Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜು: ಮೂಲಬೆಲೆಗೆ ಕೆಕೆಆರ್ ಪಾಲಾದ ಅಜಿಂಕ್ಯಾ ರಹಾನೆ

IPL Auction 2022: Ajinkya Rahane Sold To kolkata knight riders for 1cr

ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದಾರೆ. ಈ ಹರಾಜಿನಲ್ಲಿ ಕೆಕೆಆರ್ ತಂಡ ಮಾತ್ರವೇ ಅಜಿಂಕ್ಯಾ ರಹಾನೆಯನ್ನು ಕೊಳ್ಳುವ ಉತ್ಸಾಹ ತೋರಿಸಿತು. ಹೀಗಾಗಿ ಅಜಿಂಕ್ಯಾ ರಹಾನೆ ಮೂಲ ಬೆಲೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದಾರೆ. ಅಜಿಂಕ್ಯಾ ರಹಾನೆ 1 ಕೋಟಿ ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದರು.

ಅಜಿಂಕ್ಯಾ ರಹಾನೆ ಈ ಹಿಂದಿನ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. 2019ರ ಆವೃತ್ತಿಯವರೆಗೆ ರಾಯಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದ ರಹಾನೆ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದರು. 2022ರ ಮೆಗಾ ಹರಾಜಿಗೆ ಮುನ್ನ ಹರಾಜು ಪಟ್ಟಿಗೆ ಅಜಿಂಕ್ಯಾ ರಹಾನೆಯನ್ನು ಫ್ರಾಂಚೈಸಿ ಬಿಡುಗಡೆಗೊಳಿಸಿತ್ತು. ಇದೀಗ ಮೆಗಾ ಹರಾಜಿನಲ್ಲಿ ಮತ್ತೆ ತಂಡಕ್ಕೆ ಸೇರ್ಪಡೆಗೊಳಿಸುವ ಉತ್ಸಾಹವನ್ನು ಡಿಸಿ ತೋರಿಲ್ಲ. ಹೀಗಾಗಿ ಕೆಕೆಆರ್ ತಂಡಕ್ಕೆ ಮೂಲ ಬೆಲೆಗೆ ರಹಾನೆ ಹರಾಜಾಗಿದ್ದಾರೆ.

ಅಜಿಂಕ್ಯಾ ರಹಾನೆ ಹೊರತು ಪಡಿಸಿ ಕೆಕೆಆರ್ ತಂಡ ಶೆಲ್ಡನ್ ಜಾಕ್ಸನ್, ಶಿವಂ ಮಾವಿ, ನಿತೀಶ್ ರಾಣಾ, ಶ್ರೇಯಸ್ ಐಯ್ಯರ್ ಹಾಗೂ ಪ್ಯಾಟ್ ಕಮ್ಮಿನ್ಸ್ ಅವರನ್ನು ವಶಕ್ಕೆ ಪಡೆದುಕೊಂಡಿದೆ. ಹರಾಜಿಕೂ ಮುನ್ನ ಕೆಕೆಆರ್ ಫ್ರಾಂಚೈಸಿ ವರುಣ್ ಚಕ್ರವರ್ತಿ, ವೆಂಕಟೇಶ್ ಐಯ್ಯರ್, ಆಂಡ್ರೆ ರಸ್ಸೆಲ್, ಹಾಗೂ ಸುನಿಲ್ ನರೈನ್ ಅವರನ್ನು ರೀಟೈಮ್ ಮಾಡಿಕೊಂಡಿತ್ತು.

ಶ್ರೇಯಸ್ ಐಯ್ಯರ್ ಅವರನ್ನು ತಂಡಕ್ಕೆ ಸೇರ್ಪೊಡೆಗೊಳಿಸಿರುವ ಕಾರಣ ನಾಯಕತ್ವ ಶ್ರೇಯಸ್ ಐಯ್ಯರ್ ಪಾಲಾಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ಬಾರಿಯ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಿದ್ದ ಜೋಸ್ ಬಟ್ಲರ್ ಈ ಬಾರಿಯ ಹರಾಜಿನ ಮೊದಲ ಸುತ್ತಿನಲ್ಲಿ ಯಾವುದೇ ತಂಡಕ್ಕೆ ಹರಾಜಾಗದೆ ಉಳಿದುಕೊಂಡಿದ್ದಾರೆ.

Story first published: Sunday, February 13, 2022, 15:46 [IST]
Other articles published on Feb 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+