For Quick Alerts
ALLOW NOTIFICATIONS  
For Daily Alerts
 

ಸ್ಟಾರ್ ಬೌಲರ್‌ಗಳೇ ಕೋಟಿ ಒಡೆಯರು, ವೇಗಿಗಳಿಗೆ 10-20 ಕೋಟಿ ರೂ.ವರೆಗೆ ಖರ್ಚು ಮಾಡಲಿದ್ದಾರೆ ಮಾಲೀಕರು

ಐಪಿಎಲ್‌ ಹರಾಜು ಪ್ರಕ್ರಿಯೆ ಇನ್ನೇನು ಮಂಗಳವಾರ ದುಬೈನಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಆಟಗಾರರನ್ನು ಕೊಳ್ಳಲು ಫ್ರಾಂಚೈಸಿಗಳು ಮುಗಿ ಬೀಳೋದು ಪಕ್ಕಾ. ಐಪಿಎಲ್‌ನಲ್ಲಿ ಸ್ಟಾರ್ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಲ್ಲದೆ ಬ್ಯಾಟರ್‌ಗಳಿಗೂ ಮಾಲೀಕರು ಆದ್ಯತೆ ನೀಡುತ್ತಾರೆ. ಹೀಗೆ ಹೇಳಿದ ಮಾತ್ರಕ್ಕೆ ಐಪಿಎಲ್‌ನಲ್ಲಿ ಬೌಲರ್‌ಗಳಿಗೆ ಕಡೆಗಣನೆ ಮಾಡಲಾಗುತ್ತದೆ ಎಂದಲ್ಲ. ಸ್ಟಾರ್‌ ವೇಗದ ಬೌಲರ್‌ಗಳಿಗೂ ಮಾಲೀಕರು ಮಣೆ ಹಾಕುತ್ತಾರೆ.

ಬೌಲರ್‌ಗಳು ತಮಗೆ ಲಭ್ಯರಿರುವ ನಾಲ್ಕು ಓವರ್‌ಗಳಲ್ಲಿ ಶಿಸ್ತಿನಿಂದ ಬೌಲಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಿಂಚಬೇಕು. ಈ ನಿಟ್ಟಿನಲ್ಲಿ ಬೌಲರ್‌ಗಳನ್ನು ಮಾಲೀಕರು ಆಯ್ಕೆ ಮಾಡುತ್ತಾರೆ. ಅಲ್ಲದೆ ಪವರ್‌ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಏಕನಾಮಿ ಸ್ಥಿರವಾಗಿರಬೇಕು ಅಂತವರಿಗೆ ಮೊದಲ ಪ್ರಾಶ್ಯಸ್ಥ. ಈ ಬಾರಿ ಐಪಿಎಲ್ ಹರಾಜಿನಲ್ಲೂ ಇಂತಹ ಬೌಲರ್‌ಗಳು ಅಖಾಡದಲ್ಲಿದ್ದಾರೆ. ಮಾಲೀಕರು ಇವರ ಮೇಲೆ ಹಣದ ಹೊಳೆಯನ್ನು ಹರಿಸಲು ಸಿದ್ಧರಾಗಿದ್ದಾರೆ. ಈ ಪಟ್ಟಿಯಲ್ಲಿ ಎದ್ದು ಕಾಣುವ ಐದು ಬೌಲರ್‌ಗಳ ಮಾಹಿತಿ ಇಲ್ಲಿದೆ.

IPL Auction 2024:Star bowlers are worth crores, owners are going to spend Rs 10-20 crores on pacer

ಮಿಚೆಲ್ ಸ್ಟಾರ್ಕ್

ಜಿಯೋ ಸಿನಿಮಾದಲ್ಲಿ ಆಯೋಜಿಸಿದ್ದ ಅಣಕು ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿ ಅತಿ ಹೆಚ್ಚು ಬಿಡ್ ಮಾಡಲಾಗಿದೆ. ಈ ಆಟಗಾರನನ್ನು ಆರ್‌ಸಿಬಿ 18.50 ಕೋಟಿ ರೂ. ತನ್ನ ತೆಕ್ಕೆಗೆ ಹಾಕಿಕೊಂಡಿದೆ. ನಾಳೆ ಆರ್‌ಸಿಬಿ ಈ ಆಟಗಾರನಿಗೆ ಹಣ ಹೂಡಲು ಮುಂದಾಗುತ್ತದೋ ಇಲ್ಲವೋ ಕಾದು ನೋಡಬೇಕು. ಈಗಾಗಲೇ ಕ್ರಿಕೆಟ್ ತಜ್ಞರು ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಸ್ಟಾರ್ಕ್ 20 ಕೋಟಿ ಬಿಡ್ ಪಡೆಯುವ ಸಾಧ್ಯತೆಯೂ ಇದೆ.

ಜೆರಾಲ್ಡ್ ಕೋಟ್ಜಿ

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಈ ಯುವ ವೇಗದ ಬೌಲರ್ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ವೇಗದ ಬೌಲಿಂಗ್‌ನೊಂದಿಗೆ ಸ್ವಿಂಗ್ ಮಾಡಿ ಬ್ಯಾಟರ್‌ಗಳಿಗೆ ಕಾಟ ನೀಡಬಲ್ಲರು. ಈ ಆಟಗಾರನಿಗೆ ಹಣ ಹೂಡಲು ಅನೇಕ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಇವರು ತಂಡಕ್ಕೆ ಸೇರಿದ್ದೇ ಆದಲ್ಲಿ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ರನ್ ಗಳಿಗೆ ಕಡಿವಾಣ ಫಿಕ್ಸ್‌.. ಅಣಕು ಹರಾಜಿನಲ್ಲಿ ಈ ಆಟಗಾರನಿಗೆ ಗುಜರಾತ್ ಟೈಟಾನ್ಸ್ 18 ಕೋಟಿ ರೂ. ಆದ್ದರಿಂದ, ಈ ವೇಗದ ಬೌಲರ್‌ನ ಹೆಸರಿಗೂ 15-20 ಕೋಟಿ ರೂ.ವರೆಗೆ ಬಿಡ್ ಮಾಡಬಹುದು.

IPL Auction 2024:Star bowlers are worth crores, owners are going to spend Rs 10-20 crores on pacer

ಪ್ಯಾಟ್ ಕಮ್ಮಿನ್ಸ್

ಆಸ್ಟ್ರೇಲಿಯಾದ ವಿಶ್ವ ಚಾಂಪಿಯನ್ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್ ವೇಗದ ಬೌಲರ್ ಮಾತ್ರವಲ್ಲ, ಕೆಳ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಬಲ್ಲ ಸ್ಟಾರ್ ಬೌಲರ್. ಸನ್ ರೈಸರ್ಸ್ ಹೈದರಾಬಾದ್ ಅಣಕು ಹರಾಜಿನಲ್ಲಿಯೂ 17.50 ಕೋಟಿ ರೂ. ಬಿಡ್ ಮಾಡಿದೆ. ಈ ಆಟಗಾರನ ಹೆಸರಿನಲ್ಲಿ 15-20 ಕೋಟಿ ರೂ.ವರೆಗೆ ಬಿಡ್ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಶಾರ್ದೂಲ್ ಠಾಕೂರ್

ಈ ಪಟ್ಟಿಯಲ್ಲಿ ಭಾರತದ ಶಾರ್ದೂಲ್ ಠಾಕೂರ್ ಅಗ್ರಸ್ಥಾನದಲ್ಲಿದ್ದಾರೆ. ಶಾರ್ದೂಲ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಬಿಡುಗಡೆ ಮಾಡಿದೆ. ಶಾರ್ದೂಲ್ ಭಾರತದ ಆಲ್ ರೌಂಡರ್. ಇದೇ ಕಾರಣಕ್ಕೆ ಶಾರ್ದೂಲ್ ಹೆಸರಿನಲ್ಲಿ ನಡೆದ ಅಣಕು ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 14 ಕೋಟಿ ರೂ. ನೀಡಿ ತಂಡಕ್ಕೆ ಬರ ಮಾಡಿಕೊಂಡಿದೆ. ಆದ್ದರಿಂದ ಈ ಭಾರತೀಯ ಆಟಗಾರ 10-15 ಕೋಟಿ ರೂ. ಜೇಬಿಗೆ ಇಳಿಸಿಕೊಳ್ಳಬಹುದು.

IPL Auction 2024:Star bowlers are worth crores, owners are going to spend Rs 10-20 crores on pacer

ದಿಲ್ಶನ್ ಮಧುಶಂಕ

ಶ್ರೀಲಂಕಾ ದಿಲ್ಶನ್ ಮಧುಶಂಕ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು ವೇಗವಾಗಿ ಬೌಲಿಂಗ್ ಮಾಡುವ ಮತ್ತು ಹೊಸ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಣಕು ಹರಾಜಿನಲ್ಲಿ ಈ ಶ್ರೀಲಂಕಾ ಬೌಲರ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 10.50 ಕೋಟಿ ರೂ. ಬಿಡ್ ಮಾಡಿದೆ. ಹೀಗಾಗಿ ನಾಳೆ ನಡೆಯಲಿರುವ ಹರಾಜಿನಲ್ಲಿ ಈ ಶ್ರೀಲಂಕಾ ಬೌಲರ್ ಹೆಸರಿಗೆ 10-15 ಕೋಟಿ ರೂ. ಬಾಚಿಕೊಳ್ಳುವ ಸಾಧ್ಯತೆ ಇದೆ.

Story first published: Monday, December 18, 2023, 20:37 [IST]
Other articles published on Dec 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+