ಇನ್ನೇನು ಕೆಲವೇ ಕ್ಷಣಗಳಲ್ಲಿ ಐಪಿಎಲ್ ಮೆಗ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಲಿದ್ದಾರೆ. ಈ ಸ್ಟಾರ್ ಆಟಗಾರರಿಗೆ ಹಣದ ಹೊಳೆಯನ್ನು ಹರಿಸಲು ಮಾಲೀಕರು ಸಹ ಸಜ್ಜಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೆ ಆದ ಛಾಪು ಮೂಡಿಸಿರುವ ಆಟಗಾರರು, ಶ್ರೀಮಂತ ಲೀಗ್‌ನಲ್ಲೂ ಧಮಾಕೆದಾರ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಮಾಲೀಕರು ಇವರಿಗೆ ಬಾಜಿ ಕಟ್ಟಲು ಸಿದ್ಧತೆ ನಡೆಸಿದ್ದಾರೆ. ಮಾಲೀಕರ ಚಿತ್ತ ಕದ್ದಿರುವ ಟಾಪ್ 5 ಪ್ಲೇಯರ್ಸ್, ಬಹುಶಃ 20 ಕೋಟಿ ರೂ. ಮಾರ್ಕ್ ದಾಟಬಹುದು. ಅಂತಹ ಆಟಗಾರರ ಬಗ್ಗೆ ವರದಿ ಇಲ್ಲಿದೆ.
ಈ ಪಟ್ಟಿಯಲ್ಲಿ ಮೊದಲ ಕಾಣಿಸಿಕೊಳ್ಳುವ ಹೆಸರು ರಿಷಭ್ ಪಂತ್. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೈ ಬಿಟ್ಟ ಆಟಗಾರ ರಿಷಭ್ ಪಂತ್ ಅವರನ್ನು ಕೊಳ್ಳಲು, ಐಪಿಎಲ್‌ನ ಎಲ್ಲ ಮಾಲೀಕರು ಸಹ ಬಾಜಿ ಕಟ್ಟ ಬಹುದು. ಇವರು ಒಬ್ಬ ಒಳ್ಳೆಯ ನಾಯಕತ್ವದ ಗುಣಗಳನ್ನು ಹೊಂದಿರುವ ಬ್ಯಾಟರ್ ಜೊತೆಗೆ, ಬೆಸ್ಟ್ ವಿಕೆಟ್ ಕೀಪರ್. ನಾಯಕನ ಹುಡುಕಾಟದಲ್ಲಿರುವ ತಂಡಗಳು ಇವರಿಗೆ ಬಾಜಿ ಕಟ್ಟಬಹುದು. ಇವರು ಶ್ರೀಮಂತ ಆಟಗಾರರ ಪಟ್ಟಿಯನ್ನು ಸೇರುವ ಸಾಧ್ಯತೆ ದಟ್ಟವಾಗಿದೆ.

ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿರುವ ರಾಹುಲ್, ಐಪಿಎಲ್ ಹರಾಜಿನಲ್ಲಿ ಮಾಲೀಕರ ಚಿತ್ತವನ್ನು ಸೆಳೆಯಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಇವರನ್ನು ಕೈ ಬಿಟ್ಟಿದ್ದರಿಂದ ಇವರಿಗೆ ಬಾಜಿ ಕಟ್ಟಲು ಮಾಲೀಕರು ಸಹ ಮುಂದಾಗಲಿದ್ದಾರೆ. ಇವರು ಸಹ 20 ಕೋಟಿ ಮಾರ್ಕ್ ದಾಟುವ ನಿರೀಕ್ಷೆ ಇದೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ಆಟಗಾರ ಶ್ರೇಯಸ್ ಅಯ್ಯರ್. ಇವರನ್ನು ಸಹ ಕೆಕೆಆರ್ ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಈ ಎಲ್ಲ ಗುಣಗಳನ್ನು ನೋಡಿ ಮಾಲೀಕರು ಇವರಿಗೂ ದೊಡ್ಡ ಮೊತ್ತವನ್ನು ಹೂಡಬಹುದಾಗಿದೆ.
ಇಂಗ್ಲೆಂಡ್ ತಂಡದ ಸೀಮಿತ ಓವರ್‌ಗಳ ನಾಯಕ ಜೋಸ್ ಬಟ್ಲರ್. ಇವರು ತಮ್ಮ ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ಬೌಲರ್‌ಗಳನ್ನು ಕಾಡಿದವರು. ಇವರನ್ನು ರಾಜಸ್ಥಾನ ರಿಲೀಸ್ ಮಾಡಿದೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಇವರು ಶತಕ ಬಾರಿಸಿ ಅಬ್ಬರಿಸಿದ್ದರು. ಹೀಗಾಗಿ ಇವರನ್ನು ಕೊಳ್ಳಲು ಸಹ ಎಲ್ಲ ತಂಡಗಳು ಹಣ ಸುರಿಯಲಿವೆ.
ಸದ್ಯ ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಆಟಗಾರರ ಮೊಹಮ್ಮದ್ ಶಮಿ, ರಾಷ್ಟ್ರೀಯ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಇವರ ಗಾಯದಿಂದ ಚೇತರಿಸಿಕೊಂಡಿದ್ದು, ಇವರು ಸಂಪೂರ್ಣವಾಗಿ ಫಿಟ್ ಆಗಿದ್ದಲ್ಲಿ ಇವರಿಗೆ ದೊಡ್ಡ ಮೊತ್ತ ಸಿಗುವ ಸಾಧ್ಯತೆ ಇದೆ.