ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ. ಈ ವೇಳೆ ಹಲವು ಯುವ ಆಟಗಾರರು ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಅಲ್ಲದೆ ಈ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದಿಯುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಹರಾಜಿನಲ್ಲಿ ಯುವ ಆಟಗಾರರನ್ನು ತಮ್ಮ ತಂಡದತ್ತ ಸೆಳೆಯಲು ಮಾಲೀಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹಾಗಿದ್ದರೆ ಯಾವೆಲ್ಲಾ ಯುವ ಆಟಗಾರರಿಗೆ ಐಪಿಎಲ್ ಫ್ರಾಂಚೈಸಿಗಳು ಬಾಜಿ ಕಟ್ಟಬಹುದು ಎಂಬ ಬಗ್ಗೆ ವರದಿ ಇಲ್ಲಿದೆ.
ಈಗಾಗಲೇ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಯುವ ಆಟಗಾರರು, ಐಪಿಎಲ್ ಮಾಲೀಕರ ಚಿತ್ತ ಸಹ ಕತ್ತಿದ್ದಾರೆ. ದೇಶದ ನಾನಾ ರಾಜ್ಯಗಳಲ್ಲಿ ನಡೆದ ಟಿ20 ಲೀಗ್, ರಣಜಿ, ಸೈಯದ್ ಮುಷ್ತಾಕ್ ಅಲಿ, ವಿಜಯ್ ಹಜಾರೆ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದಾರೆ. ಈ ಪಟ್ಟಿಯಲ್ಲಿ ಹಲವು ಯುವ ಆಟಗಾರರು ಎದ್ದು ಕಾಣುತ್ತಾರೆ.

ಕಳೆದ ಆವೃತ್ತಿಯ ಹರಾಜಿನಲ್ಲಿ ಉತ್ತರ ಪ್ರದೇಶದ ಸಮೀರ್ ರಿಜ್ವಿ 8.4 ಕೋಟಿ ರೂ. ಪಡೆದು ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಪ್ಲೇಯರ್ ಆಟಗಾರ ಎಂಬ ಖ್ಯಾತಿ ಪಡೆದಿದ್ದರು. ಇವರು ಯುಪಿ ದೇಶೀಯ ಲೀಗ್‌ನಲ್ಲೂ ಅಮೋಘ ಪ್ರದರ್ಶನ ನೀಡಿದ್ದರು. ಚೆನ್ನೈ ಪರ ಸಮೀರ್ ರಿಜ್ನಿ 8 ಪಂದ್ಯಗಳಲ್ಲಿ 12.75 ರ ಸರಾಸರಿಯಲ್ಲಿ 51 ರನ್ ಗಳಿಸಿದರು, ಆದ್ದರಿಂದ ಅವರನ್ನು ಬಿಡುಗಡೆ ಮಾಡಿತು.
ಪಂಜಾಬ್ ಪರ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ನೆಹಾಲ್ ವಧೇರಾ ಅವರು ಸಹ ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೆ ಕಳೆದ ಆವೃತ್ತಿಯಲ್ಲಿ ಅವರು ಮುಂಬೈ ಪರ ಬೆರಳೆಣಿಕೆ ಪಂದ್ಯವನ್ನು ಆಡಿ ಸೈ ಎನಿಸಿಕೊಂಡಿದ್ದರು. ಕಳೆದ ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಇವರು ಪಂಜಾಬ್ ಪರ ಸ್ಥಿರ ಪ್ರದರ್ಶನ ನೀಡಿ ಎಲ್ಲ ಮಾಲೀಕರ ಚಿತ್ತ ಕದ್ದಿದ್ದಾರೆ.

ಅಶುತೋಷ್ ಶರ್ಮಾ
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಅಶುತೋಷ್ ಶರ್ಮಾ ಮಾಲೀಕರ ಚಿತ್ತ ಕದ್ದಿದ್ದಾರೆ. ಇವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದರು. ಮಧ್ಯಮ ಕ್ರಮಾಂಕದಲ್ಲಿ ಸ್ಥಿರವಾಗಿ ಬ್ಯಾಟ್ ಮಾಡುವ ಇವರು ರನ್‌ಗಳನ್ನು ಕಲೆ ಹಾಕಬಲ್ಲರು. 17ನೇ ಆವೃತ್ತಿಯಲ್ಲಿ ಆಶುತೋಷ್ ಆಡಿದ 11 ಪಂದ್ಯಗಳಲ್ಲಿ 189 ರನ್ ಸಿಡಿಸಿದ್ದರು. ಈ ವೇಳೆ ಅವರ ಸ್ಟ್ರೈಕ್ ರೇಟ್ 167.26 ಆಗಿದೆ.
ಕೆಕೆಆರ್‌ನ ಇಪ್ಪತ್ತರ ಹರೆಯದ ಅಂಗ್‌ಕ್ರಿಶ್ ರಘುವಂಶಿ ಅವರನ್ನು ಕಳೆದ ವರ್ಷದ ಮಿನಿ ಹರಾಜಿನಲ್ಲಿ ಕೆಕೆಆರ್ ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಅವರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಹೀಗಾಗಿ ಕೆಕೆಆರ್ ಇವರನ್ನು ರಿಲೀಸ್ ಮಾಡಿತ್ತು. ಈ ಆಟಗಾರನನ್ನು ಕೊಳ್ಳಲು ಬೇರೆ ಐಪಿಎಲ್ ಮಾಲೀಕರು ಹಣವನ್ನು ಹೂಡಬಹುದು. ಇವರು ಐಪಿಎಲ್‌ನ ಹತ್ತು ಪಂದ್ಯಗಳಲ್ಲಿ 23.29 ಸರಾಸರಿಯಲ್ಲಿ 163 ರನ್ ಗಳಿಸಿದ್ದಾರೆ.

ಕಳೆದ ಆವೃತ್ತಿಯ ಹರಾಜಿನಲ್ಲಿ ಎಲ್ಲರೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ ಪ್ಲೇಯರ್ ಕುಮಾರ್ ಕುಶಾಗ್ರ. ಇವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 7.20 ಕೋಟಿಗೆ ಸೇಲ್ ಆಗಿದ್ದರು. ಇವರು ಜಾರ್ಖಂಡ್ ಪರ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿ ಗಮನ ಸೆಳೆದ ಪ್ಲೇಯರ್. ಡೆಲ್ಲಿ ಪರ ಕುಮಾರ್ ಐಪಿಎಲ್ 2024ರಲ್ಲಿ ಆಡಿದ 4 ಪಂದ್ಯಗಳಲ್ಲಿ ಕೇವಲ 3 ರನ್ ಸಿಡಿಸಿದ್ದು, ನಿರಾಸೆ ಮೂಡಿಸಿದ್ದರು. ಇನ್ನು ಇತ್ತೀಚಿಗೆ ನಡೆದ ರಣಜಿ ಟೂರ್ನಿಯಲ್ಲಿ ಶತಕ ಬಾರಿಸಿ ಭರವಸೆ ಮೂಡಿಸಿದ್ದರು.