IPL Auction 2024: ಐಪಿಎಲ್ ಹರಾಜು ದಿನಾಂಕ, ಸಮಯ, ಎಲ್ಲಿ ಲೈವ್ ವೀಕ್ಷಣೆ?; ತಿಳಿದುಕೊಳ್ಳಬೇಕಾದ ಅಂಶಗಳು
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್) ಹರಾಜು ಪ್ರಕ್ರಿಯೆ ಇದೇ ಮಂಗಳವಾರ, ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಭಾರತದ ಹೊರಗೆ ಹರಾಜು ನಡೆಯುತ್ತಿರುವುದು ಇದೇ ಮೊದಲ ನಿದರ್ಶನವಾಗಿದೆ.
ಒಟ್ಟು 333 ಆಟಗಾರರು ಹರಾಜು ಸುತ್ತಿಗೆಗೆ ಹೋಗಲಿದ್ದು, ಹತ್ತು ತಂಡಗಳು 77 ಸ್ಲಾಟ್‌ಗಳನ್ನು ಭರ್ತಿ ಮಾಡಬೇಕಾಗಿದೆ. ಹರಾಜು ಕೋಷ್ಟಕದಲ್ಲಿ ಕೆಲವು ಸ್ಟಾರ್ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ತೀವ್ರ ಬಿಡ್ಡಿಂಗ್ ವಾರ್ ನಡೆಸಲು ಸಜ್ಜಾಗಿವೆ. ವಿಶೇಷವಾಗಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಮೂವರು ಅಗ್ರ ಆಟಗಾರರು ಮಿನಿ ಹರಾಜಿಗೆ ಸಹಿ ಹಾಕಲಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭರವಸೆಯ ಯುವ ಪ್ರತಿಭೆಗಳಾದ ರಚಿನ್ ರವೀಂದ್ರ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಬಗ್ಗೆಯೂ ಫ್ರಾಂಚೈಸಿಗಳು ಗಮನಹರಿಸಲಿವೆ.
2024ರ ಮಿನಿ ಐಪಿಎಲ್ ಹರಾಜಿನ ಕುರಿತು ನೀವು ತಿಳಿದುಕೊಳ್ಳಬೇಕಾದ ಅಂಶಗಳು ಇಲ್ಲಿವೆ.
ಐಪಿಎಲ್ ಹರಾಜು 2024: ಎಲ್ಲಿ ಲೈವ್ ವೀಕ್ಷಣೆ?
2024ರ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಆದರೆ, JioCinema ದಲ್ಲಿ ಡಿಜಿಟಲ್ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.
2024ರ ಐಪಿಎಲ್ ಹರಾಜು ನಡೆಯುವ ಸ್ಥಳ
ದುಬೈನ ಕೋಕಾ ಕೋಲಾ ಅರೆನಾದಲ್ಲಿ ಐಪಿಎಲ್ ಹರಾಜು ನಡೆಯಲಿದೆ. ಭಾರತದ ಹೊರಗೆ ಐಪಿಎಲ್ ಹರಾಜು ನಡೆಯುತ್ತಿರುವುದು ಇದೇ ಮೊದಲಾಗಿದೆ.
ಐಪಿಎಲ್ ಹರಾಜು ನಡೆಯುವ ಸಮಯ
2024ರ ಐಪಿಎಲ್ ಹರಾಜು ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ.
2024ರ ಐಪಿಎಲ್ ಹರಾಜಿನ ಸುತ್ತಿಗೆ ಹೋಗಲಿರುವ ಆಟಗಾರರು
2024ರ ಐಪಿಎಲ್ ಮಿನಿ ಹರಾಜಿನಲ್ಲಿ ಒಟ್ಟು 333 ಆಟಗಾರರು ಕಣಕ್ಕಿಳಿಯಲಿದ್ದಾರೆ. 10 ತಂಡಗಳಲ್ಲಿ ಒಟ್ಟು 77 ಸ್ಥಾನಗಳನ್ನು ಭರ್ತಿ ಮಾಡಬೇಕಿದೆ.
2024ರ ಐಪಿಎಲ್ ಹರಾಜು: ಪ್ರತಿ ತಂಡದಲ್ಲಿ ಉಳಿದಿರುವ ಪರ್ಸ್ ಮೊತ್ತ
ಸಿಎಸ್‌ಕೆ - 31.4 ಕೋಟಿ ರೂಪಾಯಿ
ಡೆಲ್ಲಿ ಕ್ಯಾಪಿಟಲ್ಸ್ - 28.95 ಕೋಟಿ ರೂಪಾಯಿ
ಗುಜರಾತ್ ಟೈಟನ್ಸ್ - 38.15 ಕೋಟಿ ರೂಪಾಯಿ
ಕೆಕೆಆರ್ - 32.7 ಕೋಟಿ ರೂಪಾಯಿ
ಎಲ್‌ಎಸ್‌ಜಿ - 13.15 ಕೋಟಿ ರೂಪಾಯಿ
ಮುಂಬೈ ಇಂಡಿಯನ್ಸ್ - 17.75 ಕೋಟಿ ರೂಪಾಯಿ
ಪಂಜಾಬ್ ಕಿಂಗ್ಸ್ - 29.1 ಕೋಟಿ ರೂಪಾಯಿ
ಆರ್‌ಸಿಬಿ - 23.25 ಕೋಟಿ ರೂಪಾಯಿ
ರಾಜಸ್ಥಾನ್ ರಾಯಲ್ಸ್ - 14.5 ಕೋಟಿ ರೂಪಾಯಿ
ಸನ್‌ರೈಸರ್ಸ್ ಹೈದರಾಬಾದ್ - 34 ಕೋಟಿ ರೂಪಾಯಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications