ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಅಂಡರ್ 19 ಕ್ರಿಕೆಟರ್ಸ್ ವಿರಾಟ್, ಪ್ರಿಯಂಗೆ ಭರ್ಜರಿ ರೇಟ್

IPL auction 2020 | ಕೋಟಿ ಬೆಲೆಗೆ ಹರಾಜಾದ ಟೀಂ ಇಂಡಿಯಾದ ಜೂನಿಯರ್ಸ್ | Oneindia Kannada
IPL auction 2020: India U-19 stars Virat Singh, Ravi Bishnoi, Priyam Garg, Yashasvi Jaiswal sold for big money

ಕೋಲ್ಕತಾ, ಡಿಸೆಂಬರ್ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ ಆವೃತ್ತಿಗೆ ಹರಾಜು ಪ್ರಕ್ರಿಯೆ ಇದೇ ಮೊದಲ ಬಾರಿಗೆ ಕೊಲ್ಕತಾದಲ್ಲಿ ನಡೆದಿದ್ದು, ಭಾರತ ತಂಡದ ಅಂಡರ್ 19 ಆಟಗಾರರು ಉತ್ತಮ ಮೊತ್ತಕ್ಕೆ ಹರಾಜಾಗಿ ಗಮನ ಸೆಳೆದಿದ್ದಾರೆ.

ಐಪಿಎಲ್ ಹರಾಜು; ವಿಶೇಷ ಪುಟ

ಪ್ಯಾಟ್ ಕಮಿನ್ಸ್, ಗ್ಲೆನ್ ಮ್ಯಾಕ್ಸ್ ವೆಲ್ ರಂಥ ಸ್ಟಾರ್ ಆಟಗಾರರ ನಡುವೆ ಅಂಡರ್ 19 ತಂಡದ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಫ್ರಾಂಚೈಸಿಗಳು ಮನಸ್ಸು ಮಾಡಿದ್ದು ವಿಶೇಷವಾಗಿತ್ತು.

ಹರಾಜಿನ ನಂತರ ಆರ್ ಸಿಬಿ ತಂಡ: ಕೇನ್, ಫಿಂಚ್, ಮೋರಿಸ್ ಬಲಹರಾಜಿನ ನಂತರ ಆರ್ ಸಿಬಿ ತಂಡ: ಕೇನ್, ಫಿಂಚ್, ಮೋರಿಸ್ ಬಲ

ಯಶಸ್ವಿ ಜೈಸ್ವಾಲ್: ಬ್ಯಾಟ್ಸ್ ಮನ್ ಯಶಸ್ವಿ ಜೈಸ್ವಾಲ್ ಗಾಗಿ ಅನೇಕ ಫ್ರಾಂಚೈಸಿಗಳು ಪೈಪೋಟಿ ನಡೆಸಿದ್ದು ವಿಶೇಷವಾಗಿತ್ತು. ಪ್ರಥಮದರ್ಜೆ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಗಮನ ಸೆಳೆದ ಈ ಆಟಗಾರ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಸ್ಟಾರ್ ಆಗಿ ಮಿಂಚಿದ್ದಲ್ಲದೆ 6 ಪಂದ್ಯಗಳಲ್ಲಿ 25 ಸಿಕ್ಸ್ ಸಿಡಿಸಿದ್ದಾರೆ. ಇಂದಿನ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 2 ಕೋಟಿ ರು ನೀಡಿ ಖರೀದಿಸಿದೆ.

ವಿರಾಟ್ ಸಿಂಗ್: ಜಾರ್ಖಂಡ್ ಆಟಗಾರ ವಿರಾಟ್ ಕೂಡಾ ನಿರೀಕ್ಷೆಯಂತೆ ಫ್ರಾಂಚೈಸಿಗಳ ಗಮನ ಸೆಳೆದರು. ಸನ್ ರೈಸರ್ಸ್ ಹೈದರಾಬಾದ್ ತಂಡದ ಮೊದಲ ಆಯ್ಕೆಯಾದರು. ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ನಲ್ಲಿ 10 ಪಂದ್ಯಗಳಲ್ಲಿ 343 ರನ್ ಬಾರಿಸಿದ್ದ ವಿರಾಟ್, ವಿಜಯ್ ಹಜಾರೆ ಟ್ರೋಫಿಯಲ್ಲಿ 7 ಪಂದ್ಯಗಳಲ್ಲಿ 335 ರನ್, 83.75 ರನ್ ಸರಾಸರಿ, 100.60 ಸ್ಟ್ರೈಕ್ ರೇಟ್ ನಂತೆ ರನ್ ಗಳಿಸಿದ್ದರು.

ಐಪಿಎಲ್ 2020: ಹರಾಜಾದ, ಹರಾಜಾಗದ ಕ್ರಿಕೆಟರ್ಸ್ ಸಂಪೂರ್ಣ ಪಟ್ಟಿಐಪಿಎಲ್ 2020: ಹರಾಜಾದ, ಹರಾಜಾಗದ ಕ್ರಿಕೆಟರ್ಸ್ ಸಂಪೂರ್ಣ ಪಟ್ಟಿ

ರವಿ ಬಿಷ್ನೋಯಿ: ಪ್ರತಿಭಾವಂತ ಲೆಗ್ ಸ್ಪಿನ್ನರ್ ರವಿ ಅವರು 7 ಪಂದ್ಯಗಳಿಂದ 12 ವಿಕೆಟ್ 4.37 ಎಕಾನಮಿಯಂತೆ ಗಳಿಸಿದ್ದಾರೆ. ಇಂದಿನ ಹರಾಜಿನಲ್ಲಿ 20 ಲಕ್ಷ ರು ಮೂಲಬೆಲೆ ಹೊಂದಿದ್ದ ರವಿಗೆ 2 ಕೋಟಿ ರು ನೀಡಿ ಕಿಂಗ್ಸ್ ಎಲೆವನ್ ಪಂಜಾಬ್ ತಂಡ ಖರೀದಿಸಿತು.

ಐಪಿಎಲ್ ಹರಾಜು; ದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರರು ಯಾರು?ಐಪಿಎಲ್ ಹರಾಜು; ದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರರು ಯಾರು?

ಪ್ರಿಯಂ ಗರ್ಗ್: ಅಂಡರ್ 19 ತಂಡದ ನಾಯಕ ಪ್ರಿಯಂ ಗರ್ಗ್ ಅವರಿಗೆ ಮೂಲ ಬೆಲೆ 20 ಲಕ್ಷ ರು ನಿಗದಿಪಡಿಸಲಾಗಿತ್ತು. ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಪೈಪೋಟಿ ಮೇಲೆ ಬಿಡ್ ಮಾಡಿದ್ದವು. ಕೊನೆಗೆ 1.90 ಕೋಟಿ ರು ನೀಡಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಖರೀದಿಸಿದೆ.

READ IN ENGLISH

Story first published: Thursday, December 19, 2019, 20:35 [IST]
Other articles published on Dec 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X