ಐಪಿಎಲ್2020; ಕೊಲ್ಕತ್ತಾ ನಾಯಕನಾಗಿ ಮುಂದುವರಿಯುತ್ತಾರಾ ದಿನೇಶ್ ಕಾರ್ತಿಕ್?

ಕೋಲ್ಕತ್ತಾ ನೈಟ್‌ರೈಡರ್ಸ್ ತಂಡ ಹರಾಜು ಪ್ರಕ್ರಿಯೆಯಲ್ಲಿ ಭರ್ಜರಿ ಕಮಾಲ್ ಮಾಡಿದೆ. ಪ್ರಮುಖವಾಗಿ ಹಾಲಿ ಏಕದಿನ ವಿಶ್ವಕಪ್ ತಂಡ ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್ ಅವರನ್ನು ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಇಂಗ್ಲೆಂಡ್ ತಂಡದ ನಾಯಕ ಮಾರ್ಗನ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂಬ ಮಾತು ಕೇಳಿ ಬಂದಿತ್ತು.
ಆದರೆ ಇದೀಗ ಕೊಲ್ಕತ್ತಾ ನೂಟ್ ರೈಡರ್ಸ್ ತಂಡದ ನಾಯಕತ್ವ ಯಾರಿಗೆ ಎಂಬ ಮಾತಿಗೆ ಸ್ಪಷ್ಟತೆ ಸಿಕ್ಕಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿರುವ ಬ್ರೆಂಡನ್ ಮೆಕ್‌ಕಲಮ್ ಈ ಬಗ್ಗೆ ಹೇಳಿಕೆ ನೀಡಿದ್ದು ಕೆಕೆಆರ್ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಿಲ್ಲಾ ಎಂದಿದ್ದಾರೆ.
ಹೀಗಾಗಿ ಕೊಲ್ಕತ್ತಾ ತಂಡದ ನಾಯಕ ದಿನೇಶ್ ಕಾರ್ತಿಕ್ ನಾಯಕರಾಗಿ ಮುಂದುವರಿಯುವುದು ಖಚಿತವಾಗಿದೆ. ಕಳೆದ ಐಪಿಎಲ್ ಸೀಸನ್‌ಗೂ ಮೊದಲು ದಿನೇಶ್ ಕಾರ್ತಿಕ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿತ್ತು ಕೊಲ್ಕತ್ತಾ.
ಮಾಧ್ಯಮದ ಜೊತೆಗೆ ಮಾತನಾಡಿದ ಕೋಚ್ ಮೆಕ್‌ಕಲಮ್, ಇಯಾನ್ ಮಾರ್ಗನ್ ಅವರು ಅನುಭವಿ ಆಟಗಾರ. ಅವರ ಅನುಭವ ತಂಡಕ್ಕೆ ಲಾಭವಾಗಲಿದೆ. ಮಾತ್ರವಲ್ಲ ಮುಖ್ಯವಾಗಿ ನಾಲ್ಕನೇ ಕ್ರಮಾಂಕದಲ್ಲಿ ಮಾರ್ಗನ್ ಅವರು ತಂಡಕ್ಕೆ ಉಪಯುಕ್ತವಾಗಲಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ.
ಕೊಲ್ಕತ್ತಾ ತಂಡ ಮಾರ್ಗನ್ ಜೊತೆಗೆ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು15.5 ಕೋಟಿ ನೀಡಿ ಖರೀದಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ವಿದೇಶಿ ಆಟಗಾರ ಪಡೆದಿರುವ ಅತಿ ದೊಡ್ಡ ಮೊತ್ತವಾಗಿದೆ. ಮಾರ್ಗನ್ 5.25ಕೋಟಿಗೆ ಹರಾಜಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications