For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮೊಹಮ್ಮದ್ ಅಝರುದ್ದೀನ್ ಮೊದಲ ಕನಸು ನನಸು

IPL Auction 2021: The first dream of Mohammed Azharuddeen is done

ಚೆನ್ನೈ: ಚೆನ್ನೈಯ ಖಾಸಗಿ ಹೋಟೆಲ್‌ನಲ್ಲಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಸೀಸನ್‌ಗೆ ಸಂಬಂಧಿಸಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. 26ರ ಹರೆಯದ, ಕೇರಳದ ಯುವ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಮೊಹಮ್ಮದ್ ಅಝರುದ್ದೀನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಾಲಾಗಿದ್ದಾರೆ.

20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜು ಕಣದಲ್ಲಿದ್ದ ಮೊಹಮ್ಮದ್ ಅಝರುದ್ಧಿನ್ ಅವರನ್ನು ಮೂಲ ಬೆಲೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ. ಅಝರ್ ಅವರನ್ನು ಆರ್‌ಸಿಬಿ ಖರೀದಿಸುತ್ತಲೇ ಅಝರ್ ಅವರು ಬರೆದುಕೊಂಡಿದ್ದ ಲಿಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾನು ಇರುವ ಜಾಗದಲ್ಲಿ ಅಝರ್ ಒಂದು ಪಟ್ಟಿ ಹಾಕಿಕೊಂಡಿದ್ದಾರೆ. ಅಝರ್ ಅವರಿಗಿರುವ ಕನಸುಗಳ ಪಟ್ಟಿಯಿದು. ಈ ಪಟ್ಟಿಯಲ್ಲಿ ಐಪಿಎಲ್, ರಣಜಿಯಲ್ಲಿ ಸೀಸನ್‌ನಲ್ಲಿ 4 ಶತಕಗಳು, ಸ್ವತಂ ಮನೆ, ಬೆಂಝ್ ಕಾರು, 2023ರ ವಿಶ್ವಕಪ್‌ ಅಂತ ಬರೆಯಲಾಗಿದೆ. ಈ ಪಟ್ಟಿಯಲ್ಲಿ ಅಝರ್ ಅವರ ಐಪಿಎಲ್ ಕನಸು ಈಡೇರಿದಂತಾಗಿದೆ.

ಕೇರಳದವರಾದ ಮೊಹಮ್ಮದ್ ಅಝರುದ್ದೀನ್, 22 ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 959 ರನ್, ಲಿಸ್ಟ್‌ 'ಎ' ಪಂದ್ಯಗಳಲ್ಲಿ 445 ರನ್, 24 ಟಿ20 ಪಂದ್ಯಗಳಲ್ಲಿ 451 ಬಾರಿಸಿದ್ದಾರೆ. ಟಿ20 ಪಂದ್ಯಗಳಲ್ಲಿ 137* ರನ್ ಅಝರ್ ಅವರ ವೈಯಕ್ತಿಕ ಅತ್ಯಧಿಕ ರನ್ ಆಗಿದೆ. ಹರಾಜು ಕಣದಲ್ಲಿದ್ದವರಲ್ಲಿ ಕ್ರಿಸ್ ಮೋರಿಸ್ 16.25 ಕೋಟಿ ರೂ.ಗೆ ರಾಜಸ್ಥಾನ್ ಪಾಲಾಗಿದ್ದಾರೆ. ಇದೇ ಈ ಬಾರಿ ದೊಡ್ಡ ಮೊತ್ತವಾಗಿದೆ.

Story first published: Friday, February 19, 2021, 9:45 [IST]
Other articles published on Feb 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+