2024ರ ಐಪಿಎಲ್ ಹರಾಜು ಈ ಸ್ಥಳ, ದಿನಾಂಕದಂದು ನಡೆಯುವ ಸಾಧ್ಯತೆ
2024ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಗಾಗಿ ಆಟಗಾರರ ಹರಾಜು ಪ್ರಕ್ರಿಯೆಯನ್ನು ಡಿಸೆಂಬರ್ 19ರಂದು ನಡೆಸುವ ಸಾಧ್ಯತೆಯಿದೆ ಮತ್ತು ದುಬೈ ಅನ್ನು ಸಂಭಾವ್ಯ ಸ್ಥಳವಾಗಿ ಪರಿಗಣಿಸಲಾಗಿದೆ.
ಐಪಿಎಲ್‌ನ 10 ಫ್ರಾಂಚೈಸಿಗಳು ನವೆಂಬರ್ 15ರೊಳಗೆ ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಗಡುವು ನೀಡಲಾಗಿದ್ದು, ನಂತರ ಹರಾಜು ಪೂಲ್ ಅನ್ನು ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮಿನಿ ಹರಾಜಿನ ದಿನಾಂಕದ ಬಗ್ಗೆ ಬಿಸಿಸಿಐನಿಂದ ಇನ್ನೂ ಯಾವುದೇ "ಅಧಿಕೃತವಾಗಿ ಮಾಹಿತಿ' ನೀಡಿಲ್ಲದ ಬಗ್ಗೆ ಫ್ರಾಂಚೈಸಿಗಳು ಹೇಳಿಕೊಂಡಿದ್ದರೂ, ಡಿಸೆಂಬರ್ 15ರಿಂದ 20ರ ವಿಂಡೋದ ಬಗ್ಗೆ ಅನೌಪಚಾರಿಕವಾದ ಸೂಚನೆ ನೀಡಲಾಗಿದೆ.
ಕಳೆದ ವರ್ಷ ಬಿಸಿಸಿಐ ಪ್ರಾರಂಭದಲ್ಲಿ ಇಸ್ತಾನ್‌ಬುಲ್‌ನಲ್ಲಿ 2022ರ ಹರಾಜು ಪ್ರಕ್ರಿಯೆ ನಡೆಸಲು ಯೋಜಿಸಿತ್ತು. ಆದರೆ ಅಂತಿಮವಾಗಿ ಅದನ್ನು ಕೊಚ್ಚಿಯಲ್ಲಿ ನಡೆಸಲಾಯಿತು.
ಆದಾಗ್ಯೂ, ಬಿಸಿಸಿಐ ಮಂಡಳಿಯ ಮೂಲಗಳು ಸ್ಪೋರ್ಟ್‌ಸ್ಟಾರ್‌ಗೆ "ಸ್ಥಳದ ಆಯ್ಕೆಗಳನ್ನು ಅನ್ವೇಷಿಸಲಾಗುತ್ತಿದೆ' ಮತ್ತು ದುಬೈ ಅವುಗಳಲ್ಲಿ ಒಂದಾಗಿದೆ ಎಂದು ಸೂಚಿಸಿವೆ.

ಐಪಿಎಲ್‌ನಲ್ಲಿ ಪ್ರತಿ ತಂಡವು 100 ಕೋಟಿ ರೂಪಾಯಿಗಳ ಪರ್ಸ್ ಮೌಲ್ಯವನ್ನು ಹೊಂದಿರುತ್ತದೆ, ಕಳೆದ ವರ್ಷದ 95 ಕೋಟಿ ರೂಪಾಯಿ ಹೊಂದಿದ್ದವು. ಈ ವರ್ಷ ಪ್ರತಿ ತಂಡಕ್ಕೆ 5 ಕೋಟಿ ರೂ. ಹೆಚ್ಚಿಸಲಾಗಿದೆ.
ಅವುಗಳಲ್ಲಿ ಪ್ರತಿಯೊಂದೂ ಎಷ್ಟು ಖರ್ಚು ಮಾಡಬಹುದು ಎಂಬುದು ನಿಸ್ಸಂಶಯವಾಗಿ, ಯಾವ ಆಟಗಾರರನ್ನು ಉಳಿಸಿಕೊಂಡಿದೆ ಮತ್ತು ಬಿಡುಗಡೆ ಮಾಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಇದೇ ವೇಳೆ ಮಹಿಳಾ ಪ್ರೀಮಿಯರ್ ಲೀಗ್‌ನ ಹರಾಜು ಪ್ರಕ್ರಿಯೆಯು ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿದೆ ಎಂಬ ಮಾತು ಇದೆ. ಆದರೆ, ಇನ್ನೂ ದಿನಾಂಕವನ್ನು ಅಂತಿಮಗೊಳಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಮಹಿಳಾ ಪ್ರೀಮಿಯರ್ ಲೀಗ್ 2024ರ ಫೆಬ್ರವರಿ-ಮಾರ್ಚ್ ವಿಂಡೋದಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications