ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL Auction 2023: ಮಯಾಂಕ್ ಅಗರ್ವಾಲ್ ಎಸ್‌ಆರ್‌ಎಚ್ ಸೇರಿದ್ದಕ್ಕೆ ಖುಷಿಯಾಗಿದೆ ಎಂದ ಕುಂಬ್ಳೆ

IPL Auction 2023: Anil Kumble Felt Happy For Mayank Agarwal Sold To Sunrisers Hyderabad

ಮಯಾಂಕ್ ಅಗರ್ವಾಲ್ ಸನ್‌ರೈಸರ್ಸ್ ಹೈದರಾಬಾದ್‌ಗೆ ತೆರಳಿದ್ದಕ್ಕಾಗಿ ಸಂತೋಷವಾಗಿದೆ ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ. ಐಪಿಎಲ್ 2023 ರ ಆಟಗಾರರ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ದುಬಾರಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಮಯಾಂಕ್ ಅಗರ್ವಾಲ್‌ರನ್ನು ಸನ್‌ರೈಸರ್ಸ್ ಹೈದರಾಬಾದ್‌ 8.25 ಕೋಟಿ ರುಪಾಯಿಗೆ ಖರೀದಿ ಮಾಡಿತು. ಮಯಾಂಕ್ ಅಗರ್ವಾಲ್ ಕಳೆದ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು, ಉತ್ತಮ ಪ್ರದರ್ಶನ ನೀಡದ ಕಾರಣ ಅವರನ್ನು ಪಂಜಾಬ್ ಕಿಂಗ್ಸ್ ಮಿನಿ ಹರಾಜಿಗೆ ಮುನ್ನ ಬಿಡುಗಡೆ ಮಾಡಿತ್ತು.

ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, ಮಯಾಂಕ್ ಅಗರ್ವಾಲ್ ಉತ್ತಮ ಭವಿಷ್ಯ ಹೊಂದಿರುವ ಆಟಗಾರ ಎಂದು ಹೇಳಿದ್ದಾರೆ. ನೂರಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಮಯಾಂಕ್ ಅಗರ್ವಾಲ್, ತಂಡದ ನಾಯಕತ್ವವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

IPL Auction 2023: ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವಕ್ಕೆ ಇವರಿಬ್ಬರ ಮಧ್ಯೆ ಪೈಪೋಟಿ?IPL Auction 2023: ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವಕ್ಕೆ ಇವರಿಬ್ಬರ ಮಧ್ಯೆ ಪೈಪೋಟಿ?

ಮಯಾಂಕ್ ಅಗರ್ವಾಲ್ ಕಳೆದ ಆವೃತ್ತಿಯಲ್ಲಿ ಪಂಜಾಬ್ ತಂಡಕ್ಕೆ ನಾಯಕರಾಗಿದ್ದರು. ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೋಗಿದ್ದಕ್ಕೆ ನನಗೆ ಸಾಕಷ್ಟು ಸಂತೋಷವಾಗಿದೆ ಎಂದು ಜಿಯೋ ಸಿನಿಮಾದಲ್ಲಿ ನಡೆದ ಚರ್ಚೆ ವೇಳೆ ತಿಳಿಸಿದರು.

IPL Auction 2023: Anil Kumble Felt Happy For Mayank Agarwal Sold To Sunrisers Hyderabad

ಹೊಸ ತಂಡ ಅವರಿಗೆ ಸಹಾಯ ಮಾಡಲಿದೆ

"ಹೊಸ ವಾತಾವರಣವು ಮಯಾಂಕ್ ಅಗರ್ವಾಲ್‌ಗೆ ಖಂಡಿತ ಸಹಾಯ ಮಾಡುತ್ತದೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮವಾಗಿದ್ದು, ಅಗರ್ವಾಲ್‌ ತಮ್ಮ ಫಾರ್ಮ್ ಕಂಡುಕೊಳ್ಳಲು ಸುಲಭವಾಗಲಿದೆ" ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

"ಮುರಳೀಧರನ್ ಬ್ಯಾಟಿಂಗ್‌ನಲ್ಲಿ ಮಯಾಂಕ್‌ಗೆ ಎಷ್ಟು ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ನನಗೆ ತಿಳಿದಿಲ್ಲ, ಆದರೆ ಬ್ರಿಯಾನ್ ಲಾರಾ ಇದ್ದಾರೆ, ಅವರು ಖಂಡಿತ ಮಯಾಂಕ್ ಬ್ಯಾಟಿಂಗ್‌ ಸುಧಾರಿಸಲು ಸಹಾಯ ಮಾಡುತ್ತಾರೆ" ಎಂದರು.

"ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಲು ನನಗೆ ಸಂತೋಷವಾಗಿದೆ. ಅಂತರಾಷ್ಟ್ರೀಯ ಅನುಭವ ಮತ್ತು ಯಶಸ್ಸನ್ನು ಹೊಂದಿರುವ ಆಟಗಾರರಾದ ಮುರಳೀಧರನ್ ಮತ್ತು ಲಾರಾ ಅವರೊಂದಿಗೆ ಕೆಲಸ ಮಾಡಲು ನಿಜವಾಗಿಯೂ ಎದುರು ನೋಡುತ್ತಿದ್ದೇನೆ" ಎಂದು ತಂಡಕ್ಕೆ ಸೇರಿದ ನಂತರ ಮಯಾಂಕ್ ಅಗರ್ವಾಲ್ ತಿಳಿಸಿದ್ದಾರೆ.

2023ರ ಐಪಿಎಲ್‌ ಆವೃತ್ತಿಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಇನ್ನೂ ನಾಯಕನನ್ನು ಆಯ್ಕೆ ಮಾಡಿಲ್ಲ. ಮೂಲಗಳ ಪ್ರಕಾರ, ಮಯಾಂಕ್ ಅಗರ್ವಾಲ್ ಕೂಡ ತಂಡದ ನಾಯಕತ್ವ ಹೊಂದುವ ರೇಸ್‌ನಲ್ಲಿದ್ದಾರೆ. ಸನ್‌ ರೈಸರ್ಸ್ ಹೈದರಾಬಾದ್ ತಂಡಕ್ಕೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

Story first published: Sunday, December 25, 2022, 2:30 [IST]
Other articles published on Dec 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X