For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಇನ್ನೂ ಅಂತಿಮವಾಗದ ಶೀರ್ಷಿಕೆ ಪ್ರಾಯೋಜಕತ್ವ, ಪ್ರಾಯೋಜಕರಿಲ್ಲದೆ ಹರಾಜು ಪ್ರಕ್ರಿಯೆ ಸಾಧ್ಯತೆ

IPL Auction 2021: BCCI might host auctions without a sponsor

ಮುಂಬರುವ ಐಪಿಎಲ್ ಟೂರ್ನಿಯ ಮಿನಿ ಹರಾಜಿಗೆ ಬಿಸಿಸಿಐ ದಿನಾಂಕವನ್ನು ಈಗಾಗಲೇ ಘೋಷಣೆ ಮಾಡಿದ್ದು ಫೆಬ್ರವರಿ 18ರಂದು ಹರಾಜು ನಡೆಯಲಿದೆ. ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿಯ ಎರಡು ಹಾಗೂ ಮೂರನೇ ಪಂದ್ಯದ ನಡುವಿನ ಅವಧಿಯಲ್ಲಿ ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಶೀರ್ಷಿಕೆ ಪ್ರಾಯೋಜಕರಿಲ್ಲದೆಯೇ ನಡೆಯುವ ಸಾಧ್ಯತೆಗಳು ಹೆಚ್ಚಾಗಿದೆ.

ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಈವರೆಗೆ ಕಂಪನಿಯ ಜೊತೆಗೆ ಬಿಸಿಸಿಐ ಒಪ್ಪಂದವನ್ನು ಮಾಡಿಕೊಂಡಿಲ್ಲ. ಹರಾಜು ಪ್ರಕ್ರಿಯೆಗೆ ಇನ್ನೂ ಕಡಿಮೆ ಅವಧಿ ಇರುವ ಕಾರಣದಿಂದಾಗಿ ಹಾಗೂ ಕೆಲವೇ ದಿನಗಳಲ್ಲಿ ಇಂಗ್ಲೆಂಡ್ ಜೊತೆಗಿನ ಟೆಸ್ಟ್ ಸರಣಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಪ್ರಾಯೋಜಕರನ್ನು ಅಂತಿಮಗೊಳಿಸಲು ಬಿಸಿಸಿಐ ವಿಫಲವಾಗಿದೆ.

ಕಳೆದ ಬಾರಿಯ ಐಪಿಎಲ್‌ಗೆ ಮೂಲ ಶೀರ್ಷಿಕೆ ಪ್ರಾಯೋಜಕತ್ವವನ್ನು ವಿವೋ ವಹಿಸಿಕೊಂಡಿತ್ತು. ಆದರೆ ಭಾರತ ಹಾಗೂ ಚೀನಾ ಮಧ್ಯೆ ಉಂಟಾದ ಘರ್ಷಣೆಯಿಂದಾಗಿ ಚೀನಾ ಮೂಲದ ವಿವೋ ಪ್ರಾಯೋಜಕತ್ವ ವಹಿಸಿಕೊಳ್ಳುವುದಕ್ಕೆ ಭಾರತದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಸ್ವತಃ ವಿವೋ ಪ್ರಾಯೋಜಕತ್ವದಿಂದ ಹಿಂದಕ್ಕೆ ಸರಿದಿತ್ತು.

ಅದಾದ ಬಳಿಕ ಒಂದು ಅವಧಿಗಾಗಿ ಬಿಸಿಸಿಐ ಹೊಸ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಡ್‌ಗಾಗಿ ಆಹ್ವಾನಿಸಿತ್ತು. ಈ ಬಿಡ್‌ನಲ್ಲಿ ಗೆದ್ದ ಡ್ರೀಮ್ 11 ಕಳೆದ ಬಾರಿಯ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಡ್ರೀಮ್ 11 ವಹಿಸಿಕೊಂಡಿತ್ತು. ಆದರೆ ಇದು ಒಂದು ವರ್ಷದ ಅವಧಿಯದ್ದಾಗಿದೆ. ಹೀಗಾಗಿ ಆ ಒಪ್ಪಂದ ಈ ಅಂತ್ಯವಾದ ಕಾರಣ ಹೊಸ ಶೀರ್ಷಿಕೆ ಪ್ರಾಯೋಜಕತ್ವವನ್ನು ಬಿಸಿಸಿಐ ಇನ್ನೂ ಅಂತಿಮಗೊಳಿಸಿಲ್ಲ.

ಐಪಿಎಲ್‌ನ ಹೊಸ ಪ್ರಾಯೋಜಕರನ್ನು ಹೊಂದುವ ಪ್ರಯತ್ನದ ಬಗ್ಗೆ ಬಿಸಿಸಿಐ ಅಥವಾ ಐಪಿಎಲ್ ಆಡಳಿತ ಮಂಡಳಿಯ ಕಡೆಯಿಂದ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಮುಂದುವರಿಸಲು ಕಾನೂನಾತ್ಮಕ ತೊಡಕುಗಳು ಬರುವ ಸಾಧ್ಯತೆಯಿದೆ. ವಿವೋ ಜೊತೆಗಿನ ಒಪ್ಪಂದ ಮುಂದುವರಿಸಲು ಚೀನಾ ವಿರುದ್ಧದ ಭಾರತೀಯರ ಭಾವನೆ ಅಸಹನೆ ಮುಂದುವರಿದಿರುವ ಕಾರಣ ಕಷ್ಟ ಸಾಧ್ಯ. ಹೀಗಾಗಿ ಹೊಸ ಪ್ರಾಯೋಜಕತ್ವಕ್ಕೆ ಮತ್ತೆ ಬಿಡ್ಡಿಂಗ್ ಪ್ರಕ್ರಿಯೆ ಮೂಲಕವೇ ಆಯ್ಕೆ ನಡೆಯುವ ಸಾಧ್ಯತೆಯಿದೆ.

Story first published: Sunday, January 31, 2021, 13:21 [IST]
Other articles published on Jan 31, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+