ಐಪಿಎಲ್ ಹರಾಜು 2022: ಭಾರೀ ಮೊತ್ತಕ್ಕೆ ಮತ್ತೆ ಮುಂಬೈ ಇಂಡಿಯನ್ಸ್ ಪಾಲಾದ ಇಶಾನ್ ಕಿಶನ್

ಭಾರತದ ಭರವಸೆಯ ಯುವ ಆಟಗಾರ ಇಶಾನ್ ಕಿಶನ್ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಹರಾಜಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಇಶಾನ್ ಕಿಶನ್‌ಗಾಗಿ ಸಾಕಷ್ಟು ಪೈಪೋಟಿಯನ್ನು ನಡೆಸಿದವು. ಇದರ ಪರಿಣಾಮವಾಗಿ ಐಪಿಎಲ್ ಮೆಗಾ ಹರಾಜಿನ ಮೊದಲ ದಿನದ ಅತ್ಯುತ್ತಮ ಮೊತ್ತವನ್ನು ಪಡೆದುಕೊಂಡಿದ್ದಾರೆ ಇಶಾನ್ ಕಿಶನ್. ಜಾರ್ಖಂಡ್ ಮೂಲದ ಯುವ ಆಟಗಾರನಿಗಾಗಿ 15.25 ಕೋಟಿ ಮೊತ್ತವನ್ನು ಖರ್ಚು ಮಾಡಿದೆ.
ಇಶಾನ್ ಕಿಶನ್ ಈ ಹಿಂದಿನ ಆವೃತ್ತಿಯಲ್ಲಿಯೂ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಕಳೆದ ಎರಡ್ಮೂರು ಆವೃತ್ತಿಗಳಲ್ಲಿ ಇಶಾನ್ ಕಿಶನ್ ನೀಡಿದ ಅಮೋಘ ಪ್ರದರ್ಶನದಿಂದಾಗಿ ಉತ್ತಮ ಮೊತ್ತವನ್ನು ಪಡೆಯುವ ನಿರೀಕ್ಷೆಯಿತ್ತು. ಕಳೆದ ವರ್ಷ ಇಶಾನ್ ಕಿಶನ್ ಭಾರತ ತಂಡದಲ್ಲಿ ಕೂಡ ಸ್ಥಾನವನ್ನು ಪಡೆದುಕೊಂಡಿದ್ದರು. ಸದ್ಯ ವೈಟ್‌ಬಾಲ್ ತಂಡದ ಪ್ರಮುಖ ಸದಸ್ಯನಾಗಿದ್ದಾರೆ.
ಇಶಾನ್ ಕಿಶನ್ ಸ್ಪೋಟಕವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿಯೂ ಉತ್ತಮವಾಗಿ ಪ್ರದರ್ಶನ ನೀಡಬಲ್ಲರು. ಇನ್ನು ಬ್ಯಾಟಿಂಗ್ ಮಾತ್ರವಲ್ಲದೆ ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿಯೂ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ.
ಇಶಾನ್ ಕಿಶನ್ ಸೇರ್ಪಡೆಯೊಂದಿಗೆ ಮುಂಬೈ ಇಂಡಿಯನ್ಸ್ ಹಿಂದಿನ ಆವೃತ್ತಿಯಲ್ಲಿ ತಂಡದಲ್ಲಿದ್ದ ಆಟಗಾರನನ್ನು ತಂಡಕ್ಕೆ ಮತ್ತೊಮ್ಮೆ ಸೇರ್ಪಡೆಗೊಳಿಸಿದಂತಾಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ದಿನದ ಮೊದಲ ಆಟಗಾರನನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.
ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಂಡಿತ್ತು. ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಕಿರಾನ್ ಪೊಲಾರ್ಡ್ ಹಾಗೂ ಸೂರ್ಯಕುಮಾರ್ ಯಾದವ್ ಹರಾಜಿಗೂ ಮುನ್ನವೇ ರೀಟೈನ್ ಆಗಿದ್ದರು. ಈ ಬಳಗವನ್ನು ಇಶಾನ್ ಕಿಶನ್ ಕೂಡ ಸೇರಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications