ಐಪಿಎಲ್: ರೈನಾ ಬಿಕರಿಯಾಗದೇ ಇರಲು ಆತ ಧೋನಿ ವಿರುದ್ಧ ಮಾಡಿದ್ದ ಈ ಕೆಲಸ ಕಾರಣ ಎಂದ ಮಾಜಿ ಕ್ರಿಕೆಟಿಗ

ಮುಂಬರುವ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾಗಿ ಚರ್ಚೆಗಳು ದಿನದಿಂದ ದಿನಕ್ಕೆ ಹೆಚ್ಚಾಗತೊಡಗುತ್ತಿವೆ. ಅದರಲ್ಲಿಯೂ ಇತ್ತೀಚಿಗಷ್ಟೆ ನಡೆದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಈ ಚರ್ಚೆಗಳ ಮಟ್ಟವನ್ನು ಹೆಚ್ಚಾಗುವಂತೆ ಮಾಡಿದೆ.
ಹೌದು, ಇದೇ ತಿಂಗಳ 12 ಮತ್ತು 13ನೇ ತಾರೀಕಿನಂದು ಬೆಂಗಳೂರಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಜರುಗಿತು. ಈ ಮೆಗಾ ಹರಾಜಿನಲ್ಲಿ 600ಕ್ಕೂ ಹೆಚ್ಚು ಕ್ರಿಕೆಟಿಗರು ಭಾಗವಹಿಸಿದ್ದು, ಈ ಪೈಕಿ 66 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 204 ಆಟಗಾರರು ಹರಾಜಾಗಿದ್ದಾರೆ. ಇನ್ನು ಈ ಆಟಗಾರರನ್ನು ಖರೀದಿಸಲು ಎಲ್ಲಾ 10 ಫ್ರಾಂಚೈಸಿಗಳು ಖರ್ಚು ಮಾಡಿರುವ ಒಟ್ಟು ಮೊತ್ತ 551.7 ಕೋಟಿ ರೂಪಾಯಿಗಳು. ಹೀಗೆ ಭಾರೀ ದೊಡ್ಡ ಮಟ್ಟದ ಹರಾಜು ಪ್ರಕ್ರಿಯೆ ನಡೆದಿದ್ದು, ಹರಾಜು ಪ್ರಕ್ರಿಯೆಯ ಕೆಲವು ವಿದ್ಯಮಾನಗಳು ಆಶ್ಚರ್ಯವನ್ನೂ ಕೂಡ ಮೂಡಿಸಿದವು.
ಹೌದು, ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖ ಆಟಗಾರರಾದ ಸುರೇಶ್ ರೈನಾ ಮತ್ತು ಸ್ಟೀವ್ ಸ್ಮಿತ್ ಬಿಕರಿಯಾಗದೇ ಉಳಿದದ್ದು ದೊಡ್ಡ ಮಟ್ಟದ ಆಶ್ಚರ್ಯಕ್ಕೆ ಕಾರಣವಾಗಿತ್ತು. ಅದರಲ್ಲಿಯೂ ಮಿಸ್ಟರ್ ಐಪಿಎಲ್ ಎಂದೇ ಹೆಸರು ಮಾಡಿರುವ ಸುರೇಶ್ ರೈನಾ ಬಿಕರಿಯಾಗದೆಯೇ ಉಳಿದದ್ದು ಭಾರೀ ದೊಡ್ಡ ಮಟ್ಟದ ಚರ್ಚೆ ಹಾಗೂ ವಿವಾದಕ್ಕೂ ಕೂಡ ಒಳಗಾಗುತ್ತಿದೆ. ಸುರೇಶ್ ರೈನಾರನ್ನು ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಉಳಿಸಿಕೊಳ್ಳದ ಚೆನ್ನೈ ಸೂಪರ್ ಕಿಂಗ್ಸ್ ಮೆಗಾ ಹರಾಜಿನಲ್ಲಿಯೂ ಕೂಡ ಕಡೆಗಣಿಸಿದ್ದು ಯಾಕೆ, ಚೆನ್ನೈ ಸೂಪರ್ ಕಿಂಗ್ಸ್ ಮಾತ್ರವಲ್ಲದೇ ಉಳಿದ ಫ್ರಾಂಚೈಸಿಗಳು ರೈನಾರನ್ನು ಖರೀದಿಸಲು ಹಿಂದೇಟು ಹಾಕಿದ್ದೇಕೆ ಎಂಬ ಪ್ರಶ್ನೆಗಳು ಈಗ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದ್ದು, ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸೈಮನ್ ಡೌಲ್ ಈ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸುರೇಶ್ ರೈನಾರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸದೇ ಇರಲು ಈ 2-3 ವಿಷಯಗಳು ಕಾರಣವಾದವು ಎಂದು ಸೈಮನ್ ಡೌಲ್ ಈ ಕೆಳಕಂಡಂತೆ ತಿಳಿಸಿದ್ದಾರೆ.

ಸುರೇಶ್ ರೈನಾರನ್ನು ಚೆನ್ನೈ ಕಡೆಗಣಿಸಲು ಇದೇ ಕಾರಣ
ಸುರೇಶ್ ರೈನಾರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ಬಾರಿಯ ಮೆಗಾ ಹರಾಜಿನಲ್ಲಿ ಖರೀದಿಸದೇ ಇರುವುದಕ್ಕೆ 2-3 ಕಾರಣಗಳಿವೆ ಎಂದಿರುವ ಮಾಜಿ ಕ್ರಿಕೆಟಿಗ ಸೈಮನ್ ಡೌಲ್ ಯುಎಇಯಲ್ಲಿ ರೈನಾ ವಿಶ್ವಾಸ ಕಳೆದುಕೊಂಡರು ಎಂದಿದ್ದಾರೆ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರೈನಾರನ್ನು ಕೈಬಿಟ್ಟಿದ್ದೇಕೆ ಎಂಬುದನ್ನು ಊಹಿಸಲು ಇಷ್ಟು ಸಾಕು ಎಂದು ಸೈಮನ್ ಡೌಲ್ ಹೇಳಿಕೆ ನೀಡಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿರುವ ಸೈಮನ್ ಡೌಲ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಶ್ವಾಸವನ್ನು ಕಳೆದುಕೊಂಡರು ಹಾಗೂ ಎಂಎಸ್ ಧೋನಿ ಅವರ ವಿಶ್ವಾಸವನ್ನು ಕಳೆದುಕೊಂಡರು, ಹೀಗೆ ವಿಶ್ವಾಸ ಕಳೆದುಕೊಂಡ ರೈನಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಿಂದ ಮತ್ತು ಧೋನಿಯಿಂದ ಮತ್ತೊಮ್ಮೆ ಸುಸ್ವಾಗತ ಸಿಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಜತೆ ಸುರೇಶ್ ರೈನಾ ಮುನಿಸು
2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದಾಗಿ ಯುಎಇಯಲ್ಲಿ ನಡೆದಿತ್ತು. ಈ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರ ಜತೆ ಪ್ರವಾಸವನ್ನು ಕೈಗೊಂಡಿದ್ದ ಸುರೇಶ್ ರೈನಾ ತನಗೆ ನೀಡಲಾಗಿದ್ದ ಹೋಟೆಲ್ ರೂಮ್ ವಿಚಾರವಾಗಿ ತನ್ನ ಫ್ರಾಂಚೈಸಿಯ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು. ಹೀಗೆ ಅದೇ ಆವೃತ್ತಿಯಲ್ಲಿ ವೈಯಕ್ತಿಕ ಕಾರಣಗಳಿಂದ ಸುರೇಶ್ ರೈನಾ ಭಾಗವಹಿಸದೇ ಹೊರಗುಳಿದಿದ್ದರು. ಹೀಗೆ ಟೂರ್ನಿಯಾಡಲು ಬಂದು ಹೋಟೆಲ್ ವಿಚಾರವಾಗಿ ಮುನಿಸು ಮಾಡಿಕೊಂಡು ಹೊರಟಿದ್ದ ಸುರೇಶ್ ರೈನಾ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬೇಡವಾದರೂ ಎಂಬ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಹಾಗೂ ಸುರೇಶ್ ರೈನಾ ಮಾಡಿದ ಈ ಕೆಲಸ ಎಂಎಸ್ ಧೋನಿಗೆ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಬೇಸರ ತಂದಿದ್ದು ರೈನಾರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಸುರೇಶ್ ರೈನಾ ಖರೀದಿಸಲು ಯಾವುದೇ ಪ್ರಯತ್ನ ಪಡಲೇ ಇಲ್ಲ ಚೆನ್ನೈ ಸೂಪರ್ ಕಿಂಗ್ಸ್!
ಇನ್ನು ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸುರೇಶ ರೈನಾ ಹೆಸರು ಘೋಷಣೆಯಾಗುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ರೈನಾ ಮೇಲೆ ಬಿಡ್ ಮಾಡಲಿದೆ ಎಂಬುದು ಎಲ್ಲರ ಎಲ್ಲರ ಊಹೆಯಾಗಿತ್ತು. ಆದರೆ ಈ ಊಹೆಯನ್ನು ಹುಸಿಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರೈನಾ ಮೇಲೆ ಬಿಡ್ ಮಾಡಲು ಮುಂದಾಗಲೇ ಇಲ್ಲ. ಮೊದಲಿಗೆ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಇದೇ ಪ್ರಥಮ ಬಾರಿಗೆ ಸುರೇಶ್ ರೈನಾರನ್ನು ಕಡೆಗಣಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮೆಗಾ ಹರಾಜಿನಲ್ಲಿಯೂ ಕೂಡ ಕಡೆಗಣಿಸುವದರ ಮೂಲಕ ರೈನಾ ಅಭಿಮಾನಿಗಳಿಗೆ ಶಾಕ್ ನೀಡಿತ್ತು.
ರೈನಾ ಇಲ್ಲದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೆಗಾ ಹರಾಜಿನ ಬಳಿಕ ಹೀಗಿದೆ: ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಮರ್ಜಿತ್ ಸಿಂಗ್, ದ್ವಾನೆ ಸಿಂಗ್ ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡಾನ್, ಕೆ ಭಗತ್ ವರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications