IPL Auction 2024: ಎಲ್ಲಿ, ಯಾವಗ, ತಂಡಗಳ ಬಳಿ ಇರುವ ಹಣ, ಎಷ್ಟು ಆಟಗಾರರನ್ನು ಖರೀದಿಸಬಹುದು ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
2024ರ ಐಪಿಎಲ್‌ಗೆ ಮಿನಿ ಹರಾಜು ಇಂದು ನಡೆಯಲಿದೆ. ಈಗಾಗಲೇ ಈ ಹರಾಜಿನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ತಾವು ಮಾಡಿಕೊಂಡಿರುವ ಲೆಕ್ಕಾಚಾರವನ್ನು ಪರದೆಯ ಮೇಲೆ ತರುವ ಟೈಮ್ ಬಂದಾಗಿದೆ. ಯಾವ ಪ್ಲೇಯರ್ ದೊಡ್ಡ ಮೊತ್ತಕ್ಕೆ ಬಿಕರಿ ಆಗುತ್ತಾನೆ ಎಂಬ ಪ್ರಶ್ನೆಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.
ಈ ಬಾರಿಯ ಐಪಿಎಲ್ ಹರಾಜು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಚೊಚ್ಚಲ ಬಾರಿಗೆ ಹರಾಜಿನಲ್ಲಿ ಕಾಣಿಸಿಕೊಂಡಿರುವ ಆಟಗಾರರು ಬಿಗ್ ರೇಟ್ ಬಿಡ್ ಆಗುವ ಸಾಧ್ಯತೆ ಇದೆ. ಮುಂದಿನ ಬಾರಿ ಐಪಿಎಲ್‌ನಲ್ಲಿ ಯಾವ ತಂಡ ಹೇಗೆ ಪ್ರದರ್ಶನ ನೀಡಲಿದೆ ಎಂಬ ರಫ್ ಲೆಕ್ಕಾಚಾರ ಹರಾಜಿನ ಮೂಲಕ ಸಿಗುವ ಸಾಧ್ಯತೆ ಇದೆ.

ಐಪಿಎಲ್ ಹರಾಜು ನಡೆಯುವುದು ಎಲ್ಲಿ?
ಈ ಬಾರಿಯ ಐಪಿಎಲ್ ಮಿನಿ ಹರಾಜು ದುಬೈನಲ್ಲಿ ನಡೆಯಲಿದೆ. ಈ ಹರಾಜಿಗೆ ಕೊಕೊ ಕೊಲಾ ಅರೆನಾ ಸಂಪೂರ್ಣ ಸಿದ್ಧವಾಗಿದೆ.
ಐಪಿಎಲ್ ಹರಾಜು ನಡೆಯುವ ಸಮಯ?
ಭಾರತೀಯ ಕಾಲಮಾನದ ಪ್ರಕಾರ ಹರಾಜು ಪ್ರಕ್ರಿಯೆ ಮಧ್ಯಾಹ್ನ 1 ರಿಂದ ಆರಂಭವಾಗಲಿದೆ.
ಐಪಿಎಲ್ ಹರಾಜು ಎಷ್ಟು ದಿನ ನಡೆಯಲಿದೆ?
ಈ ಬಾರಿ ದುಬೈನಲ್ಲಿ ನಡೆಯಲಿರುವ ಐಪಿಎಲ್ ಹರಾಜು ಒಂದು ದಿನ ಮಾತ್ರ ನಡೆಯಲಿದೆ. ಈ ಅವಧಿಯಲ್ಲಿ ಸುಮಾರು 4 ರಿಂದ 5 ಗಂಟೆಗಳ ಕಾಲ ಈ ಪ್ರಕ್ರಿಯೆ ನಡೆಯಲಿದೆ.

ಎಲ್ಲಿ ಈ ಹರಾಜನ್ನು ವೀಕ್ಷಿಸಬಹುದು?
ದುಬೈನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯನ್ನು ಸ್ಟಾರ್ ಸ್ಪೋಟ್ಸ್ ನೆಟ್ ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ಇನ್ನು ಮೊಬೈಲ್ ಬಳಕೆದಾರರು ಜಿಯೋ ಸಿನೆಮಾದಲ್ಲಿ ಉಚಿತವಾಗಿ ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಬಹುದು.
ಎಷ್ಟು ಆಟಗಾರರು ಹರಾಜಿನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ?
ವಿಶ್ವಾದ್ಯಂತೆ ಬರೋಬ್ಬರಿ 333 ಆಟಗಾರರನ್ನು ಶಾರ್ಟ್ ಲೀಸ್ಟ್ ಮಾಡಲಾಗಿದೆ. ಅಂದರೆ ಎಲ್ಲ ಮಾಲೀಕರು ಈ ಆಟಗಾರರ ಹೆಸರಿಗೆ ತಮ್ಮ ಮುದ್ರೆ ಒತ್ತಿದ್ದಾರೆ. ಶಾರ್ಟ್ ಲೀಸ್ಟ್ ಮಾಡಿದ ಆಟಗಾರರಲ್ಲಿ 214 ಭಾರತೀಯ ಆಟಗಾರರು, 119 ವಿದೇಶಿ ಆಟಗಾರರ ಹೆಸರುಗಳು ಇವೆ.
ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿರುವ ಅಂತಾರಾಷ್ಟ್ರೀಯ ಹಾಗೂ ದೇಶೀಯ ಆಟಗಾರ ಸಂಖ್ಯೆ ಎಷ್ಟು?
ಹರಾಜಿನಲ್ಲಿ ಒಟ್ಟು 116 ಕ್ಯಾಪ್ಡ್ ಆಟಗಾರು. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದವರು. ಮತ್ತು 215 ದೇಶೀಯ ಕ್ರಿಕೆಟ್‌ನಲ್ಲಿ ಆಡಿದ ಆಟಗಾರರು ಸೇರಿದ್ದಾರೆ.

ಎಷ್ಟು ಆಟಗಾರರನ್ನು ಎಲ್ಲ ತಂಡಗಳು ಖರೀದಿಸಬಹುದು?
ಒಟ್ಟಾರೆ ಐಪಿಎಲ್ 2023 ಹರಾಜಿನಲ್ಲಿ 77 ಆಟಗಾರರನ್ನು ಖರೀದಿಸಲು ಅವಕಾಶ ಇದೆ. ಇನ್ನು ಇವುಗಳಲ್ಲಿ ಕೇವಲ 30 ವಿದೇಶಿ ಆಟಗಾರರು ಸೇರಿದ್ದಾರೆ. ಉಳಿದಂತೆ 47 ದೇಶೀಯ ಆಟಗಾರರು ಹರಾಜಿನಲ್ಲಿ ಬಿಕರಿ ಆಗಲಿದ್ದಾರೆ.
ಹರಾಜಿನಲ್ಲಿ ಯಾವ ದೇಶದ ಆಟಗಾರರು ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ?
ಇಂಗ್ಲೆಂಡ್ ತಂಡದ ಒಟ್ಟು 25, ಆಸ್ಟ್ರೇಲಿಯಾದಿಂದ 21 ಹಾಗೂ ದಕ್ಷಿಣ ಆಫ್ರಿಕಾದಿಂದ 18 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಯಾವ ತಂಡಗಳ ಪರ್ಸ್‌ನಲ್ಲಿ ಎಷ್ಟು ಹಣವಿದೆ?
ಐಪಿಎಲ್‌ನ ಈ ಮಿನಿ ಹರಾಜಿನಲ್ಲಿ ಒಟ್ಟು 262.95 ಕೋಟಿ ರೂ. ತಂಡಗಳ ಒಟ್ಟು ಬಜೆಟ್ ಆಗಿದೆ. ಈ ಹಣದಲ್ಲಿ 77 ಆಟಗಾರರನ್ನು ಖರೀದಿಸಬೇಕಿದೆ. ಇದರಲ್ಲಿ 30 ವಿದೇಶಿ ಆಟಗಾರರಿರುವುದು ಅಗತ್ಯವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಬಳಿ 31.4 ಕೋಟಿ ರೂ. ಬಾಕಿ ಇದೆ. ದೆಹಲಿ ಕ್ಯಾಪಿಟಲ್ಸ್ 28.95 ಕೋಟಿ, ಗುಜರಾತ್ ಟೈಟಾನ್ಸ್ ಬಳಿ 38.15 ಕೋಟಿ ರೂ, ಕೋಲ್ಕತ್ತಾ 32.7 ಕೋಟಿ ರೂ., ಮುಂಬೈ ಇಂಡಿಯನ್ಸ್ ಬಳಿ 15.25 ಕೋಟಿ, ಪಂಜಾಬ್ ಕಿಂಗ್ಸ್ ಬಳಿ 29.1 ಕೋಟಿ, ಆರ್‌ಸಿಬಿ ಬಳಿ 40.75 ಕೋಟಿ, ರಾಜಸ್ಥಾನ ರಾಯಲ್ಸ್ ಬಳಿ 14.5 ಕೋಟಿ, ಎಸ್‌ಆರ್‌ಎಚ್ ಬಳಿ 34 ಕೋಟಿ ಹಣವಿದೆ.
ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು?
ಚೆನ್ನೈ 6, ಡೆಲ್ಲಿ 9, ಗುಜರಾತ್ 7, ಕೆಕೆಆರ್ 12, ಲಖನೌ 6, ಮುಂಬೈ 8, ಪಂಜಾಬ್ 8, ಆರ್‌ಸಿಬಿ 7, ರಾಜಸ್ಥಾನ 8, ಹೈದರಾಬಾದ್ 6 ಆಟಗಾರರನ್ನು ಹರಾಜಿನಲ್ಲಿ ಖರೀದಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications