IPL Auction 2024: ಐಪಿಎಲ್ ಇತಿಹಾಸದ ಮೊದಲ ಮಹಿಳಾ ಹರಾಜುಗಾರ್ತಿ 'ಮಲ್ಲಿಕಾ ಸಾಗರ್' ಯಾರು?
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಸಂಬಂಧಿಸಿದಂತೆ ಇಂದು (ಮಂಗಳವಾರ, ಡಿಸೆಂಬರ್ 19) ದೊಡ್ಡ ದಿನವಾಗಿದೆ. ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ 17ನೇ ಆವೃತ್ತಿ ಪ್ರಾರಂಭವಾಗಲಿದ್ದು, ಇದಕ್ಕೂ ಮುನ್ನ ಬಿಡ್ಡಿಂಗ್ ರೂಂನಲ್ಲಿ ಮತ್ತೊಂದು ದೊಡ್ಡ ಆಟ ನಡೆಯಲಿದೆ.
ಕೆಲವೇ ಕ್ಷಣಗಳಲ್ಲಿ 2024ರ ಐಪಿಎಲ್ ಹರಾಜು ಆರಂಭವಾಗಲಿದೆ ಮತ್ತು ಕೆಲವು ದೊಡ್ಡ ಆಟಗಾರರ ಮೇಲೆ ಫ್ರಾಂಚೈಸಿಗಳ ನಡುವೆ ಬಿಡ್ಡಿಂಗ್ ವಾರ್ ನಡೆಯಲಿದೆ ಎಂದು ನಿರೀಕ್ಷಿಸಬಹುದು. ಐಪಿಎಲ್ 2024ರ ಹರಾಜಿನಲ್ಲಿ ಬಹಳಷ್ಟು ಪ್ರಥಮಗಳು ಸಂಭವಿಸಲಿವೆ.

ದುಬೈ ನಗರವನ್ನು ಹರಾಜಿನ ಸ್ಥಳವಾಗಿ ಆಯ್ಕೆ ಮಾಡಲಾಗಿದೆ. ಇದು ಭಾರತದ ಹೊರಗೆ ಹರಾಜು ಪ್ರಕ್ರಿಯೆ ನಡೆಯುತ್ತಿರುವುದು ಇದೇ ಮೊದಲ ನಿದರ್ಶನವಾಗಿದೆ. ಐಪಿಎಲ್ ಪ್ರಕ್ರಿಯೆಗಳನ್ನು ನಡೆಸಿಕೊಡಲು ಮಹಿಳಾ ಹರಾಜುಗಾರ್ತಿಯನ್ನು ಸೇರಿಸಲು ನಿರ್ಧರಿಸಿರುವುದು ಇದೇ ಮೊದಲು.
ಖ್ಯಾತ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಹರಾಜಿನ ಉಸ್ತುವಾರಿ ವಹಿಸಲಿದ್ದಾರೆ. ಅವರು ಐಪಿಎಲ್‌ನ ಹರಾಜುದಾರರಾಗಿ ಹಗ್ ಎಡ್ಮೀಡ್ಸ್ ಅವರನ್ನು ಬದಲಾಗಿ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್ 2022ರ ಮೆಗಾ ಹರಾಜು ನಡೆಯುತ್ತಿರುವಾಗ ವೇದಿಕೆಯ ಮೇಲೆ ಕುಸಿದು ಬಿದ್ದ ಹಗ್ ಎಡ್ಮೀಡ್ಸ್ ಅವರ ಸ್ಥಾನವನ್ನು ಚಾರು ಶರ್ಮಾ ವಹಿಸಿಕೊಂಡಿದ್ದರು. ಐಪಿಎಲ್‌ನಲ್ಲಿ ಮೊದಲ ಹರಾಜುದಾರರಾಗಿದ್ದ ರಿಚರ್ಡ್ ಮ್ಯಾಡ್ಲಿ ಬದಲಾಗಿ ಹಗ್ ಎಡ್ಮೀಡ್ಸ್ ವೇದಿಕೆ ಮೇಲಿದ್ದರು.
ಐಪಿಎಲ್ 2024ರ ಮಿನಿ ಹರಾಜು ಆ ನಿಟ್ಟಿನಲ್ಲಿ ಐತಿಹಾಸಿಕ ಕ್ಷಣವಾಗಲಿದೆ. ಮಲ್ಲಿಕಾ ಸಾಗರ್ ಈ ಹಿಂದೆ ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಪಿಎಲ್) ಮೊದಲ ಮೆಗಾ ಹರಾಜಿನಲ್ಲಿ ಹರಾಜುಗಾರ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
ಅಲ್ಲದೆ ಪ್ರೊ ಕಬಡ್ಡಿ ಲೀಗ್‌ನಲ್ಲಿ (ಪಿಕೆಎಲ್) ಹರಾಜುಗಾರ್ತಿ ಆಗಿದ್ದರು. ಇದೀಗ ಅವರು ಐಪಿಎಲ್ ಇತಿಹಾಸದಲ್ಲಿ ಮೊದಲ ಮಹಿಳಾ ಹರಾಜುಗಾರ್ತಿಯಾಗಲಿದ್ದಾರೆ.
ಮಲ್ಲಿಕಾ ಸಾಗರ್ ಯಾರು?
ಮಲ್ಲಿಕಾ ಸಾಗರ್ ಭಾರತದಲ್ಲಿ ತನ್ನ ಮೂಲವನ್ನು ಹೊಂದಿದ್ದಾರೆ. ಆದರೆ ಅವರು ವಿದೇಶದಲ್ಲಿ ಓದಿದ್ದಾಳೆ. ಮಲ್ಲಿಕಾ ಫಿಲಡೆಲ್ಫಿಯಾದ ಬ್ರೈನ್ ಮಾವರ್ ಕಾಲೇಜಿನಲ್ಲಿ ಆರ್ಟ್ ಹಿಸ್ಟರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ನ್ಯೂಯಾರ್ಕ್‌ನ ಅಂತಾರಾಷ್ಟ್ರೀಯ ಮತ್ತು ಪ್ರತಿಷ್ಠಿತ ಹರಾಜು ರೂಮ್ ಕ್ರಿಸ್ಟೀಸ್‌ನಲ್ಲಿ ತಮ್ಮ ವೃತ್ತಿಪರ ವೃತ್ತಿಜೀವನ ಪ್ರಾರಂಭಿಸಿದರು. ಮಲ್ಲಿಕಾ ಸಾಗರ್ ಕ್ರಿಸ್ಟೀಸ್‌ಗೆ ಸೇರಿದಾಗ, ಅವರು ಭಾರತದ ಮೊದಲ ಮಹಿಳಾ ಹರಾಜುಗಾರ್ತಿಯಾದರು.
ಈ ಮೊದಲೇ ಹೇಳಿದಂತೆ, 2024ರ ಐಪಿಎಲ್ ಹರಾಜು ಮಲ್ಲಿಕಾ ಸಾಗರ್‌ಗೆ ಕ್ರೀಡಾ ಹರಾಜಿನ ಮೊದಲ ಸಾಹಸವೇನಲ್ಲ. ಅವರು ಮೊದಲು ಪಿಕೆಎಲ್ ಮತ್ತು ಮಹಿಳಾ ಪ್ರೀಮಿಯರ್ ಲೀಗ್ ಹರಾಜುಗಳನ್ನು ನಿರ್ವಹಿಸಿದ್ದಾರೆ.
48 ವರ್ಷದ ಮಲ್ಲಿಕಾ ಸಾಗರ್ ಹರಾಜುಗಾರ್ತಿಯಾಗಿ ದೊಡ್ಡ ಅನುಭವ ಹೊಂದಿದ್ದಾರೆ. ಅವರು ಈ ಕ್ಷೇತ್ರದಲ್ಲಿ 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಡಿಸೆಂಬರ್ 19 ಅವರ ವೃತ್ತಿಜೀವನದಲ್ಲಿ ಖಂಡಿತವಾಗಿ ದೊಡ್ಡ ದಿನವಾಗಿರುತ್ತದೆ.
ಹಿಂದಿನ ಹರಾಜುದಾರರಾಗಿದ್ದ ಹಗ್ ಎಡ್ಮೀಡ್ಸ್ ಅವರ ಆರೋಗ್ಯ ಸ್ಥಿತಿಯ ಕಾರಣದಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಡೆಗಣಿಸಿದೆ. ಆದರೆ, ಹಗ್ ಎಡ್ಮೀಡ್ಸ್ ಐಪಿಎಲ್ 2024ರ ಹರಾಜನ್ನು ಏಕೆ ಮಾಡುತ್ತಿಲ್ಲ ಎಂದು ಯಾವುದೇ ವಿವರಣೆಯನ್ನು ನೀಡಲಾಗಿಲ್ಲ.
ಐಪಿಎಲ್ 2024ರ ಮಿನಿ ಹರಾಜು ಡಿಸೆಂಬರ್ 19ರಂದು ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ. ಈ ಬಾರಿಯ ಹರಾಜನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರವಾಗಿ ವೀಕ್ಷಿಸಬಹುದು ಮತ್ತು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ಅದರ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications