ಕೈ ಬಿಟ್ಟ ಆಟಗಾರರನ್ನು ಮತ್ತೆ ಖರೀದಿಸಲು ಹೆಣಗಾಡಿದ ಫ್ರಾಂಚೈಸಿ
ಐಪಿಎಲ್ ಮೆಗಾ ಹರಾಜು ಭಾನುವಾರ ಎಲ್ಲರ ಚಿತ್ತವನ್ನು ಕದ್ದಿತ್ತು. ಈ ವೇಳೆ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಹಣದ ಹೊಳೆಯನ್ನು ಹರಿಸಿದರು. ಈ ವೇಳೆ ಈ ಮೊದಲು ತಮ್ಮ ತಂಡದಿಂದ ಕೈ ಬಿಟ್ಟ ಆಟಗಾರರನ್ನೇ ಮತ್ತೆ, ತಂಡಕ್ಕೆ ಕರೆತರಲು ಮಾಲೀಕರು ಭಾರೀ ಮೊತ್ತವನ್ನು ನೀಡಬೇಕಾಯಿತು. ಈ ವೇಳೆ ತಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಹಣವನ್ನು ಹೂಡಿ ತಂಡಕ್ಕೆ ಬರ ಮಾಡಿಕೊಂಡವು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೈ ಬಿಟ್ಟಿದ್ದ ಸ್ಟಾರ್ ಆಟಗಾರ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಲು ಮಾಲೀಕರು ಮುಗಿ ಬಿದ್ದರು. ಇವರನ್ನು ಕೊಳ್ಳಲು ಐಪಿಎಲ್ ಎಲ್ಲ ತಂಡಗಳು ಮುಗಿ ಬಿದ್ದವು. ಇವರನ್ನು ಕೊಳ್ಳಲು ಇಷ್ಟೊಂದು ಹಣವನ್ನು ಹೂಡಬೇಕಾಗುತ್ತದೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಊಹಿಸಿರಲಿಲ್ಲ. ಕೆಎಲ್ ರಾಹುಲ್, ಜೋಸ್ ಬಟ್ಲರ್ ಅವರಿಗಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಆದರು. ಇವರು ತಮ್ಮ ಮೂಲ ಬೆಲೆಗಿಂತ ಸುಮಾರು ಹನ್ನೊಂದುವರೆ ಪಟ್ಟು ಹೆಚ್ಚು ಹಣವನ್ನು ಜೇಬಿಗೆ ಇಳಿಸಿಕೊಂಡರು. ಇವರನ್ನು ಕೆಕೆಆರ್ ತಂಡ ತಮ್ಮ ತಂಡಕ್ಕೆ ಮತ್ತೆ ಸೇರಿಸಿಕೊಳ್ಳಲು ಬೆವರು ಹರಿಸಿತು. ಇವರಿಗೆ ಕೆಕೆಆರ್ 23.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

ಅರ್ಷದೀಪ್ ಹರ್ಷ
ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಷದೀಪ್ ಸಿಂಗ್, ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದರು. ಆದರೆ ಪಂಜಾಬ್ ಇವರನ್ನು ರಿಟೇನ್ ಮಾಡಿಕೊಂಡಿರಲಿಲ್ಲ. ಆದರೆ ಇವರ ಕ್ಷಮತೆಯ ಬಗ್ಗೆ ಪಂಜಾಬ್‌ಗೆ ಚೆನ್ನಾಗಿ ತಿಳಿದಿತ್ತು. ಇವರಿಗೆ ಸುಮಾರು 18 ಕೋಟಿ ನೀಡಿ ಮತ್ತೆ ತಂಡಕ್ಕೆ ಬರ ಮಾಡಿಕೊಂಡಿತು. ಪಂಜಾಬ್ ಇಷ್ಟೊಂದು ಹಣ ಖರ್ಚಾಗುತ್ತದೆ ಎಂದೇ ಭಾವಿಸರಲು ಸಾಧ್ಯವಿಲ್ಲ. ಆದರೆ ಭಾರೀ ಮೊತ್ತ ನೀಡಿ ಇವರಿಗೆ ರೆಡ್ ಕಾರ್ಪೆಟ್ ಹಾಕಿತು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಈಗಾಗಲೇ ಆಡಿ ಸೈ ಎನಿಸಿಕೊಂಡಿರಯವ ಆಫ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್‌ಗೆ ಮತ್ತೆ ತವರು ತಂಡ ಸೇರಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಇವರನ್ನು ಕೈ ಬಿಟ್ಟಿದ್ದ ಚೆನ್ನೈ ಈಗ ಮತ್ತೆ ಇವರಿಗೆ ಭಾರೀ ಮೊತ್ತವನ್ನು ಹೂಡಿಕೆ ಮಾಡಿ ತಂಡಕ್ಕೆ ಬರಮಾಡಿಕೊಂಡಿದೆ. ಇವರಿಗೆ ಚೆನ್ನೈ 9.75 ಕೋಟಿ ನೀಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications