ಐಪಿಎಲ್ ಹರಾಜು: ಸಿಎಸ್‌ಕೆ ಪಾಲಾದ ಸಂತಸವನ್ನು ಭಿನ್ನವಾಗಿ ಹಂಚಿಕೊಂಡ ಆಲ್‌ರೌಂಡರ್ ಬೆನ್ ಸ್ಟೋಕ್ಸ್

ಈ ಬಾರಿಯ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನಿರೀಕ್ಷೆಯಂತೆಯೇ ಬೃಹತ್ ಮೊತ್ತವನ್ನು ಗಳಿಸಿಕೊಂಡಿದ್ದಾರೆ. 16.25 ಕೋಟಿ ರೂಪಾಯಿ ಮೊತ್ತಕ್ಕೆ ಬೆನ್ ಸ್ಟೋಕ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಈ ಮೂಲಕ ಸಿಎಸ್‌ಕೆ ಡ್ವೇಯ್ನ್ ಬ್ರಾವೋ ಬದಲಿಗೆ ಸೂಕ್ತ ಆಟಗಾರನನ್ನು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ.
ಈ ಮೂಲಕ ಬೆನ್ ಸ್ಟೋಕ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ದೀಪಕ್ ಚಹರ್ ಸಿಎಸ್‌ಕೆ ತಂಡದ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಇನ್ನು ಈ ಹರಾಜಿನ ಬಳಿಕ ಸಹಜವಾಗಿಯೇ ಸಂತಸಗೊಂಡಿರುವ ಬೆನ್ ಸ್ಟೋಕ್ಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ರೀತಿಯಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
ಬೆನ್ ಸ್ಟೋಕ್ಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಳದಿ ಬಣ್ಣದ ಖಾಲಿ ಸ್ನಾಪ್‌ಶಾಟ್ ಹಂಚಿಕೊಂಡಿದ್ದು ಯಾವುದೇ ಬರಹವನ್ನು ಕೂಡ ಬರೆಯದೆ ಭಿನ್ನವಾಗಿ ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಇದಕ್ಕೆ ಪ್ರತಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆನ್ ಸ್ಟೋಕ್ಸ್ ಅವರನ್ನು ಕೊಂಡುಕೊಳ್ಳುವ ನಿಟ್ಟಿಯಲ್ಲಿ ಅವರ ಮಾಜಿ ತಂಡವಾದ ರಾಜಸ್ಥಾನ್ ರಾಯಲ್ಸ್ ಬಿಡ್ಡಿಂಗ್ ಆರಂಭಿಸಿತ್ತು. ಆರ್‌ಸಿಬಿ ಕೂಡ ಆರಂಭದಲ್ಲಿ ಸ್ಟೋಕ್ಸ್ ಕೊಂಡುಕೊಳ್ಳಲು ಉತ್ಸಾಹ ತೋರಿಸಿತ್ತು. ಬೆಲೆ ಏರುತ್ತಿದ್ದಂತೆಯೇ ಆರ್‌ಸಿಬಿ ಹಿಂದಕ್ಕೆ ಸರಿಯಿತು. ನಂತರ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಕೂಡ ಪೈಪೋಟಿಗೆ ಇಳಿದವು. 15.25 ಕೋಟಿ ಮೊತ್ತಕ್ಕೆ ಏರಿದ್ದಾಗ ಸಿಎಸ್‌ಕೆ ಬಿಡ್ಡಿಂಗ್‌ಗೆ ಎಂಟಿಕೊಟ್ಟಿತ್ತು. ಅಂತಿಮವಾಗಿ 16.25 ಕೋಟಿ ಮೊತ್ತಕ್ಕೆ ಬೆನ್ ಸ್ಟೋಕ್ಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಸಿಎಸ್‌ಕೆ ಯಶಸ್ವಿಯಾಯಿತು.
ಇನ್ನು ಇದಕ್ಕೂ ಮುನ್ನ ಬೆನ್‌ಸ್ಟೋಕ್ಸ್ 2017ರ ಹರಾಜಿನಲ್ಲಿ 14.5 ಕೋಟಿ ರುಪಾಯಿಗಳಿಗೆ ರೈಸಿಂಗ್ ಪುಣೆ ಸೂಪರ್‍ಜೈಂಟ್ ತಂಡದ ಪಾಲಾಗಿದ್ದರು. ನಂತರ 2018 ರಲ್ಲಿ 12.5 ಕೋಟಿ ರುಪಾಯಿಗಳಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹರಾಜಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications