ಐಪಿಎಲ್ ಹರಾಜು: ಆರ್‌ಸಿಬಿ ತೆಕ್ಕೆಗೆ ತಂಡಕ್ಕೆ ಮತ್ತೆ ಸೇರ್ಪಡೆಯಾದ ಹರ್ಷಲ್ ಪಟೇಲ್

ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಅವರನ್ನು ಮತ್ತೊಮ್ಮೆ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಪ್ರಮುಖ ವೇಗಿಯನ್ನು ಆರ್‌ಸಿಬಿ ಮತ್ತೊಮ್ಮೆ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಸಾಕಷ್ಟು ಪೈಪೋಟಿ ನಡೆಸಿದ ಆರ್‌ಸಿಬಿ ಕಡೆಗೂ ಹರ್ಷಲ್ ಪಟೇಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಹರ್ಷಲ್ ಪಟೇಲ್ 10.75 ಕೋಟಿ ಜೇಬಿಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹರ್ಷಲ್ ಪಟೇಲ್ ಕಳೆದ ಆವೃತ್ತಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಐಪಿಎಲ್ ಇತಿಹಾಸದಲ್ಲಿ ಸೀಸನ್ ಒಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಡ್ವೇಯ್ನ್ ಬ್ರಾವೋ ಅವರೊಂದಿಗೆ ಹಂಚಿಕೊಂಡಿದ್ದರು. ಬಳಿಕ ಹರ್ಷಲ್ ಭಾರತೀಯ ತಂಡದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದರು. ಇದೀಗ ನಿರೀಕ್ಷೆಯಂತೆಯೇ ಹರಾಜಿನಲ್ಲಿ ಹರ್ಷಲ್ ಪಟೇಲ್ ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿತ್ತು. ಆರ್‌ಸಿಬಿ ತಂಡದ ಪಾಲಾಗಿದ್ದಾರೆ.
ಕಳೆದ ಆವೃತ್ತಿಯಲ್ಲಿ ಹರ್ಷಲ್ ಪಟೇಲ್ ನೀಡಿದ ಪ್ರದರ್ಶನದಿಂದಾಗಿ ಉತ್ತಮ ಮೊತ್ತವನ್ನು ಗಳಿಸುವ ನಿರೀಕ್ಷೆಯಿತ್ತು. ಅಲ್ಲದೆ ಆರ್‌ಸಿಬಿ ಮತ್ತೊಮ್ಮೆ ಈ ವೇಗಿಯನ್ನು ತಂಡಕ್ಕೆ ಸೇರ್ಪಡೆಗೋಳಿಸುವ ಪ್ರಯತ್ನ ನಡೆಸಬಹುದು ಎಂಬ ನಿರೀಕ್ಷೆಯೂ ಇತ್ತು. ಈ ನಿರೀಕ್ಷೆಗೆ ಪೂರಕವಾಗಿ ಆರ್‌ಸಿಬಿ ಫ್ರಾಂಚೈಸಿ ವೇಗಿಯನ್ನು ತನ್ನ ತೆಕ್ಕೆಗೆ ಮತ್ತೊಮ್ಮೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರ್‌ಸಿಬಿ ರೀಟೆನ್ಶನ್ ಸಂದರ್ಭದಲ್ಲಿ ಹರ್ಷಲ್ ಪಟೇಲ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿರಲಿಲ್ಲ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಮಾತ್ರವೇ ರೀಟೈನ್ ಮಾಡಿಕೊಂಡಿತ್ತು. ಆದರೆ ಹರಾಜಿನಲ್ಲಿ ಹರ್ಷಲ್ಗ ಪಟೇಲ್ ಅವರನ್ನು ಬಿಟ್ಟುಕೊಡುವ ಯಾವ ಲಕ್ಷಣವನ್ನು ತೋರಲಿಲ್ಲ ಆರ್‌ಸಿಬಿ. ಇದರ ಪರಿಣಾಮವಾಗಿ ಆರ್‌ಸಿಬಿ ತಂಡಕ್ಕೆ 10.75 ಕೋಟಿಗೆ ಹರ್ಷಲ್ ಮತ್ತೆ ಸೇರ್ಪಡೆಯಾಗಿದ್ದಾರೆ.
ಇದಕ್ಕೂ ಮುನ್ನ ಆರ್‌ಸಬಿ ಅನುಭವಿ ಬ್ಯಾಟರ್ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಫಾಫ್ ಡು ಪ್ಲೆಸಿಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಆರ್‌ಸಿಬಿ 7 ಕೋಟಿ ಖರ್ಚು ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications