For Quick Alerts
ALLOW NOTIFICATIONS  
For Daily Alerts
 

IPL Auction 2024: ಈ ಮೂರು ಅನ್‌ ಕ್ಯಾಪ್ಡ್‌ ಪ್ಲೇಯರ್‌ಗಳ ಜೇಬು ಸೇರಲಿದೆ ಕೋಟಿ ಕೋಟಿ ಹಣ

ಇಂಡಿಯನ್ ಪ್ರೀಮಿಯರ್‌ ಲೀಗ್‌ ಹರಾಜು ಡಿಸೆಂಬರ್‌ 19 ರಂದು ದುಬೈನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಆಟಗಾರರ ಅದೃಷ್ಟ ಪರೀಕ್ಷೆ ನಡೆಯಲಿದೆ. ಈ ಐಪಿಎಲ್‌ ಹರಾಜಿನಲ್ಲಿ ಸ್ಟಾರ್‌ ಆಟಗಾರರಿಗೆ ಕೋಟ್ಯಾಂತರ ರೂಪಾಯಿ ಹಣ ಹರಿಯುವುದು ಕಾಮನ್. ಅದರಂತೆ ಐಪಿಎಲ್‌ ಹರಾಜಿನಲ್ಲಿ ಯುವ ಆಟಗಾರರಿಗೂ ಮಣೆ ಹಾಕಲಾಗುತ್ತದೆ. ರಾತ್ರೋ ರಾತ್ರಿ ದೇಶೀಯ ಆಟಗಾರರಿಗೆ ಹರಾಜಿನಲ್ಲಿ ದೊಡ್ಡ ಮೊತ್ತ ಸಿಕ್ಕು ಸ್ಟಾರ್ ಗಿರಿ ಲಭಿಸುತ್ತದೆ.

ಈ ಬಾರಿ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರಷ್ಟೇ, ಪ್ರಾಮುಖ್ಯತೆ ದೇಶೀಯ ಅಟಗಾರರಿಗೆ ಲಭಿಸಲಿದೆ. ಅನ್‌ಕ್ಯಾಪ್ಡ್‌ ಪ್ಲೇಯರ್‌ಗಳ ಮೇಲೆ ಕೋಟಿ ಕೋಟಿ ಹಣವನ್ನು ಹೂಡಲು ಮಾಲೀಕರು ಸಜ್ಜಾಗಿದ್ದಾರೆ. ಫ್ರಾಂಚೈಸಿಗಳ ಚಿತ್ತ ಕದ್ದ ದೇಶೀಯ ಆಟಗಾರರ ಪಟ್ಟಿ ಇಲ್ಲಿದೆ.

ಭಾರತದ ರವಿತೇಜ, ಹಾರ್ವಿಕ್ ದೇಸಾಯಿ ಮತ್ತು ವಿವರಂತ್ ಶರ್ಮಾ ಕೋಟಿ ಕೋಟಿ ಹಣವನ್ನು ತಮ್ಮ ಜೇಬಿಗೆ ಇರಿಸಿಕೊಳ್ಳುವ ಸಾಧ್ಯತೆ ಇದೆ. ಈ ಆಟಗಾರರು ಹರಾಜಿನಲ್ಲಿ ಉತ್ತಮ ಹಣ ಗಳಿಸಬಹುದು. ದೇಶೀಯ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ.

Ipl Auction 2024: 3 Uncapped Players to Watch Out for at the Auction in Dubai?

ರವಿತೇಜ

ಹೈದರಾಬಾದ್ ಕ್ರಿಕೆಟಿಗ ರವಿತೇಜ ದೇಶಿಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರಿಗೆ ಇನ್ನೂ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ತೇಜ ಶ್ರೀಮಂತ ಆಟಗಾರರ ಪಟ್ಟಿ ಸೇರಬಹುದು. ಇದುವರೆಗೆ ಆಡಿದ 42 ಲಿಸ್ಟ್ ಎ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ 1059 ರನ್ ಕೂಡ ಗಳಿಸಿದ್ದಾರೆ. ರವಿ 2 ಶತಕ ಹಾಗೂ 6 ಅರ್ಧ ಶತಕ ಸಿಡಿಸಿದ್ದಾರೆ. ಅವರು 35 ಟಿ20 ಪಂದ್ಯಗಳಲ್ಲಿ 51 ವಿಕೆಟ್ ಪಡೆದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತೇಜಾ ಅವರಿಗೆ ಬಿಡ್ ಮಾಡಬಹುದು.

Ipl Auction 2024: 3 Uncapped Players to Watch Out for at the Auction in Dubai?

ಹಾರ್ವಿಕ್ ದೇಸಾಯಿ

ಸೌರಾಷ್ಟ್ರ ಆಟಗಾರ ಹಾರ್ವಿಕ್ ದೇಸಾಯಿ ಹೆಸರೂ ಅನ್‌ ಕ್ಯಾಪ್ಡ್‌ ಪ್ಲೇಯರ್ಸ್ ಪಟ್ಟಿಯಲ್ಲಿ ಎಲ್ಲರ ಚಿತ್ತ ಕದ್ದಿದೆ. ಹಾರ್ವಿಕ್ 27 ಟಿ20 ಪಂದ್ಯಗಳಲ್ಲಿ 691 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಒಂದು ಶತಕ ಮತ್ತು ನಾಲ್ಕು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರು 40 ಲಿಸ್ಟ್ ಎ ಪಂದ್ಯಗಳಲ್ಲಿ 1341 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ 4 ಶತಕ ಹಾಗೂ 9 ಅರ್ಧ ಶತಕ ಬಾರಿಸಿದ್ದಾರೆ. ಹಾರ್ವಿಕ್ 38 ಪ್ರಥಮ ದರ್ಜೆ ಪಂದ್ಯಗಳಲ್ಲಿ 2262 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 5 ಶತಕ ಮತ್ತು 13 ಅರ್ಧ ಶತಕಗಳನ್ನು ಗಳಿಸಿದ್ದಾರೆ.

Ipl Auction 2024: 3 Uncapped Players to Watch Out for at the Auction in Dubai?

ವಿವ್ರಾಂತ್ ಶರ್ಮಾ

ಜಮ್ಮು ಕ್ರಿಕೆಟಿಗ ವಿವ್ರಾಂತ್ ಶರ್ಮಾ ಉತ್ತಮ ಮೊತ್ತ ಗಳಿಸಬಹುದು. ಅವರು ಐಪಿಎಲ್‌ನಲ್ಲಿ 3 ಪಂದ್ಯಗಳನ್ನು ಆಡಿದ್ದಾರೆ. ಅವರು 2023 ರಲ್ಲಿ ಪದಾರ್ಪಣೆ ಮಾಡಿದರು. ವಿವ್ರಾಂತ್ ಶರ್ಮಾ 17 ಟಿ20 ಪಂದ್ಯಗಳಲ್ಲಿ 309 ರನ್ ಗಳಿಸಿದ್ದಾರೆ. ಅಲ್ಲದೆ 8 ವಿಕೆಟ್ ಪಡೆದಿದ್ದಾರೆ. ಅವರು 22 ಲಿಸ್ಟ್ ಎ ಪಂದ್ಯಗಳಲ್ಲಿ 837 ರನ್ ಗಳಿಸಿದ್ದು, 10 ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲೂ ವಿವ್ರಾಂತ್ ಶರ್ಮಾ ಉತ್ತಮ ದಾಖಲೆ ಹೊಂದಿದ್ದಾರೆ.

Story first published: Monday, December 18, 2023, 14:27 [IST]
Other articles published on Dec 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+