Ipl auction 2024: ಅನ್ ಕ್ಯಾಪ್ಡ್ ಪ್ಲೇಯರ್ಸ್ ಮನೆ ಪ್ರವೇಶಿಸಲಿದ್ದಾಳೆ ಭಾಗ್ಯಲಕ್ಷ್ಮಿ...
ಭಾರತದಲ್ಲಿ ಕ್ರಿಕೆಟ್‌ಗೆ ಜನಪ್ರೀಯತೆ ತಂದು ಕೊಡುವಲ್ಲಿ ಐಪಿಎಲ್‌ಗೂ ಸ್ಥಾನವಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಹಲವು ಪ್ರತಿಭಾನ್ವಿತ ಆಟಗಾರರಿಗೆ ತನ್ನ ಒಡಲಿನಲ್ಲಿ ಸ್ಥಾನ ನೀಡಿದೆ. ಅಲ್ಲದೆ ಇನ್ನು ಪೋಷಿಸುತ್ತಲೇ ಬಂದಿದೆ. ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರು ಕೇಳಿಸಿಕೊಳ್ಳಬೇಕು. ಮತ್ತು ಇದೇ ವೇಳೆ ತಮ್ಮನ್ನು ಕೊಂಡುಕೊಳ್ಳಲು ಮಾಲೀಕರು ಸಹ ತಾಮುಂದು ನಾಮುಂದು ಎನ್ನುವಂತೆ ಪ್ರದರ್ಶನ ನೀಡಬೇಕು ಎಂಬುದೇ ಯುವ ಕ್ರಿಕೆಟ್ ಆಟಗಾರರ ಕನಸು.
ಈ ಬಾರಿಯ ಐಪಿಎಲ್ ಹರಾಜಿಗೆ ದಿನಗಣನೆ ಆರಂಭವಾಗಿದೆ. ದುಬೈನಲ್ಲಿ ಯುವ ಆಟಗಾರರ ಹಣೆ ಬರಹ ನಿರ್ಧಾರವಾಗಲಿದೆ. ರಾತ್ರೋ ರಾತ್ರಿ ಜಾಕ್ ಪಾಟ್ ಹೊಡೆಯಲು ಯುವ ಆಟಗಾರರು ಸಿದ್ಧರಾಗಿದ್ದಾರೆ.
ಹರಾಜಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಆಟಗಾರರಿಗೆ ದೊಡ್ಡ ಮೊತ್ತದ ನೀಡಲಾಗುತ್ತದೆ. ಆದರೆ ತಂಡಗಳು ದೊಡ್ಡ ಮೊತ್ತಕ್ಕೆ ಬಿಡ್ ಮಾಡಬಹುದಾದ ಐದು ಅನ್‌ಕ್ಯಾಪ್ಡ್ ಭಾರತೀಯ ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

ಸಮೀರ್ ರಿಜ್ವಿ
ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ಪರ ಆಡುತ್ತಿರುವ ಸಮೀರ್ ರಿಜ್ವಿ ಕೆಲವು ದಿನಗಳ ಹಿಂದೆ ನಡೆದ ಯುಪಿ ಟಿ20 ಲೀಗ್‌ನಲ್ಲಿ ಕಮಾಲ್ ಮಾಡಿದ್ದಾರೆ. ಲೀಗ್‌ನಲ್ಲಿ ಕಾನ್ಪುರ್ ಸೂಪರ್ ಸ್ಟಾರ್ಸ್ ಪರ ಆಡಿರುವ ಸಮೀರ್ ರಿಜ್ವಿ ಮೀರತ್ ಮೇವರಿಕ್ ವಿರುದ್ಧದ ಪಂದ್ಯದಲ್ಲಿ 59 ಎಸೆತಗಳಲ್ಲಿ 122 ರನ್ ಗಳಿಸಿ ಇನಿಂಗ್ಸ್ ಆಡುವ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದಾರೆ. ಇದು ಹರಾಜಿನಲ್ಲಿ ಅವರ ಬೆಲೆ ಹೆಚ್ಚಿಸಲು ಸಾಧ್ಯವಾಗುವ ಸಾಧ್ಯತೆ ಇದೆ.

ಶಾರುಖ್ ಖಾನ್
2023ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಶಾರುಖ್ ಖಾನ್, 2024ರ ಸೀಸನ್‌ಗೂ ಮುನ್ನ ರಿಲೀಸ್ ಆಗಿದ್ದರು. ವೇಗವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಬ್ಯಾಟ್ಸ್‌ಮನ್‌ಗಳಲ್ಲಿ ಶಾರುಖ್ ಒಬ್ಬರು. ಶಾರುಖ್ ಇಲ್ಲಿಯವರೆಗೆ 83 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 133.52 ಸ್ಟ್ರೈಕ್ ರೇಟ್‌ನಲ್ಲಿ 928 ರನ್ ಗಳಿಸಿದ್ದಾರೆ. ಶಾರುಖ್ ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ಪರ ಆಡುತ್ತಿದ್ದಾರೆ.

ಸ್ವಸ್ತಿಕ್ ಚಿಕಾರ
ಯುಪಿ ಟಿ20 ಲೀಗ್‌ನ ಮೊದಲ ಆವೃತ್ತಿಯಲ್ಲಿ ಸ್ವಸ್ತಿಕ್ ಅದ್ಭುತ ಪ್ರದರ್ಶನ ನೀಡಿದ್ದರು. ಕೇವಲ 7 ಪಂದ್ಯಗಳಲ್ಲಿ 456 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದರು. ಈಗ ಹರಾಜಿನಲ್ಲಿ ಅವರ ಮೋಡಿ ಎಷ್ಟು ಉಪಯುಕ್ತವಾಗಿದೆ ಎಂಬುದನ್ನು ನೋಡಬೇಕಿದೆ.
ಅಶುತೋಷ್ ಶರ್ಮಾ
ಮಧ್ಯಪ್ರದೇಶದ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿರುವ ಬಲಗೈ ಬ್ಯಾಟ್ಸ್‌ಮನ್ ಅಶುತೋಷ್ ಶರ್ಮಾ ರೈಲ್ವೇಸ್‌ಗಾಗಿ ಪರ ಆಡಿ 16 ವರ್ಷಗಳ ಹಳೆಯ ದಾಖಲೆ ಮುರಿದರು. ಅಶುತೋಷ್ T20 ಪ್ರಥಮ ದರ್ಜೆಯಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ನಮೂದಿಸಿಕೊಂಡಿದ್ದಾರೆ.
ಅರ್ಪಿತ್ ಶೇತ್
ಬಲಗೈ ವೇಗದ ಬೌಲರ್ ಅರ್ಪಿತ್ ಶೇತ್ ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 18 ವಿಕೆಟ್ ಕಬಳಿಸಿದ್ದರು. ಬರೋಡಾ ಪರ ಆಡುತ್ತಿರುವ ಅರ್ಪಿತ್ 32 ಪ್ರಥಮ ದರ್ಜೆ ಪಂದ್ಯಗಳಲ್ಲಿ 101 ವಿಕೆಟ್ ಕಬಳಿಸಿ ಅದ್ಭುತ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications