Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction: ಈ ಮೂವರು ಆಟಗಾರರ ಮೇಲೆ 20 ಕೋಟಿ ರೂ.ಗೂ ಅಧಿಕ ಬಿಡ್?

ಐಪಿಎಲ್‌ ತಂಡಗಳ ಮಾಲೀಕರು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಿದ್ದಾರೆ. ಇನ್ನೇನು ಬಿಸಿಸಿಐ ಈ ಪಟ್ಟಿಯನ್ನು ಪರಿಷ್ಕರಿಸಲಿದ್ದು, ಕೆಲವೇ ದಿನಗಳಲ್ಲಿ ಐಪಿಎಲ್‌ ಹರಾಜು ದಿನಾಂಕಗಳು ಬಹಿರಂಗಾಗಲಿವೆ. ಐಪಿಎಲ್ ಮಾಲೀಕರು ಸಹ ತಮ್ಮ ರಣ ತಂತ್ರವನ್ನು ಸಿದ್ಧ ಪಡಿಸಿಕೊಳ್ಳುತ್ತಿದ್ದಾರೆ.

ಈ ಹರಾಜು ಎಲ್ಲರ ಚಿತ್ತವನ್ನು ಕದ್ದಿದೆ. ಈ ವೇಳೆ ಹಲವು ಸ್ಟಾರ್ ಆಟಗಾರರು ಬಿಡ್ಡಿಂಗ್‌ ಅಂಗಳಕ್ಕೆ ಪ್ರವೇಶಿಸಲಿದ್ದಾರೆ. ಈ ಸ್ಟಾರ್‌ ಆಟಗರರು ತಮ್ಮ ಧಮಾಕೆದಾರ್‌ ಆಟದ ಮೂಲಕ ತಂಡಗಳಿಗೆ ನೆರವಾಗಬಲ್ಲರು. ಹಲವು ಸ್ಟಾರ್‌ ಆಟಗಾರರು ಈ ಬಾರಿ ಬಿಡ್ಡಿಂಗ್‌ ಟೇಬಲ್‌ ಪ್ರವೇಶಿಸಲಿದ್ದಾರೆ. ಆದರೆ ಎಲ್ಲ ಮಾಲೀಕರ ಕಣ್ಣು ಮಾತ್ರ ಈ ಮೂವರು ಆಟಗಾರರ ಮೇಲೆ ನೆಟ್ಟಿರಲಿದೆ.

IPL Auction 2024 KL Rahul Ishan Kishan Rishabh Pant Expected to Fetch 20 Crore Bids

ಈ ಆಟಗಾರರು ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಮನಮೋಹಕ ಆಟದ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ಇವರು ಯಾವುದೇ ಪರಿಸ್ಥಿತಿಯಿದ್ದರೂ ಅದಕ್ಕೆ ತಕ್ಕಂತೆ ಬ್ಯಾಟ್ ಮಾಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಈ ಬಾರಿಯ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್ ಆಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಆ ಆಟಗಾರರ ಬಗ್ಗೆ ಪರಿಚಯ ಇಲ್ಲಿದೆ.

ಕೆಎಲ್ ರಾಹುಲ್‌

ಟೀಮ್ ಇಂಡಿಯಾದ ಅನುಭವಿ ಬ್ಯಾಟರ್‌ ಕೆಎಲ್ ರಾಹುಲ್‌ ಅವರನ್ನು ಲಕ್ನೋ ಸೂಪರ್‌ ಜೈಂಟ್ಸ್ ತಂಡ ಕೈ ಬಿಟ್ಟಿದೆ. ಈ ಬಾರಿ ಇವರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಆರ್‌ಸಿಬಿ ಬಾಜಿ ಕಟ್ಟುವ ಸಾಧ್ಯತೆ ಹೆಚ್ಚಿದೆ. ಈ ಪ್ಲೇಯರ್‌ ಟಾಪ್‌ ಆರ್ಡರ್‌ ಬ್ಯಾಟರ್‌, ವಿಕೆಟ್‌ ಕೀಪರ್‌, ಕ್ಯಾಪ್ಟನ್‌ ಆಗಿ ತಂಡಕ್ಕೆ ನೆರವಾಬಲ್ಲರು. ಹೀಗಾಗಿಯೇ ಇವರ ವ್ಯಾಲ್ಯೂ ಹೆಚ್ಚಾಗಿದ್ದು. ಇವರು 20 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಜೇಬಿಗೆ ಇರಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಇಶಾನ್‌ ಕಿಶನ್‌

ಮುಂಬೈ ಇಂಡಿಯನ್ಸ್ ತಂಡ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಸ್ಟಾರ್‌ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಉಳಿದ ಆಟಗಾರರಿಗೆ ಗೇಟ್ ಪಾಸ್ ನೀಡಿದೆ. ಈ ಬಾರಿ ಮುಂಬೈ, ತನ್ನ ವಿಕೆಟ್‌ ಕೀಪರ್‌ ಹಾಗೂ ಬ್ಯಾಟರ್‌ ಇಶಾನ್ ಕಿಶನ್‌ ಅವರನ್ನು ಕೈ ಬಿಟ್ಟಿದೆ. ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಇಶಾನ್‌ ಮೇಲೆ ಹಲವು ಫ್ರಾಂಚೈಸಿಗಳು ಕಣ್ಣು ನೆಟ್ಟಿದ್ದಾರೆ. ಈ ಬಾರಿ ಮೆಗಾ ಹರಾಜಿನಲ್ಲಿ ಹಲವು ತಂಡಗಳು ಈ ಆಟಗಾರನ ಮೇಲೆ ಕಣ್ಣಿಟ್ಟಿದ್ದು, ಇವರು ಈ ಬಾರಿ ಕುಬೇರನ ವಂಶಕ್ಕೆ ಸೇರಬಹುದು.

IPL Auction 2024 KL Rahul Ishan Kishan Rishabh Pant Expected to Fetch 20 Crore Bids

ರಿಷಭ್‌ ಪಂತ್‌

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಸೈ ಎನಿಸಿಕೊಂಡಿರುವ ರಿಷಭ್‌ ಪಂತ್‌ ಅವರನ್ನು ಡಿಸಿ ಕೈ ಬಿಟ್ಟಿದೆ. ಇವರು ಹರಾಜು ಅಂಗಳಕ್ಕೆ ಪ್ರವೇಶಿಸಿದ ಸ್ಟಾರ್ ಆಟಗಾರರಲ್ಲಿ ಅಗ್ರ ಗಣ್ಯರು. ಇದೀಗ ಎಲ್ಲಾ ಫ್ರಾಂಚೈಸಿಗಳ ಕಣ್ಣು ಈ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮೇಲೆ ನೆಟ್ಟಿದೆ. ಈ ಬಾರಿ ಹರಾಜಿನಲ್ಲಿ ಪಂತ್ ಗೆ 20 ಕೋಟಿ ರೂ.ಗೂ ಹೆಚ್ಚು ಬಿಡ್ ಆಗಬಹುದು. ಪಂತ್ ತಾವು ಸೇರುವ ತಂಡಕ್ಕೆ ಬೆಸ್ಟ್ ಕ್ಯಾಪ್ಟನ್ ಎಂದು ಸಾಬೀತು ಪಡಿಸಬಹುದು.

Story first published: Tuesday, November 5, 2024, 17:03 [IST]
Other articles published on Nov 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+