Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2024: ಈ ಪ್ಲೇಯರ್‌ ಖರೀದಿಸಿದರೆ ಆರಂಭದಲ್ಲಿ ಮಿಸ್ ಆಗೋದು ಗ್ಯಾರಂಟಿ

ಐಪಿಎಲ್‌ ಹರಾಜು ನಾಳೆ ನಡೆಯಲಿದೆ. ಇನ್ನು 2024ರ ಐಪಿಎಲ್‌ ಯಾವಗ ನಡೆಯ ಬಹುದು ಎಂಬ ಅಂದಾಜು ಸಿಕ್ಕಂತೆ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2024 ಅನ್ನು ಮಾರ್ಚ್ 22 ರಿಂದ ಆಯೋಜಿಸಬಹುದು ಎಂದು ವರದಿಗಳು ತಿಳಿಸಿವೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇದಕ್ಕಾಗಿ ವಿಂಡೋವನ್ನು ನಿಗದಿಪಡಿಸಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಐಪಿಎಲ್ ವಿಂಡೋ ಹೊರ ಬಿದ್ದಿದ್ದರಿಂದ ಆಟಗಾರರ ಲಭ್ಯತೆಯ ಸುದ್ದಿಯೂ ಒಂದೊಂದಾಗಿ ಹೊರ ಬೀಳುತ್ತಿದೆ. ಜೋಶ್ ಹ್ಯಾಜಲ್‌ವುಡ್ ಹೊರತುಪಡಿಸಿ ಆಸ್ಟ್ರೇಲಿಯಾದ ಎಲ್ಲಾ ಆಟಗಾರರು ಇಡೀ ಪಂದ್ಯಾವಳಿಗೆ ಲಭ್ಯವಿರುತ್ತಾರೆ. ಹರಾಜಿನಲ್ಲಿ ಹೇಜಲ್‌ವುಡ್ ಅವರನ್ನು ಖರೀದಿಸಿದರೆ, ಐಪಿಎಲ್‌ನ ಆರಂಭಿಕ ಪಂದ್ಯಗಳನ್ನು ಇವರು ಮಿಸ್ ಮಾಡಿಕೊಳ್ಳಲಿದ್ದಾರೆ.

 IPL Auction 2024: Josh Hazlewood not be able to play in the next IPL season?

ಕ್ರಿಕ್‌ಬಜ್‌ನ ಸುದ್ದಿಯ ಪ್ರಕಾರ, ಹೆಚ್ಚಿನ ಆಟಗಾರರು ಐಪಿಎಲ್‌ನ ಸಂಪೂರ್ಣ ಋತುವಿನಲ್ಲಿ ಲಭ್ಯವಿರುತ್ತಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಆದರೆ ಶೆಫೀಲ್ಡ್ ಶೀಲ್ಡ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಜೋಶ್ ಹೇಜಲ್‌ವುಡ್ ಸೇರಿದಂತೆ ಇತರ ಆಟಗಾರರು ಆರಂಭದಲ್ಲಿ ಆಡಲು ಸಾಧ್ಯವಾಗುವುದಿಲ್ಲ.

ಹೇಜಲ್‌ವುಡ್‌ನ ಇದುವರೆಗಿನ ಪ್ರದರ್ಶನ ಅತ್ಯುತ್ತಮವಾಗಿದೆ. ತಮ್ಮ ವೇಗದ ದಾಳಿಯಿಂದಲೇ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೇಜಲ್‌ವುಡ್ ಅವರನ್ನು ಹರಾಜಿನಲ್ಲಿ ಖರೀದಿಸಿದರೆ ಅವರು ತಂಡಕ್ಕೆ ಲಾಭದಾಯಕ ಎಂದು ಸಾಬೀತುಪಡಿಸುತ್ತಾರೆ. ಆದರೆ ಮೇ ಮೊದಲ ವಾರದಿಂದ ಮಾತ್ರ ಹೇಜಲ್‌ವುಡ್ ಟೂರ್ನಿಯಲ್ಲಿ ಆಡಲು ಸಾಧ್ಯವಾಗುತ್ತದೆ. ಈ ಸ್ಥಿತಿಯಲ್ಲಿ ತಂಡಗಳು ಅವರನ್ನು ಖರೀದಿಸುವ ಮೊದಲು ಖಂಡಿತವಾಗಿಯೂ ಯೋಚಿಸುತ್ತವೆ.

 IPL Auction 2024: Josh Hazlewood not be able to play in the next IPL season?

ಐಪಿಎಲ್‌ನ ಕೊನೆಯ ಋತುವಿನಲ್ಲಿ ಹ್ಯಾಜಲ್‌ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಟೂರ್ನಿಯಲ್ಲಿ ಇದುವರೆಗೆ 27 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 35 ವಿಕೆಟ್‌ಗಳು ಪಡೆದು ಬೀಗಿದ್ದಾರೆ. ಐಪಿಎಲ್ ಪಂದ್ಯವೊಂದರಲ್ಲಿ 25 ರನ್‌ಗಳಿಗೆ 4 ವಿಕೆಟ್ ಕಬಳಿಸಿರುವುದು ಹ್ಯಾಜಲ್‌ವುಡ್ ಅವರ ಅತ್ಯುತ್ತಮ ಪ್ರದರ್ಶನ.

41 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಹ್ಯಾಜಲ್‌ವುಡ್‌ 58 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಹ್ಯಾಜಲ್‌ವುಡ್‌ 12 ರನ್‌ಗಳಿಗೆ 4 ವಿಕೆಟ್ ಪಡೆಯುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹ್ಯಾಜಲ್‌ವುಡ್ 85 ಏಕದಿನ ಪಂದ್ಯಗಳಲ್ಲಿ 132 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲೂ ಮಾರಕ ಬೌಲಿಂಗ್ ಮಾಡಿದ್ದಾರೆ. ಇದರಲ್ಲಿ 242 ವಿಕೆಟ್ ಪಡೆದಿದ್ದಾರೆ. ಈಗ ಅವರು ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಬಲ್ಲರು.

Story first published: Monday, December 18, 2023, 21:09 [IST]
Other articles published on Dec 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+