ಐಪಿಎಲ್ ಹರಾಜಿಗೆ ಕ್ಷಣಗಣನೆ: ಮಿನಿ ಹರಾಜಿಗೂ ಮುನ್ನ ನೀವು ತಿಳಿದಿರಲೇಬೇಕಾದ ಸಂಗತಿಗಳು

ಐಪಿಎಲ್ 14ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಚೆನ್ನೈನಲ್ಲಿ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಬಿಸಿಸಿಐ ಹರಾಜಿನಲ್ಲಿ ಪಾಲ್ಗೊಳ್ಳುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ನಾಳಿನ ಹರಾಜಿನಲ್ಲಿ ಯಾರ್ಯಾರನ್ನು ಯಾವ ತಂಡ ತೆಕ್ಕೆಗೆ ಸೇರಿಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಅಂತಿಮ 292 ಆಟಗಾರರ ಪಟ್ಟಿಯನ್ನು ಈ ಹಿಂದೆಯೇ ಬಿಸಿಸಿಐ ಪ್ರಕಟಿಸಿದೆ. ಯಾವೆಲ್ಲಾ ಆಟಗಾರರತ್ತ ಫ್ರಾಂಚೈಸಿಗಳು ಚಿತ್ತ ನೆಟ್ಟಿವೆ ಎಂಬ ಕುತೂಹಲಕ್ಕೆ ಈ ಹರಾಜಿನಲ್ಲಿ ಉತ್ತರ ದೊರೆಯಲಿದೆ. ಇದು ಮಿನಿ ಹರಾಜು ಆಗಿದ್ದರು ಯಾವ ಆಟಗಾರರು ಹರಾಜಾಗದೆ ಉಳಿಯಲಿದ್ದಾರೆ, ಯಾವ ಆಟಗಾರರು ಅಚ್ಚರೊಯ ಮೊತ್ತಕ್ಕೆ ಹರಾಜಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸುವ ಅಂಶಗಳಾಗಿದೆ.
ಈ ಹರಾಜು ಪ್ರಕ್ರಿಯೆಗೂ ಮುನ್ನ ಕೆಲ ಪ್ರಮುಖ ಸಂಗತಿಗಳು ನಿಮಗೆ ತಿಳಿದಿರಲೇ ಬೇಕು. ಯಾವುದು ಆ ಸಂಗತಿಗಳು ಮುಂದೆ ಓದಿ..

ಹರಾಜು ಪ್ರಕ್ರಿಯೆ ಯಾವಾಗ ಮತ್ತು ಎಲ್ಲಿ
ಈ ಬಾರಿಯ ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಚೆನ್ನೈನ ಎಂಎ ಚದಂಬರಂ ಸ್ಟೇಡಿಯಮ್‌ನಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯದ ಒಂದು ದಿನದ ನಂತರ ಆರಂಭವಾಗಲಿದೆ. ಈ ಬಾರಿಯ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿಯೇ ನಡೆಯಲಿದೆ.

ಹರಾಜು ಪ್ರಕ್ರಿಯೆ ನಡೆಯುವ ಸಮಯ
ಈ ಬಾರಿಯ ಹರಾಜು ಪ್ರಕ್ರಿಯೆ ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿದೆ. ಈ ಪ್ರಕ್ರಿಯೆ ಸುಮಾರು 5ರಿಂದ 6 ಗಂಟೆಗಳ ಕಾಲ ನಡೆಯುವ ಸಾಧ್ಯತೆಯಿದೆ

ನೇರಪ್ರಸಾರದ ಮಾಹಿತಿ
ಈ ಹರಾಜು ಪ್ರಕ್ರಿಯೆಯ ನೇರ ಪ್ರಸಾರವನ್ನು ಈ ಬಾರಿಯೂ ವೀಕ್ಷಕರು ಮನೆಯಲ್ಲಿ ಕುಳಿತು ವೀಕ್ಷಿಸಬಹುದು. ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ ಈ ಹರಾಜು ಪ್ರಕ್ರಿಯೆಯ ನೆರಪ್ರಸಾರವನ್ನು ಮಾಡಲಿದೆ. ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಹಾಗೂ ಜಿಯೋ ಟಿವಿಯಲ್ಲಿ ಇದರ ನೇರಪ್ರಸಾರವಿರಲಿದೆ. ಮೈಖೇಲ್ ಕನ್ನಡ ಈ ಬಗ್ಗೆ ಕ್ಷಣಕ್ಷಣದ ಮಾಹಿತಿಯನ್ನು ಓದುಗರಿಗೆ ನೀಡಲಿದೆ.

ಫ್ರಾಂಚೈಸಿಗಳ ಪರ್ಸ್ ಮೊತ್ತ
ಚೆನ್ನೈ ಸೂಪರ್ ಕಿಂಗ್ಸ್: 22.9 ಕೋಟಿ ರೂ
ಡೆಲ್ಲಿ ಕ್ಯಾಪಿಟಲ್ಸ್: 12.9 ಕೋಟಿ ರೂ
ಕಿಂಗ್ಸ್ ಇಲೆವೆನ್ ಪಂಜಾಬ್: 31.8 ಕೋಟಿ ರೂ
ಕೋಲ್ಕತಾ ನೈಟ್ ರೈಡರ್ಸ್: 10.75 ಕೋಟಿ ರೂ
ಮುಂಬೈ ಇಂಡಿಯನ್ಸ್: 15.35 ಕೋಟಿ ರೂ
ರಾಜಸ್ಥಾನ್ ರಾಯಲ್ಸ್: 34.85 ಕೋಟಿ ರೂ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 35.9 ಕೋಟಿ ರೂ
ಸನ್‌ರೈಸರ್ಸ್ ಹೈದರಾಬಾದ್: 10.75 ಕೋಟಿ ರೂ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications