For Quick Alerts
ALLOW NOTIFICATIONS  
For Daily Alerts
 

IPL Auction 2024: ಹರಾಜುಗಾರ್ತಿ ಮಲ್ಲಿಕಾ ಸಾಗರ್ ಬಗ್ಗೆ ಕೆಲವು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ

ಐಪಿಎಲ್ ಹರಾಜು 2024 ಮಂಗಳವಾರ ನಡೆಯಲಿದೆ. ದುಬೈ ಐಪಿಎಲ್ ಹರಾಜು 2024 ಅನ್ನು ಆಯೋಜಿಸುತ್ತದೆ. ಅದೇ ಸಮಯದಲ್ಲಿ, ಈ ಹರಾಜಿನಲ್ಲಿ ಮಲ್ಲಿಕಾ ಸಾಗರ್ ಹರಾಜುದಾರರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಿದ್ದರೆ ಮಲ್ಲಿಕಾ ಸಾಗರ್ ಬಗ್ಗೆ ನಿಮಗೆ ಗೊತ್ತಿರದ ಕೆಲವು ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.

ಐಪಿಎಲ್‌ ಹರಾಜಿನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಮುಖ ಹ್ಯೂಗ್‌ ಹಗ್ ಎಡ್ಮೀಡ್ಸ್. ಅವರು ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇವರ ಬದಲಿಗೆ ಯಾರು ಈ ಕೆಲಸ ಮಾಡಲಿದ್ದಾರೆ ಎಂಬ ಪ್ರಶ್ನೆಗಳು ಎದಿದ್ದವು. ಇದಕ್ಕೆ ಎಲ್ಲರೂ ಸಲೀಸಾಗಿ ಚಾರು ಶರ್ಮಾ ಎಂದು ಹೇಳಿದ್ದರು. ಆದರೆ ಚಾರು ಶರ್ಮಾ ಅವರನ್ನು ಮೀರಿದ ಚಾಕ ಚಕ್ಯತೆ ಇರುವ ಒರ್ವ ಮಹಿಳಾ ಹರಾಜುದಾರೆ ಐಪಿಎಲ್‌ ಮ್ಯಾನೇಜ್ಮೆಂಟ್ ಕಣ್ಣಿಗೆ ಬಿದ್ದಳು.

IPL Auction 2024: Here Is Some Interesting Information About Mallika Sagar

ಮಲ್ಲಿಕಾ ಸಾಗರ್ ಯಾರು?

ಮಲ್ಲಿಕಾ ಆಧುನಿಕ ಮತ್ತು ಸಮಕಾಲೀನ ಭಾರತೀಯ ಕಲೆಯ ಮುಂಬೈ ಮೂಲದ ಕಲಾ ಸಂಗ್ರಾಹಕ ಸಲಹೆರ್ತಿ. ಮತ್ತು ಪ್ರಸ್ತುತ ಆರ್ಟ್ ಇಂಡಿಯಾ ಕನ್ಸಲ್ಟೆಂಟ್ಸ್ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಹಗ್ ಆಡಮ್ಸ್, ರಿಚರ್ಡ್ ಮ್ಯಾಡ್ಲಿ ಮತ್ತು ಚಾರು ಶರ್ಮಾ ಅವರು ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಹರಾಜುಗಳನ್ನು ನಡೆಸಿದ್ದರು, ಆದರೆ ಮಲ್ಲಿಕಾ ಅವರು ಲೀಗ್‌ನ ಆರಂಭದಿಂದಲೂ WPL ನಲ್ಲಿ BCCI ಹರಾಜುದಾರರಾಗಿದ್ದಾರೆ.

2021 ರಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಲ್ಲಿಕಾ ಹರಾಜಿನ ಭಾಗವಾಗಿದ್ದರು. ಈ ವರ್ಷದ ಐಪಿಎಲ್ 2024ರ ಹರಾಜನ್ನೂ ಮಲ್ಲಿಕಾ ನಡೆಸಲಿದ್ದಾರೆ.

ತನ್ನ ತವರು ಮುಂಬೈನಲ್ಲಿ ಹದಿಹರೆಯದವನಾಗಿದ್ದಾಗ, ಮಹಿಳಾ ಹರಾಜುಗಾರ್ತಿಯನ್ನು ಜನ ಮೊದಲಬಾರಿಗೆ ಗಮನಿಸಿದರು. ಆಗ ಅವರು ವೇದಿಕೆಯಲ್ಲಿ ಒಂದು ಪುಸ್ತಕ ವಾಚನವನ್ನು ಮಾಡಿದ್ದರು.

IPL Auction 2024: Here Is Some Interesting Information About Mallika Sagar

ಮಲ್ಲಿಕಾ ಸಾಗರ್ ಹರಾಜು ಜಗತ್ತಿನಲ್ಲಿ ಹೊಸ ಮುಖವೇನಲ್ಲ. ಈ ಹಿಂದೆಯೂ ಮಲ್ಲಿಕಾ ಸಾಗರ್ ಹಲವು ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಮಲ್ಲಿಕಾ ಸಾಗರ್ ಕಾಣಿಸಿಕೊಂಡಿದ್ದರು.

ಮುಂಬೈನ ಕಲಾ ಸಂಗ್ರಾಹಕಿ ಮಲ್ಲಿಕಾ ಸಾಗರ್ ಕ್ರೀಡಾ ಜಗತ್ತಿನಲ್ಲಿ ಚಿರಪರಿಚಿತ ಹೆಸರು. ಮಲ್ಲಿಕಾ ಸಾಗರ್‌ಗೆ ಸುಮಾರು 48 ವರ್ಷ. ಮಲ್ಲಿಕಾ ಸಾಗರ್ 25 ವರ್ಷಗಳ ಹರಾಜು ಸಂಬಂಧಿ ಅನುಭವ ಹೊಂದಿದ್ದಾರೆ. ಕ್ರಿಕೆಟ್ ಅಲ್ಲದೆ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಹರಾಜುಗಾರ್ತಿ ಪಾತ್ರವನ್ನೂ ನಿರ್ವಹಿಸಿದ್ದಾರೆ. ಇದಲ್ಲದೆ, ಮಲ್ಲಿಕಾ ಸಾಗರ್ ಅವರು ಮುಂಬೈನ ಪ್ರಸಿದ್ಧ ಪುಂಡೋಲೆ ಆರ್ಟ್ ಗ್ಯಾಲರಿಯಲ್ಲಿ ಅನೇಕ ಹರಾಜುಗಳನ್ನು ಆಯೋಜಿಸಿದ್ದಾರೆ.

2008 ರಿಂದ 2018 ರವರೆಗೆ, ರಿಚರ್ಡ್ ಮ್ಯಾಡ್ಲಿ ಐಪಿಎಲ್ ಹರಾಜನ್ನು ಆಯೋಜಿಸುತ್ತಿದ್ದರು. ರಿಚರ್ಡ್ ಮ್ಯಾಡ್ಲಿ ಅವರು ಸರ್ರೆ ಫ್ರಾಂಚೈಸಿಯಿಂದ ಅಂತಾರಾಷ್ಟ್ರೀಯ ಹಾಕಿ ಆಟಗಾರ ಮತ್ತು ಕ್ರಿಕೆಟ್ ಆಟಗಾರರಾಗಿದ್ದಾರೆ. ವಾಸ್ತವವಾಗಿ, 2019 ರ ಹರಾಜಿನಲ್ಲಿ, ಮ್ಯಾಡ್ಲಿ ಬದಲಿಗೆ ಹಗ್ ಆಡಮ್ಡೆಸ್ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಆದರೆ ಈ ಬಾರಿ ಮಲ್ಲಿಕಾ ಸಾಗರ್ ಐಪಿಎಲ್ 2024 ಸೀಸನ್‌ನಲ್ಲಿ ಹರಾಜುಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

IPL Auction 2024: Here Is Some Interesting Information About Mallika Sagar

ಮಲ್ಲಿಕಾ ತಯಾರಿ ಹೇಗಿತ್ತು?

ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಕೂಗಲು ಅವಕಾಶ ಸಿಕ್ಕಾಗ ಮಲ್ಲಿಕಾ ಫುಲ್‌ ಖುಷ.. ತಾವು ಇಷ್ಟ ಪಟ್ಟ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ವೇದಿಕೆ ಸಿಕ್ಕಿತು. ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ಮಲ್ಲಿಕಾ ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ಹಿಂದಿನ ಹರಾಜಿನ ಕೆಲವು ವಿಡಿಯೋಗಳನ್ನು ನೋಡಿದರು. ಇದರಲ್ಲಿ ಹರಾಜುದಾರನ ಬಾಡಿ ಲಾಂಗ್ವೆಜ್‌, ಹಾಗೂ ಹಾವ ಭಾವವನ್ನು ಸೂಕ್ಷ್ಮವಾಗಿ ಗಮನಿಸಿದರು. ಅಲ್ಲದೆ ಅದನ್ನೇ ತನ್ನ ಮ್ಯಾನರಿಸಂಗೆ ಅಳವಡಿಸಿಕೊಂಡು ಪ್ರಸ್ತುತ ಪಡಿಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್ ಇತಿಹಾಸದಲ್ಲಿ ಮಹಿಳೆಯೊಬ್ಬರು ಹರಾಜು ನಡೆಸುತ್ತಿರುವುದು ಇದೇ ಮೊದಲು. ಐಪಿಎಲ್ 2024 ರ ಹರಾಜಿಗೆ ಬಿಸಿಸಿಐ ಮಹಿಳಾ ಹರಾಜುದಾರರನ್ನು ಆಯ್ಕೆ ಮಾಡಿದೆ. ವಿಶೇಷವೆಂದರೆ ಈ ಮಹಿಳೆ ಭಾರತೀಯಳು. ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಪಿಎಲ್) ಕಳೆದ ಎರಡು ಸೀಸನ್‌ಗಳ ಹರಾಜನ್ನು ಯಶಸ್ವಿಯಾಗಿ ನಡೆಸಲು ಸಮರ್ಥವಾಗಿರುವ ಮಲ್ಲಿಕಾ ಸಾಗರ್ ಅವರೊಂದಿಗೆ ಬಿಸಿಸಿಐ ಪಾಲುದಾರಿಕೆ ಹೊಂದಿದೆ. ಇದೇ ವೇಳೆ ಐಪಿಎಲ್ ನ 10 ಸೀಸನ್ ಗಳಲ್ಲಿ ಹರಾಜಾಗಿರುವ ರಿಚರ್ಡ್ ಮ್ಯಾಡ್ಲಿ ಮಲ್ಲಿಕಾ ಸಾಗರ್ ಗೆ ಶುಭ ಹಾರೈಸಿದ್ದಾರೆ.

Story first published: Tuesday, December 19, 2023, 10:38 [IST]
Other articles published on Dec 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+