For Quick Alerts
ALLOW NOTIFICATIONS  
For Daily Alerts
 

ರೀಟೈನ್ ಆಗದ ಆಟಗಾರರೆಲ್ಲರೂ ಟಿವಿಗೆ ಅಂಟಿಕೊಂಡಿರುತ್ತಾರೆ: ರೋಹಿತ್ ಶರ್ಮಾ

IPL Auction 2022: Rohit Sharma on mega auction said All unretained players will be glued to TV

ಒಂದೆಡೆ ಭಾರತ ಹಾಗೂ ವೆಸ್ಟ್ ಇಂಡಿಸ್ ನಡುವಿನ ಏಕದಿನ ಸರಣಿ ಅಂತ್ಯವಾಗಿದ್ದರೆ ಮತ್ತೊಂದೆಡೆ ಮೆಗಾ ಆಕ್ಷನ್ ವೇದಿಕೆ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಐಪಿಎಲ್ ಫ್ರಾಂಚೈಸಿಗಳಷ್ಟೇ ಈ ಹರಾಜು ಪಟ್ಟಿಯಲ್ಲಿರುವ ಆಟಗಾರರು ಕೂಡ ಭಾರೀ ಕುತೂಹಲದಿಂದ ಇರುತ್ತಾರೆ. ಈ ವಿಚಾರವಾಗಿ ಟೀಮ್ ಇಂಡಿಯಾ ವೈಟ್‌ಬಾಲ್ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ರೋಹಿತ್ ಶರ್ಮಾ ಶನಿವಾರ ಭಾನುವಾರ ನಡೆಯುವ ಹರಾಜಿನ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಐಪಿಎಲ್ ತಂಡಗಳಿಂದ ರೀಟೈನ್ ಆಗದ ಆಟಗಾರರು ಟಿವಿಗೆ ಸಂಪೂರ್ಣವಾಗಿ ಅಂಟಿಕೊಂಡಿರುತ್ತಾರೆ ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ಈ ಆಟಗಾರರೆಲ್ಲರೂ ಐಪಿಎಲ್ ಹರಾಜು ಸಂದರ್ಭದಲ್ಲಿ ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿರುತ್ತಾರೆ ಎಂದಿದ್ದಾರೆ.

ಐಪಿಎಲ್ 2022ರ ಆವೃತ್ತಿಗೂ ಮುನ್ನ ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಬೇರೆ ಬೇರೆ ಕಾರಣಗಳಿಗಾಗಿ ಎಲ್ಲಾ ಐಪಿಎಲ್ ಪ್ರೇಮಿಗಳು ಕೂಡ ಈ ಹರಾಜನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇತ್ತ ಎಲ್ಲಾ ಫ್ರಾಂಚೈಸಿಗಳು ಕೂಡ ಅಷ್ಟೇ ಕಾತರದಿಂದ ತಮ್ಮ ತಮ್ಮ ತಂಡಗಳನ್ನು ಕಟ್ಟಲು ತುದಿಗಾಲಲ್ಲಿ ನಿಂತಿದೆ.

ಯಾವ್ಯಾವ ಆಟಗಾರರನ್ನು ಗುರಿಯಾಗಿಸಿ ಹರಾಜು ನಡೆಸಬೇಕು? ಯಾವ ಆಟಗಾರರ ಅಗತ್ಯ ತಂಡಕ್ಕೆ ಬಹಳಷ್ಟಿದೆ? ತಂಡದ ಸಂಯೋಜನೆಯಲ್ಲಿ ಯಾವ ಆಟಗಾರರಿಗೆ ಮಹತ್ವ ನೀಡಿದರೆ ಉತ್ತಮ ಈ ಎಲ್ಲಾ ಲೆಕ್ಕಾಚಾರಗಳ ಜೊತೆಗೆ ನಾನಾ ಅಂಶಗಳನ್ನು ಮುಂದಿಟ್ಟುಕೊಂಡು ಫ್ರಾಂಚೈಸಿಗಳು ಈ ಹರಾಜಿನ ಲೆಕ್ಕಾಚಾರವನ್ನು ನಡೆಸುತ್ತಿವೆ. ಶನಿವಾರ ಹಾಗೂ ಭಾನುವಾರ ಬೆಂಗಳುರಿನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಈ ಎಲ್ಲಾ ಕುತೂಹಲಗಳಿಗೆ ಸ್ಪಷ್ಟ ಉತ್ತರಗಳು ದೊರೆಯಲಿದೆ.

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರನಿ ಅಂತ್ಯವಾಗಿದ್ದು ಇದೀಗ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡದ ಆಟಗಾರರು ಟಿ20 ಸರಣಿಯ ಮೇಲೆ ಚಿತ್ತ ನೆಟ್ಟಿದ್ದಾರೆ. ಈ ಟಿ20 ಪಂದ್ಯಗಳು ಕೊಲ್ಕತ್ತಾದಲ್ಲಿ ನಡೆಯಲಿದೆ. ಹೀಗಾಗಿ ಈ ಸರಣಿಯಲ್ಲಿ ಭಾಗಿಯಾಗುವ ಎಲ್ಲಾ ಆಟಗಾರರು ಕೂಡ ಟೀಮ್ ಇಂಡಿಯಾ ಸ್ಕ್ವಾಡ್ ಜೊತೆಯಿದ್ದು ಆಟಗಾರರು ಜೊತೆಯಾಗಿ ಈ ಹರಾಜು ಪ್ರಕ್ರಿಯೆಯನ್ನು ಟಿವಿಯಲ್ಲಿ ನೋಡುವ ಸಾಧ್ಯತೆಯಿದೆ.

Story first published: Saturday, February 12, 2022, 12:09 [IST]
Other articles published on Feb 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+