Ipl Auction 2023: ಈ ದೇಶೀಯ ಆಟಗಾರರನ್ನು ಹರಾಜಿನಲ್ಲಿ ಟಾರ್ಗೆಟ್ ಮಾಡಲಿದೆ ಆರ್‌ಸಿಬಿ
ಐಪಿಎಲ್‌ನ ಹೆಸರಾಂತ ಟೀಮ್ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ತಂಡ ಇನ್ನುವರೆಗೂ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಆದರೆ, ಈ ತಂಡದ ಫ್ಯಾನ್ಸ್ ತಂಡವನ್ನು ಎಂದು ಬಿಟ್ಟುಕೊಡುವುದಿಲ್ಲ. ಪ್ರತಿ ಬಾರಿ ಆರ್‌ಸಿಬಿ ಈ ಸಲ ಕಪ್ ನಮ್ದೇ ಎನ್ನುತ್ತಲೇ ಅಖಾಡಕ್ಕೆ ಇಳಿಯುತ್ತದೆ.
ಬೆಂಗಳೂರು ತಂಡವನ್ನು ಅದೆಷ್ಟೋ ಸ್ಟಾರ್ ಆಟಗಾರರು ಪ್ರತಿನಿಧಿಸಿದ್ದಾರೆ. ಅಲ್ಲದೆ ಕೆಂಪು ಹಾಗೂ ಬಂಗಾರದ ಬಣ್ಣದ ಜೆರ್ಸಿ ತೊಟ್ಟು ಅಂಗಳದಲ್ಲಿ ಕಮಾಲ್ ಮಾಡಿದ್ದಾರೆ. ಈ ಸ್ಟಾರ್ ಪ್ಲೇಯರ್‌ಗಳಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿನಯ್ ಕುಮಾರ್, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ಎಬಿಡಿ ವಿಲಿಯರ್ಸ್, ಆಸೀಸ್‌ನ ಮಿಚೆಲ್ ಸ್ಟಾರ್ಕ್, ವಿಂಡೀಸ್ ತಂಡದ ಕ್ರಿಸ್ ಗೇಲ್ ಎದ್ದು ಕಾಣುತ್ತಾರೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವೇ ಸತತ 17 ಆವೃತ್ತಿಗಳನ್ನು ದಾಖಲೆಯನ್ನು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಂದಿದ್ದಾರೆ.
ಆರ್‌ಸಿಬಿ ಈ ಬಾರಿ ಹರಾಜಿನಲ್ಲಿ ಹೊಸ ಹುರುಪಿನಲ್ಲಿ ಕಣಕ್ಕೆ ಇಳಿಯಲಿದೆ. ಆರ್‌ಸಿಬಿ ಥಿಂಕ್ ಟ್ಯಾಂಕ್ ಸೇರಿರುವ ಆಂಡಿ ಫ್ಲಾವರ್ ಹೊಸ ಯೋಜನೆ ರೂಪಿಸುತ್ತಿದ್ದಾರೆ. ಹರಾಜಿನಲ್ಲಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ.
ಆರ್‌ಸಿಬಿ ಪರ್ಸ್‌ನಲ್ಲಿದೆ 23.25 ಕೋಟಿ
ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಹರಾಜಿನಲ್ಲಿ ಆರ್‌ಸಿಬಿ ಉತ್ಸಾಹದಿಂದಲೇ ಪಾಲ್ಗೊಳ್ಳಲಿದೆ. ಸದ್ಯ ಆರ್‌ಸಿಬಿ ಪರ್ಸ್‌ನಲ್ಲಿ 23.25 ಕೋಟಿ ಹಣವಿದೆ. ಇನ್ನು ತಂಡದಲ್ಲಿ 18 ಆಟಗಾರರು ಇರುವುದು ಕಡ್ಡಾಯ. ಈ ಮಾನದಂಡದಲ್ಲಿ ಆರ್‌ಸಿಬಿ ಪಾಸ್ ಆಗಿದ್ದು, ಈಗಾಗಲೇ ಉಳಿಸಿಕೊಂಡ ಆಟಗಾರರ ಸಂಖ್ಯೆ ಅಷ್ಟಿದೆ. ಇನ್ನು ಮೂರು ವಿದೇಶಿ ಆಟಗಾರರನ್ನು ತಂಡ ಖರೀದಿಸಬಹುದಾಗಿದೆ.

ಕಳೆದ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾದ ಆಟಗಾರರಿಗೆ ಆರ್‌ಸಿಬಿ ಗೇಟ್ ಪಾಸ್ ನೀಡಿದೆ. ಇದರಲ್ಲಿ ಸ್ಪಿನ್ ಬೌಲರ್ ವನಿಂದು ಹಸರಂಗ ಹಾಗೂ ಡೆತ್ ಓವರ್ ಸ್ಪೇಷಲಿಸ್ಟ್ ಹರ್ಷಲ್ ಪಟೇಲ್ ಸೇರಿದ್ದಾರೆ. ಇನ್ನು ಸ್ಟಾರ್ ಪ್ಲೇಯರ್ ಜೋಶ್ ಹ್ಯಾಜಲ್‌ವುಡ್ ರನ್ನು ಸಹ ಆರ್‌ಸಿಬಿ ಹರಾಜಿಗೆ ಬಿಟ್ಟಿದೆ.
ಆರ್‌ಸಿಬಿಯ ಆರು ಸ್ಲಾಟ್‌ಗಳು ಫಿಕ್ಸ್ ಆಗಿರುವಂತೆ ಕಾಣುತ್ತಿವೆ. ಆದರೆ ತಂಡಕ್ಕೆ ಬೌಲಿಂಗ್‌ನದ್ದೆ ದೊಡ್ಡ ಚಿಂತೆಯಾಗಿದೆ. ಮೊಹಮ್ಮದ್ ಸಿರಾಜ್ ಮಾತ್ರ ತಂಡದಲ್ಲಿರುವ ಸ್ಟಾರ್ ಬೌಲರ್.. ರೀಸ್ ಟೋಪ್ಲಿ, ಸಿರಾಜ್ ಗೆ ಸಾಥ್ ನೀಡಬಲ್ಲರು. ಆದರೆ ಆರ್‌ಸಿಬಿ ಹರಾಜಿನಲ್ಲಿ ದೇಶೀಯ ವೇಗಿಗಳು ಹಾಗೂ ಸ್ಪಿನ್ ಬೌಲರ್‌ಗಳಿಗೆ ಹಣ ಹೂಡಲು ಚಿಂತನೆ ನಡೆಸಿದೆ.

ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ದಾಳಿ ನಡೆಸಿರುವ ಕಾರ್ತಿಕ್ ತ್ಯಾಗಿ ಅವರಿಗೆ ಆರ್‌ಸಿಬಿ ಬಿಡ್ ಮಾಡಲಿದೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್ ಗಳಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಕಾರ್ತಿಕ್ ಒಟ್ಟಾರೆ ಐಪಿಎಲ್‌ನಲ್ಲಿ 19 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸಿದ್ದಾರೆ. ಇವರಿಗೆ ಆರ್‌ಸಿಬಿ ಹಣದ ಹೊಳೆ ಹರಿಸಬಹುದು.
ಕಾರ್ತಿಕ್ ತ್ಯಾಗಿಯನ್ನು ಹೊರತು ಪಡಿಸಿದರೆ, ಆರ್‌ಸಿಬಿ ಟಾರ್ಗೆಟ್ ಮಾಡುತ್ತಿರುವ ಇನ್ನೋಬ್ಬ ದೇಶೀಯ ಆಟಗಾರ ಎಂದರೆ ಚೇತನ್ ಸಕಾರಿಯಾ. ಕಳೆದ ಆವೃತ್ತಿಯ ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದ ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ಕೈ ಬಿಟ್ಟಿತು. ಹೀಗಾಗಿ ಅವರನ್ನು ಆರ್‌ಸಿಬಿ ಬಿಡ್ ಮಾಡಲಿದೆ.
ಈ ಇಬ್ಬರು ದೇಶೀಯ ಆಟಗಾರರನ್ನು ಬಿಟ್ಟು ಆರ್‌ಸಿಬಿ ವಿಂಡೀಸ್‌ನ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅವರ ಮೇಲೂ ಹಣದ ಹೊಳೆಯನ್ನು ಹರಿಸುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications