Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಅತಿ ಹೆಚ್ಚು ಬೆಲೆಗೆ ಮಾರಾಟವಾದ ವಿದೇಶಿ ಕ್ರಿಕೆಟರ್ ಮೊರಿಸ್

IPL auction 2021: Chris Morris become most expensive Foreign Player in IPL history

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಗಾಗಿ ಫೆಬ್ರವರಿ 18ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಮೊದಲ ಹಂತದಲ್ಲೆ ಭರ್ಜರಿ ಮಾರಾಟ ಕಾಣಲಾಗಿದೆ. ಆಲ್ ರೌಂಡರ್ ಕ್ರಿಸ್ ಮೊರಿಸ್ ಅವರು ಅತಿ ಹೆಚ್ಚು ಬೆಲೆಗೆ ಮಾರಾಟವಾದ ವಿದೇಶಿ ಕ್ರಿಕೆಟರ್ ಎಂಬ ದಾಖಲೆ ಬರೆದಿದ್ದಾರೆ.

ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಕ್ರಿಸ್ ಮೊರಿಸ್ ಗಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ಸ್ ಕಿಂಗ್ ತಂಡ ನಡುವೆ ತೀವ್ರ ಪೈಪೋಟಿ ಬಿಡ್ ನಡೆದು ಕೊನೆಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ16.25 ಕೋಟಿ ರುಗೆ ಮಾರಾಟವಾಗಿ ಹೊಸ ದಾಖಲೆ ಬರೆದಿದ್ದಾರೆ.

ಐಪಿಎಲ್ ಹರಾಜಿನಲ್ಲಿ ಅಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದ್ದರು. ಅಸ್ಟ್ರೇಲಿಯಾದ ವೇಗಿ ಐಪಿಎಲ್ ಇತಿಹಾಸದಲ್ಲೇ ವಿಶೇಷ ದಾಖಲೆ ಬರೆದು 15.50 ಕೋಟಿ ಬೆಲೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದು ದಾಖಲೆಯಾಗಿತ್ತು.

ಆದರೆ, ಕ್ರಿಸ್ ಮೊರಿಸ್ ಅವರು 2021ರ ಹರಾಜಿನಲ್ಲಿ ಈ ದಾಖಲೆ ಮುರಿದಿದ್ದಾರೆ. ವಿದೇಶಿ ಅಟಗಾರನೋರ್ವನ ಐಪಿಎಲ್ ಇತಿಹಾಸದಲ್ಲಿ ನಡೆದ ಹರಾಜಿನಲ್ಲಿ ಪಡೆದ ಅತಿದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇದಕ್ಕೂ ಮುನ್ನ 2017ರಲ್ಲಿ 14.5 ಕೋಟಿಗೆ ಬೆನ್ ಸ್ಟೋಕ್ಸ್ ಹರಾಜಾಗಿದ್ದು ಇಲ್ಲಿಯವರೆಗೆ ವಿದೇಶಿ ಆಟಗಾರ ಪಡೆದಿರುವ ದೊಡ್ಡ ಮೊತ್ತವಾಗಿತ್ತು.

2015 ರ ಆವೃತ್ತಿಯಲ್ಲಿ ಯುವರಾಜ್ ಸಿಂಗ್ ಅವರು ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ 16 ಕೋಟಿಗೆ ಮಾರಾಟವಾಗಿದ್ದರು. ಈ ದಾಖಲೆಯನ್ನು ಕ್ರಿಸ್ ಮೊರಿಸ್ ಮುರಿದಿದ್ದು 16.25 ಕೋಟಿ ರು ಬೆಲೆ ಮಾರಾಟವಾಗಿ ಹೊಸ ದಾಖಲೆ ಬರೆದಿದ್ದಾರೆ.

Story first published: Friday, February 19, 2021, 9:40 [IST]
Other articles published on Feb 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+