2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜು ಪ್ರಕ್ರಿಯೆ ಇದೇ ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೆನಾದಲ್ಲಿ ನಡೆಯಲಿದೆ.
ವಿದೇಶದಲ್ಲಿ ನಡೆಯುತ್ತಿರುವ ಐಪಿಎಲ್ ಟಿ20 ಲೀಗ್ ಹರಾಜಿನ ಮೊದಲ ನಿದರ್ಶನ ಇದಾಗಿದೆ. ಆರಂಭಿಕ ನೋಂದಾಯಿತ ಪಟ್ಟಿಯಲ್ಲಿ 1166 ಆಟಗಾರರಿದ್ದರು ಮತ್ತು ಅದನ್ನು 333 ಹೆಸರುಗಳಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ.

333 ಕ್ರಿಕೆಟಿಗರಲ್ಲಿ 214 ಆಟಗಾರರು ಭಾರತೀಯರಾಗಿದ್ದರೆ, ಸಹವರ್ತಿ ರಾಷ್ಟ್ರಗಳಿಂದ ಇಬ್ಬರು ಸೇರಿದಂತೆ 119 ಸಾಗರೋತ್ತರ ಆಟಗಾರರಾಗಿದ್ದಾರೆ.
ಅಂತಿಮ ಹರಾಜು ಪಟ್ಟಿಯಲ್ಲಿ 116 ಕ್ಯಾಪ್ಡ್ ಆಟಗಾರರು, 215 ಅನ್‌ಕ್ಯಾಪ್ಡ್ ಆಟಗಾರರು ಮತ್ತು ಸಹವರ್ತಿ ರಾಷ್ಟ್ರಗಳ ಇಬ್ಬರು ಕ್ರಿಕೆಟಿಗರು ಸೇರಿದ್ದಾರೆ.
2024ರ ಐಪಿಎಲ್‌ಗಾಗಿ ನಡೆಯುವ ಮಿನಿ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಭರ್ತಿ ಮಾಡಲು ಗರಿಷ್ಠ 77 ಸ್ಲಾಟ್‌ಗಳು ಲಭ್ಯವಿದ್ದು, ಸಾಗರೋತ್ತರ ಆಟಗಾರರಿಗಾಗಿ 30 ಸ್ಲಾಟ್‌ಗಳು ಮೀಸಲಿವೆ.

ಗರಿಷ್ಠ ಮೂಲ ಬೆಲೆಯಾಗಿ 2 ಕೋಟಿ ರೂಪಾಯಿ ನಿಗದಿ ಮಾಡಲಾಗಿದ್ದು, ಈ ವಿಭಾಗದಲ್ಲಿ 23 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹರಾಜು ಪಟ್ಟಿಯಲ್ಲಿರುವ 13 ಆಟಗಾರರ ಮೂಲ ಬೆಲೆ 1.5 ಕೋಟಿ ರೂಪಾಯಿಯಾಗಿದೆ.
ಐಪಿಎಲ್ 2024ರ ಹರಾಜಿನಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರು ಮತ್ತು ಮೂಲ ಬೆಲೆ
ಐಪಿಎಲ್ 2024ರ ಹರಾಜಿನಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಬಹುಬೇಡಿಕೆ ಇದ್ದು, 2023ರ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾದ ಒಟ್ಟು 21 ಕ್ರಿಕೆಟಿಗರು ದುಬೈನಲ್ಲಿ ನಡೆಯುವ ಐಪಿಎಲ್ 2024ರ ಹರಾಜಿಗೆ ನೋಂದಾಯಿಸಿದ್ದಾರೆ.
ಅವರಲ್ಲಿ ಏಳು ಆಟಗಾರರು, 2023ರ ವಿಶ್ವಕಪ್ ತಂಡದ ಭಾಗವಾಗಿದ್ದವರು. ತಮ್ಮ ಹೆಸರನ್ನು 2 ಕೋಟಿ ರೂಪಾಯಿಯ ಅತ್ಯಧಿಕ ಮೂಲ ಬೆಲೆಯಲ್ಲಿ ನೋಂದಾಯಿಸಿದ್ದಾರೆ.
ಆ ಏಳು ಆಟಗಾರರೆಂದರೆ ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ನಾಯಕ ಪ್ಯಾಟ್ ಕಮ್ಮಿನ್ಸ್, ಕೀಪರ್-ಬ್ಯಾಟರ್ ಜೋಶ್ ಇಂಗ್ಲಿಸ್, ವೇಗಿಗಳಾದ ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್ ಮತ್ತು ಆಲ್‌ರೌಂಡರ್ ಸೀನ್ ಅಬಾಟ್.
ಗಾಯದ ಕಾರಣದಿಂದ ಟ್ರಾವಿಸ್ ಹೆಡ್ ಆಸ್ಟ್ರೇಲಿಯಾ ತಂಡದ ಆರಂಭಿಕ ಲೀಗ್ ಪಂದ್ಯಗಳನ್ನು ತಪ್ಪಿಸಿಕೊಂಡರು. ಆದರೆ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಆಟಗಾರರಾಗಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಸ್‌ನಲ್ಲಿ 62 ರನ್ ಗಳಿಸಿದರು ಮತ್ತು 21 ರನ್ ನೀಡಿ 2 ವಿಕೆಟ್ ಕಬಳಿಸಿದರು ಹಾಗೂ ಭಾರತ ವಿರುದ್ಧದ ಫೈನಲ್‌ನಲ್ಲಿ 137 ರನ್‌ಗಳ ನಿರ್ಣಾಯಕ ಶತಕ ಬಾರಿಸಿದರು.
ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಮ್ಮಿನ್ಸ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಡೆದರು. ಇನ್ನು ಮಿಚೆಲ್ ಸ್ಟಾರ್ಕ್ 53 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದರು.
ಇದೇ ವೇಳೆ, ಜೇಕ್ ಫ್ರೇಸರ್-ಮೆಕ್‌ಗುರ್ಕ್ (20 ಲಕ್ಷ ರೂಪಾಯಿ) ಮತ್ತು ವಿಲಿಯಂ ಸಾಲ್ಜ್‌ಮನ್ (20 ಲಕ್ಷ ರೂಪಾಯಿ) ಐಪಿಎಲ್ 2024ರ ಹರಾಜಿನ ಭಾಗವಾಗಿರುವ ಇಬ್ಬರು ಅನ್‌ಕ್ಯಾಪ್ಡ್ ಆಸ್ಟ್ರೇಲಿಯನ್ ಆಟಗಾರರಾಗಿದ್ದಾರೆ.
ಟ್ರಾವಿಸ್ ಹೆಡ್ - 2 ಕೋಟಿ ರೂಪಾಯಿ
ಸ್ಟೀವನ್ ಸ್ಮಿತ್ - 2 ಕೋಟಿ ರೂಪಾಯಿ
ಪ್ಯಾಟ್ ಕಮಿನ್ಸ್ - 2 ಕೋಟಿ ರೂಪಾಯಿ
ಜೋಶ್ ಇಂಗ್ಲಿಸ್ - 2 ಕೋಟಿ ರೂಪಾಯಿ
ಜೋಶ್ ಹ್ಯಾಜಲ್‌ವುಡ್ - 2 ಕೋಟಿ ರೂಪಾಯಿ
ಮಿಚೆಲ್ ಸ್ಟಾರ್ಕ್ - 2 ಕೋಟಿ ರೂಪಾಯಿ
ಸೀನ್ ಅಬಾಟ್ - 2 ಕೋಟಿ ರೂಪಾಯಿ
ಡೇನಿಯಲ್ ಸ್ಯಾಮ್ಸ್ - 1.5 ಕೋಟಿ ರೂಪಾಯಿ
ಝೈ ರಿಚರ್ಡ್ಸನ್ - 1.5 ಕೋಟಿ ರೂಪಾಯಿ
ಆಶ್ಟನ್ ಟರ್ನರ್ - 1 ಕೋಟಿ ರೂಪಾಯಿ
ಆಶ್ಟನ್ ಅಗರ್ - 1 ಕೋಟಿ ರೂಪಾಯಿ
ರಿಲೆ ಮೆರೆಡಿತ್ - 1 ಕೋಟಿ ರೂಪಾಯಿ
ಲ್ಯಾನ್ಸ್ ಮೋರಿಸ್ - 75 ಲಕ್ಷ ರೂಪಾಯಿ
ಬಿಲ್ಲಿ ಸ್ಟಾನ್‌ಲೇಕ್ - 75 ಲಕ್ಷ ರೂಪಾಯಿ
ವೆಸ್ಲಿ ಅಗರ್ - 50 ಲಕ್ಷ ರೂಪಾಯಿ
ಬೆನ್ ಕಟಿಂಗ್ - 50 ಲಕ್ಷ ರೂಪಾಯಿ
ಮ್ಯಾಥ್ಯೂ ಶಾರ್ಟ್ - 50 ಲಕ್ಷ ರೂಪಾಯಿ
ಬೆನ್ ದ್ವಾರ್ಶುಯಿಸ್ - 50 ಲಕ್ಷ ರೂಪಾಯಿ
ಸ್ಪೆನ್ಸರ್ ಜಾನ್ಸನ್ - 50 ಲಕ್ಷ ರೂಪಾಯಿ
ಜೇಕ್ ಫ್ರೇಸರ್-ಮೆಕ್‌ಗುರ್ಕ್ - 20 ಲಕ್ಷ ರೂಪಾಯಿ (ಅನ್‌ಕ್ಯಾಪ್ಡ್)
ವಿಲಿಯಂ ಸಾಲ್ಜ್‌ಮನ್ - 20 ಲಕ್ಷ ರೂಪಾಯಿ (ಅನ್‌ಕ್ಯಾಪ್ಡ್)