Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಕಿಂಗ್ ಕೊಹ್ಲಿ ಮಾತನ್ನೂ ಕೇಳುತ್ತಿಲ್ಲವೇ ಆರ್‌ಸಿಬಿ ಮ್ಯಾನೇಜ್‌ಮೆಂಟ್?

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಐಪಿಎಲ್‌ ಮೋಸ್ಟ್‌ ಫೆವರೀಟ್‌ ಟೀಮ್‌ಗಳಲ್ಲಿ ಒಂದು. ಈ ತಂಡ ಅದೆಷ್ಟೋ ಆಟಗಾರರಿಗೆ ತಂಡದಲ್ಲಿ ಆಡುವ ಅವಕಾಶವನ್ನು ನೀಡಿ, ಸ್ಟಾರ್‌ ಗಿರಿಯನ್ನು ಧಾರೆ ಎರೆದು ಕೊಟ್ಟಿದೆ. ಈ ಸಾಲಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು ವಿರಾಟ್‌ ಕೊಹ್ಲಿ..

ವಿರಾಟ್‌ ಕೊಹ್ಲಿ ಈಗ ಕ್ರಿಕೆಟ್‌ ಜಗತ್ತಿನ ಅಪ್ರತಿಮ ಪ್ರತಿಭೆ. ಆದರೆ ಈ ಪ್ರತಿಭೆಯನ್ನು ಹಿಂದೆ ಗುರುತಿಸಿದ್ದ ತಂಡ ಆರ್‌ಸಿಬಿ. 2008ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಅಂಡರ್‌ 19 ವಿಶ್ವಕಪ್‌ ತಂಡದ ನಾಯಕ. ಅಲ್ಲದೆ ತಂಡಕ್ಕೆ ಚಾಂಪಿಯನ್‌ ಮುಕುಟ ತೋಡಿಸಿದ ಧೀರ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ವಿರಾಟ್‌ ಅವರ ಬ್ಯಾಟಿಂಗ್‌ ಕ್ಷಮತೆಯನ್ನು ಆಗಲೇ ಗುರುತು ಹಿಡಿದ ಆರ್‌ಸಿಬಿ ತಮ್ಮ ತಂಡಕ್ಕೆ ನೇರ ಪ್ರವೇಶ ನೀಡಿತು.

Is the RCB management not listening to King Kohli?

ಅಸಲಿಗೆ ವಿರಾಟ್‌ ಕೊಹ್ಲಿ ದೆಹಲಿ ಮೂಲದವರು. ಡೆಲ್ಲಿ ತಂಡ ಇವರತ್ತ ಮನಸ್ಸು ಮಾಡದ ಕಾರಣ, ಆರ್‌ಸಿಬಿ ಇವರಿಗೆ ಮಣೆ ಹಾಕಿತು. ಆಗ ಅಂಡರ್ 19 ವಿಶ್ವಕಪ್‌ ತಂಡದ ಸದಸ್ಯರಿಗೆ ತಂಡದಲ್ಲಿ ಸ್ಥಾನ ನೀಡಲು ಎಲ್ಲ ತಂಡಗಳು ಮುಂದಾಗಿದ್ದವು. ಆಗ ಆರ್‌ಸಿಬಿ ವಿರಾಟ್ ಕೊಹ್ಲಿ ಅವರಿಗೆ ತಂಡಕ್ಕೆ ಸೇರಿಸಿಕೊಂಡಿತು.

ವಿರಾಟ್‌ ಕೊಹ್ಲಿ ಕ್ರಿಕೆಟ್‌ ಜಗತ್ತಿನಲ್ಲಿ ತಾವು ಹೇಗೆ ಬೆಳೆದರು ಎಂಬುದು ಈಗ ಎಲ್ಲರಿಗೂ ಗೊತ್ತು. ವಿರಾಟ್‌ ಕೊಹ್ಲಿ ಅವರ ಫಿಟ್ನೆಸ್‌ಗೆ ರೋಲ್‌ ಮಾಡಲ್‌. ಆದರೆ, ವಿರಾಟ್‌ಗೆ ಚಾಕಲೆಟ್‌ ಅಂದ್ರೆ ತುಂಬಾನೆ ಇಷ್ಟ. ಐಪಿಎಲ್‌ ವೇಳೆ ಹೆಚ್ಚು ಚಾಕಲೆಟ್‌ಗಳನ್ನು ತಿಂದು ತೂಕ ಹೆಚ್ಚಿಸಿಕೊಂಡಿದ್ದರು. ತಮ್ಮ ದೇಹದಲ್ಲಿ ಆದ ಬದಲಾವಣೆಯನ್ನು ಕಂಡು, ಫಿಟ್ನೆಸ್‌ ಬಗ್ಗೆ ಹೆಚ್ಚಿನ ಒತ್ತು ನೀಡಿದರು. ಆಗಲೂ ಆರ್‌ಸಿಬಿ ವಿರಾಟ್‌ ಬೆನ್ನಿಗೆ ನಿಂತಿತ್ತು.

Is the RCB management not listening to King Kohli?

ಒಬ್ಬ ಪ್ಲೇಯರ್‌ ಬೆಳೆದಂತೆ ಅವನು ಪ್ರತಿನಿಧಿಸುವ ತಂಡವೂ ಬೆಳೆಯುತ್ತದೆ ಎನ್ನುವುದಕ್ಕೆ ಆರ್‌ಸಿಬಿ ಬೆಸ್ಟ್‌ ಎಕ್ಸಾಮ್‌ಪಲ್‌.. ವಿರಾಟ್‌ ತಾವು ಬೆಳೆದು, ಆರ್‌ಸಿಬಿ ತಂಡವನ್ನು ಸಹ ಬೆಳೆಸಿದರು. ಪರಿಣಾಮ ವಿರಾಟ್‌ ಕೊಹ್ಲಿ ಆರ್‌ಸಿಬಿ ತಂಡದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿದರು. ಅದು ಎಷ್ಟರ ಮಟ್ಟಿಗೆ ವಿರಾಟ್‌ ಕೊಹ್ಲಿ ತಂಡದ ಮೇಲೆ ಹಿಡಿತ ಸಾಧಿಸಿದ್ದು ಎಂದರೆ, ಯಾವ ಜಾಹೀರಾತನ್ನು ಪಡೆಯಬೇಕು ಅಥವಾ ಪಡೆಯಬಾರದು ಎಂಬ ಡಿಸಿಜನ್‌ ಸಹ ವಿರಾಟ್‌ನ್ನು ಕೇಳುತ್ತಿತ್ತು.

ವಿರಾಟ್‌ ಕೊಹ್ಲಿ ನಿಜಕ್ಕೂ ಒಬ್ಬ ಕಮಿಟೆಡ್‌ ಪ್ಲೆಯರ್‌.. ಇದರಲ್ಲಿ ಯಾವುದೇ ಮಾತಿಲ್ಲ. ಕ್ರಿಕೆಟ್‌ ಒಂದು ತಂಡದ ಆಟ. ಈ ಆಟದಲ್ಲಿ ಪ್ರತಿ ಪಂದ್ಯದಲ್ಲೂ ಒಬ್ಬನೇ ನಿಂತು ಗೆಲ್ಲಿಸಲು ಸಾಧ್ಯವೆ. ಜವಾಬ್ದಾರಿಗಳು ಹರಿದು ಹಂಚಿಕೆ ಆದಾಗ ಮಾತ್ರ ತಂಡ ತನ್ನ ಯಶಸ್ಸುನ್ನು ಪಡೆಯಬಹುದು. ಆರ್‌ಸಿಬಿ ತಂಡದಲ್ಲಿ ಕ್ರಿಸ್‌ ಗೇಲ್‌, ಎಬಿಡಿ, ವಿರಾಟ್‌ ಅವರಂತಹ ಸ್ಟಾರ್ ಬ್ಯಾಟರ್‌ಗಳು ಇದ್ದಾಗ, ಫೈನಲ್‌ ತಲುಪಿತ್ತು. ಆಗ ವಿರಾಟ್ ಅವರಿಬ್ಬರಿಗೂ ಉತ್ತಮ ಸಾಥ್‌ ನೀಡುವುದೇ ಅವರ ಕೆಲಸವಾಗಿತ್ತು. ಆದರೆ, ವಿರಾಟ್‌ಗೆ ಕಳೆದ ಕೆಲವು ವರ್ಷಗಳಿಂದ ಏಕಾಂಗಿತನ ಕಾಡುತ್ತಿದೆ.

Is the RCB management not listening to King Kohli?

ಬೆಂಗಳೂರು ತಮ್ಮ ಎರಡನೇ ತವರು ಎಂದೇ ಹೇಳುವ ವಿರಾಟ್‌, ತಮ್ಮ ತಂಡಕ್ಕೆ ಒಮ್ಮೆಯೂ ಐಪಿಎಲ್‌ ಮುಕುಟ ತೊಡಿಸದ ನೋವು ಕಾಡುತ್ತಲೇ ಇದೆ. ಇದನ್ನು ಅದೆಷ್ಟೋ ಬಾರಿ ವಿರಾಟ್‌ ಹೇಳಿಕೊಂಡಿದ್ದಾರೆ.

ಯುವಿ ನಮ್ಮ ತಂಡಕ್ಕೆ ಬೇಕು

ಎಸ್‌.. ಇದೇ ಒಂದು ಬಾರಿ ಕಾಣುತ್ತದೆ ವಿರಾಟ್‌ ಕೊಹ್ಲಿ ಟೀಮ್ ಮ್ಯಾನೇಜ್ಮೆಂಟ್‌ಗೆ ನೇರವಾಗಿ ನಮಗೆ ಈ ಪ್ಲೇಯರ್‌ ಬೇಕು ಎಂದು ಹೇಳಿದ್ದು. ಯುವರಾಜ್‌ ಸಿಂಗ್‌ ಅವರನ್ನು ಆರ್‌ಸಿಬಿ ತಂಡ ಸೇರಿದ ಮೇಲೆ ವಿರಾಟ್‌ ಆಟ ಕಳೆಗಟ್ಟಿತು. ಈ ಒಂದು ಪ್ರಸಂಗ ಬಿಟ್ಟರೆ ವಿರಾಟ್‌ ಕೊಹ್ಲಿ ಹೆಚ್ಚಾಗಿ ಹರಾಜಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ವಿರಾಟ್‌ಗೆ ಇರುವ ಕಮಿಟ್ಮೆಂಟ್‌ ಆರ್‌ಸಿಬಿ ಮ್ಯಾನೇಜ್ಮೆಂಟ್‌ನಲ್ಲಿ ಎಳ್ಳಷ್ಟು ಕಾಣಿಸುತ್ತಿಲ್ಲ. ಒಂದು ವೇಳೆ ಟೀಮ್ ಮ್ಯಾನೇಜ್ಮೆಂಟ್‌ಗೂ ಇದೇ ತರನಾದ ಕಮಿಟ್ಮೆಂಟ್ ಇದ್ದಿದ್ದರೆ ಐಪಿಎಲ್‌ ಹರಾಜಿಗೂ ಮುನ್ನ ತಂಡದ ಹಿರಿಯ ಆಟಗಾರರು ಹಾಗೂ ನಯಕರ ಸಲಹೆ ಪಡೆಯುತ್ತಿತ್ತು.

Is the RCB management not listening to King Kohli?

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಯಾವ ಪ್ಲೇಯರ್ ಆಡಬೇಕು ಎಂಬುದು ಧೋನಿ ಅಣತೆಯಂತೆ ನಡೆಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಐಪಿಎಲ್‌ನಲ್ಲಿ ಈ ಬಾರಿ ರಿಷಭ್‌ ಪಂತ್‌ ಆಡುತ್ತಾರೋ ಇಲ್ಲವೋ, ಆದರೂ ಡೆಲ್ಲಿ ಕ್ಯಾಪಿಟಲ್ಸ್‌ ಪಂತ್‌ ಅವರ ಇನ್‌ ಪುಟ್ಸ್‌ ಪಡೆಯುತ್ತಲೇ ಇತ್ತು.

ಕೆಕೆಆರ್‌ ತಂಡದ ಚುಕ್ಕಾಣಿ ಹಿಡಿದಾಗಿನಿಂದಲೂ ಶ್ರೇಯಸ್‌ ಅಯ್ಯರ್‌ ತಮ್ಮ ಸಲಹೆ ನೀಡುತ್ತಲೇ ಇದ್ದರು. ಈ ಒಂದು ಲೆಕ್ಕಾಚಾರದಲ್ಲಿ ಆರ್‌ಸಿಬಿ ಹಿಂದೆ ಬಿದಿದೆಯಾ ಎಂಬ ಪ್ರಶ್ನೆಗಳು ಎದ್ದಿವೆ.

ಒಂದು ವೇಳೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ ನಾಯಕ ಅಥವಾ ವಿರಾಟ್‌ ಕೊಹ್ಲಿ ಅವರ ಸಲಹೆ ಪಡೆದಿದ್ದರೆ, ರಚಿನ್‌ ರವೀಂದ್ರ, ಶಾರ್ದೂಲ್‌ ಠಾಕೂರ್ ಅವರಂತಹ ಆಟಗಾರರಿಗೆ ಬಿಟ್ಟು ಅಲ್ಜಾರಿ ಜೋಸೆಫ್‌ಗೆ ಬಾಜಿ ಕಟ್ಟು ಎಂದು ಹೇಳುತ್ತಲೇ ಇರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೀಗಾಗಿ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಮೇಲೆ ವಿರಾಟ್‌ ಕೊಹ್ಲಿ ಅವರ ಹಿಡಿತ ಕಡಿಮೆ ಆಗುತ್ತಿದೆಯಾ ಎಂಬ ಸಂಶಯ ವ್ಯಕ್ತವಾಗುತ್ತಿದೆ.

Story first published: Wednesday, December 20, 2023, 15:38 [IST]
Other articles published on Dec 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+