For Quick Alerts
ALLOW NOTIFICATIONS  
For Daily Alerts
 

ಇಶಾನ್‌ ಕಿಶನ್‌ ಬಿಟ್ಟಿದ್ದು ಏಕೆ ಎಂಬುದಕ್ಕೆ ಉತ್ತರ ನೀಡಿದ ಹಾರ್ದಿಕ್

ಇತ್ತೀಚಿಗೆ ಸೌದಿಯಲ್ಲಿ ನಡೆದ ಸೌದಿಯ ಜೌಡಿಯಲ್ಲಿ ಐಪಿಎಲ್‌ 2025ರ ಮೆಗಾ ಹರಾಜು ನಡೆಯಿತು. ಈ ವೇಳೆ ಹಲವು ಸ್ಟಾರ್ ಆಟಗಾರರು ಬೇರೆ ತಂಡಗಳ ಪರ ತಂಡ ಸೇರಿಕೊಂಡಿದ್ದಾರೆ. ಈ ವೇಳೆ ಕಳೆದ ಬಾರಿ ಮುಂಬೈ ಇಂಡಿಯನ್ಸ್‌ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದ ಇಶಾನ್‌ ಕಿಶನ್‌, ಹರಾಜಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 11.25 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಮುಂಬೈ ಪರ ಆಡಿ ಮಿಂಚಿದ್ದ ಸ್ಟಾರ್‌ ಆಟಗಾರ ಇಶಾನ್‌ ಕಿಶನ್‌ ಉಳಿಸಿಕೊಳ್ಳಲು ಸಾಧ್ಯವಾಗದನ್ನು ಹಾರ್ದಿಕ್ ಪಾಂಡ್ಯ ಬಿಚ್ಚಿಟ್ಟಾದ್ದಾರೆ.

ಐಪಿಎಲ್‌ ಮೆಗಾ ಹರಾಜಿನಲ್ಲಿ ಎಲ್ಲ ತಂಡಗಳು ಮುಂಬರುವ ಐಪಿಎಲ್‌ ಋತುವಿಗೆ ತಂಡವನ್ನು ಆಯ್ಕೆ ಮಾಡಿವೆ. ಈ ಬಾರಿಯ ಹರಾಜಿನಲ್ಲಿ ಅನೇಕ ತಂಡಗಳು ದಾಖಲೆಯ ಮೊತ್ತಕ್ಕೆ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಇದೇ ಹರಾಜಿನಲ್ಲಿ ಎಡಗೈ ಬ್ಯಾಟರ್‌ ಇಶಾನ್‌ ಕಿಶನ್‌ ಅವರನ್ನು ಸನ್‌ ತಡ ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಇಶಾನ್ ಕಿಶನ್ ಮತ್ತೊಂದು ತಂಡ ಸೇರಿಕೊಂಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

IPL Auction 2025 Why Mumbai Indians Didn t Buy Ishan Kishan Hardik Pandya Explains

ಹಾರ್ದಿಕ್‌ ಪಾಂಡ್ಯ ಹೇಳಿದ್ದೇನು?

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರನ್ನು ಮುಂಬೈ ಇಂಡಿಯನ್ಸ್‌ ಉಳಿಸಿಕೊಂಡಿತ್ತು. ಈ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ 3.20 ಕೋಟಿ ರೂಪಾಯಿ ಅವರೆಗೆ ಮಾತ್ರ ಬಿಡ್ ಮಾಡಿ ಹಿಂದೆ ಸರಿಯಿತು. ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ ಬಗ್ಗೆ ವಿಡಿಯೋ ಹಂಚಿಕೊಂಡಿದೆ.

ಇಶಾನ್‌ ಕಿಶಾನ್‌ ಅವರ ಬಗ್ಗೆ ಮುಂಬೈ ಇಂಡಿಯನ್ಸ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಈ ಹರಾಜಿನಲ್ಲಿ ಇಶಾನ್‌ ಕಿಶನ್‌ ಅವರಿಗೆ ದೊಡ್ಡ ಮೊತ್ತವನ್ನು ನೀಡಿ ತಂಡಕ್ಕೆ ಮರಳಿ ತರುವುದು ಕಷ್ಟವಾಗಿತ್ತು. ಮುಂಬೈ ಇಂಡಿಯನ್ಸ್ ಎರಡು ವೀಡಿಯೊಗಳನ್ನು ಹಂಚಿಕೊಂಡಿದೆ. ಇಶಾನ್‌ ಅವರನ್ನು ಮತ್ತೆ ತಂಡಕ್ಕೆ ಕರೆತರುವುದು ಕಷ್ಟ ಎಂದು ನಮಗೂ ತಿಳಿದಿತ್ತು. ಅವರ ಯಾವ ರೀತಿ ಕೌಶಲ್ಯಗಳು ಹೊಂದಿದ್ದಾರೆ ಎಂದು ಹಾರ್ದಿಕ್ ತಿಳಿಸಿದ್ದಾರೆ. ಇಶಾನ್‌ ಕಿಶನ್‌ ಅವರು ತಂಡದಲ್ಲಿದ್ದಾಗ ತಂಡದ ವಾತಾವರಣ ಉತ್ತಮವಾಗಿತ್ತು ಎಂದಿದ್ದಾರೆ.

ಇಶಾನ್‌ ಇಶನ್‌ ಅವರು ಮುಂಬೈ ಇಂಡಿಯನ್ಸ್‌ ಪರ ಹಲವು ಕ್ಲಾಸಿಕ್‌ ಇನಿಂಗ್ಸ್‌ ಆಡಿ ಜಯದಲ್ಲಿ ಮಿಂಚಿದ್ದಾರೆ. ಇಶಾನ್‌ 2018 ರಿಂದ 2024 ರವರೆಗೆ ಎರಡು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದೆ. ಇದೇ ವೇಳೆ ಇಶಾನ್‌ ಕಿಶನ್‌ ಐಪಿಎಲ್‌ನಲ್ಲಿ 105 ಪಂದ್ಯಗಳನ್ನು ಆಡಿದ್ದು, 135.87ರ ಸ್ಟ್ರೈಕ್‌ ರೇಟ್‌ನಲ್ಲಿ 2644 ರನ್‌ ಸಿಡಿಸಿದ್ದಾರೆ. ಇದರಲ್ಲಿ 16 ಅರ್ಧಶತಕಗಳು ಸೇರಿವೆ.

ಕಳೆದ ವರ್ಷದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಇಶಾನ್ ಕಿಶನ್‌ ಕೈ ಬಿಡಲಾಗಿತ್ತು. ಇದೇ ವೇಳೆ ಅವರಿಗೆ ದೇಶೀಯ ಟೂರ್ನಿಯಲ್ಲಿ ಆಡುವಂತೆ ಸೂಚಿಸಲಾಗಿತ್ತು. ಆದರೆ ಆಗ ಇಶಾನ್‌ ದೇಶೀಯ ಟೂರ್ನಿಯಲ್ಲಿ ಆಡುವುದನ್ನು ಬಿಟ್ಟು ಅಹಮದಾಬಾದ್‌ನಲ್ಲಿ ಹಾರ್ದಿಕ್‌ ಅವರೊಂದಿಗೆ ಮೈದಾನದಲ್ಲಿ ಬೆವರು ಹರಿಸಿದ್ದರು. ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಇತ್ತು ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ ಆಗಿದೆ.

Story first published: Monday, December 2, 2024, 12:02 [IST]
Other articles published on Dec 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+