಆರ್‌ಸಿಬಿ ವಿಫಲವಾಗಿದೆ.

ಆರ್‌ಸಿಬಿ ಬಿಡ್ ಅಂಗಳಕ್ಕೆ ಎಂಟ್ರಿ ನೀಡಿದ್ದು ಯಾವಾಗ?
ಆರ್‌ಸಿಬಿ ತಂಡ ಬಿಡ್ ಅಂಗಳಕ್ಕೆ ವಿದೇಶಿ ಆಟಗಾರರ ಹೆಸರು ಕೇಳುತ್ತಿದ್ದಂತೆ ಎಂಟ್ರಿ ನೀಡುತ್ತಾ ಇತ್ತು. ಆರ್‌ಸಿಬಿ ಮಂಗಳವಾರ ನಡೆದ ಹರಾಜಿನಲ್ಲಿ ತನ್ನ ಇರುವೆಕೆಯನ್ನು ತೋರಿಸಿಕೊಂಡಿದ್ದೇ ಪ್ಯಾಟ್ ಕಮಿನ್ಸ್ ಮೂಲಕ. ವಿಶ್ವ ವಿಜೇತ ತಂಡದ ನಾಯಕನಿಗೆ ಚೆನ್ನೈ ಮೊದಲು ಬಿಡ್ ಮಾಡಿತು. ಮುಂಬೈ ನಂತರ ಅಖಾಡ ಪ್ರವೇಶಿಸಿತು. ಅವರ ಬೆಲೆ 5 ಕೋಟಿ ಆದಾಗ ಬಿಡ್ ಅಖಾಡಕ್ಕೆ ಎಂಟ್ರಿ ನೀಡಿದ ಆರ್‌ಸಿಬಿ 20.25 ಕೋಟಿ ವರೆಗೂ ಬಿಡ್ ಮಾಡಿತು. ಆದರೆ ಕಮಿನ್ಸ್ ದಾಖಲೆಯ 20.50 ಕೋಟಿಯ ಬೆಲಗೆ ಎಸ್‌ಆರ್‌ಎಚ್ ಸೇರಿದರು.
ಇದಾದ ಬಳಿಕ ಅಲ್ಜಾರಿ ಜೋಸೆಫ್‌ರಿಗೆ ಬಿಡ್ ಮಾಡಿದ ಆರ್‌ಸಿಬಿ 11.50 ಕೋಟಿ ನೀಡಿತು. ಶಿವಂ ಮಾವಿ, ಯಶ್ ದಾಯಳ್, ಟಾಮ್ ಕರನ್, ಲಾಕಿ ಫಾರ್ಗುಸನ್ ಸೇರಿದಂತೆ ಇನ್ನು ಇಬ್ಬರು ವಿದೇಶಿ ಆಟಗಾರರಿಗೆ ಹಣ ಹೂಡಲು ಆರ್‌ಸಿಬಿ ಮುಂದಾಗಿತ್ತು. ಇದನ್ನೆಲ್ಲಾ ಕಂಡ ಅಭಿಮಾನಿಗಳು ತಮ್ಮ ಬೆಸರವನ್ನು ವ್ಯಕ್ತ ಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications