ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಎಲ್ಲರ ಗಮನ ಸೆಳೆದಿದ್ದ ಸ್ಟಾರ್ ಪ್ಲೇಯರ್‌ಗಳಿಗೆ ಭಾರೀ ಹಣ ಹರಿದು ಬಂದಿದೆ. ನಿರೀಕ್ಷೆಯಂತೆ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಗುರುತು ಹೊಂದಿರುವ ಪ್ಲೇಯರ್‌ಗಳಿಗೆ ಮಾಲೀಕರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಈ ಬಾರಿ ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಿಗೆ ಮಾಲೀಕರು ಹಣವನ್ನು ಸುರಿದಿದ್ದಾರೆ.
ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರರಲ್ಲಿ ವಿದೇಶಿಗರು ತಮ್ಮ ಅಟ್ಟಹಾಸ ಮುಂದುವರೆಸಿದ್ದಾರೆ. ಐದನೇ ಸ್ಥಾನದಲ್ಲಿ ಭಾರತದ ಒಬ್ಬ ಪ್ಲೇಯರ್ ಇದ್ದಾನೆ.

ಆಸ್ಟ್ರೇಲಿಯಾ ಪರ ಆಡುವ ಮಿಚೆಲ್ ಸ್ಟಾರ್ಕ್ ತಮ್ಮ ವೇಗದ ಬೌಲಿಂಗಿನಿಂದಲೇ ಹೆಸರುವಾಸಿ. ಇವರ ಎಸೆತಗಳನ್ನು ಎದುರಿಸುವಲ್ಲಿ ಬ್ಯಾಟರ್‌ಗಳು ಹೈರಾಣಾಗುತ್ತಾರೆ. ಉತ್ತಮ ವೇರಿಯೇಷನ್, ಸ್ವಿಂಗ್ ಮಾಡುವ ಬೌಲರ್ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ತಂಡಕ್ಕೆ ಬೆಸ್ಟ್ ಆಕ್ಷನ್. ಇವರು 2024ರ ಐಪಿಎಲ್‌ನಲ್ಲಿ ಕೆಕೆಆರ್ ಪರ ಆಡಲಿದ್ದಾರೆ.
ಸ್ಟಾರ್ಕ್ ಅವರು ತಮ್ಮ ಬೇಸ್ ಪ್ರೈಸ್‌ಗಿಂತಲೂ 12 ಪಟ್ಟು ಹೆಚ್ಚು ಹಣವನ್ನು ಪಡೆದರು. ಇವರ ಬೇಸ್ ಪ್ರೈಸ್ 2 ಕೋಟಿ ಆಗಿತ್ತು. ಇವರನ್ನು ಖರೀದಿಸಲು ಮಾಲೀಕರು ತುದಿಗಾಲಿನಲ್ಲಿ ನಿಂತಿದ್ದರು. ಕೊನೆಗೆ ಕೆಕೆಆರ್ ಜಿದ್ದು ಗೆದ್ದು ಇವರಿಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಕೋಲ್ಕತಾ 24.75 ಕೋಟಿ ನೀಡಿ ಸ್ಟಾರ್ಕ್ ಅವರನ್ನು ಖರೀದಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಬಿಕರಿಯಾದ ಅತಿ ದುಬಾರಿ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಅಲ್ಲದೆ 20 ಕೋಟಿಯ ಬೆಂಚ್ ಮಾರ್ಕ್ ದಾಟಿದ ಎರಡನೇ ಪ್ಲೇಯರ್ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು.
ಇನ್ನು ಮಂಗಳವಾರ ನಡೆದ ಹರಾಜಿನಲ್ಲಿ ಎಲ್ಲರ ಕೇಂದ್ರ ಪ್ಯಾಟ್ ಕಮಿನ್ಸ್ ಅವರ ಮೇಲೆ ನೆಟ್ಟಿತು. ಇವರು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್ ಮುಕುಟ ತೊಡಿಸಿದ್ದರು. ವಿಶ್ವ ವಿಜೇತ ತಂಡದ ನಾಯಕನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿ ಮುಗಿ ಬಿದ್ದರು. ಸನ್ ರೈಸರ್ಸ್ ಹೈದರಾಬಾದ್ ಪ್ಯಾಟ್ ಕಮಿನ್ಸ್ ಅವರಿಗೆ ತಂಡಕ್ಕೆ ಸೇರಿಸಿಕೊಳ್ಳಲೇ ಬೇಕು ಎಂದು ಮೊದಲೇ ನಿರ್ಧರಿಸಿತ್ತು. ಇದರಂತೆ ಇವರಿಗೆ ಬರೋಬ್ಬರಿ 20.50 ಕೋಟಿ ನೀಡಿ ಆರೆಂಜ್ ಜೆರ್ಸಿ ನೀಡಿತು.

ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ನ್ಯೂಜಿಲೆಂಡ್ ತಂಡದ ಟಾಪ್ ಆರ್ಡರ್ ಬ್ಯಾಟರ್. ಇವರು ಏಕದಿನ ವಿಶ್ವಕಪ್‌ನಲ್ಲಿ 10 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 69ರ ಸರಾಸರಿಯಲ್ಲಿ 552 ರನ್ ಸಿಡಿಸಿದ್ದರು. ಇದರಲ್ಲಿ ಎರಡು ಶತಕ ಹಾಗೂ ಎರಡು ಅರ್ಧಶತಕ ಸೇರಿವೆ. ಇವರ ಸ್ಥಿರ ಪ್ರದರ್ಶನವನ್ನು ನೋಡಿದ ಚೆನ್ನೈ ಹಣದ ಹೊಳೆಯನ್ನು ಹರಿಸಿ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಇವರಿಗೆ ಚೆನ್ನೈ 14 ಕೋಟಿ ರೂಪಾಯಿ ನೀಡಿತು.

ಡೆತ್ ಓವರ್‌ಗಳಲ್ಲಿ ಸ್ಲೋವರ್ ಒನ್ ಹಾಗೂ ಬೌಲಿಂಗ್‌ನಲ್ಲಿ ವೇರಿಯಷನ್ ಮಾಡುವ ಬೌಲರ್ ಹರ್ಷಲ್ ಪಟೇಲ್ ಅವರಿಗೆ ಪಂಜಾಬ್ ಕಿಂಗ್ಸ್ 11.75 ಕೋಟಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಇವರು ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ಹಿಂದೆ ಬಿದ್ದರೂ, ನಿಯಮಿತವಾಗಿ ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ಇತ್ತೀಚಿಗೆ ಹರಿಯಾಣ ವಿಜಯ್ ಹಜಾರೆ ಟೂರ್ನಿಯ ಚಾಂಪಿಯನ್ ಆಗುವಲ್ಲಿ ಇವರ ಪಾತ್ರ ಮುಖ್ಯವಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ತಮ್ಮ ಬಿಗುವಿನ ದಾಳಿಯಿಂದಲೇ ಹೆಸರು ಮಾಡಿರುವ ವೆಸ್ಟ್ ಇಂಡೀಸ್ ತಂಡದ ಅಲ್ಜಾರಿ ಜೋಸೆಫ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 11.50 ಕೊಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.