IPL 2026: ಹರಾಜಿನ ಅಂಗಳಕ್ಕೆ ಕನ್ನಡಿಗರು: ರಿಲೀಸ್ ಆದ ಕರ್ನಾಟದ ಆಟಗಾರರ ಪಟ್ಟಿ
ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿಗೆ ಸಿದ್ಧತೆಗಳು ನಡೆದಿವೆ. ಇದಕ್ಕೆ ಪೂರಕವಾಗಿ ಮಾಲೀಕರು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ನೀಡಬೇಕಿತ್ತು. ಅದರಂತೆ ಶನಿವಾರ ಸಂಜೆ 5 ಗಂಟೆಗೆ ರಿಲೀಸ್ ಮಾಡಿತು. ಈ ವೇಳೆ ಹಲವು ಮಾಲೀಕರು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್, ಕರುಣ್ ನಾಯರ್ ಡೆಲ್ಲಿ ಕ್ಯಾಪಿಟಲ್ಸ್ ಪರವೇ ಮುಂದಿನ ಆವೃತ್ತಿಯಲ್ಲೂ ಆಡಲಿದ್ದು, ಕೆಲವು ಆಟಗಾರರನ್ನು ಮಾಲೀಕರು ರಿಲೀಸ್ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಯಾಂಕ್ ಅಗರ್ವಾಲ್‌ರನ್ನು ರಿಲೀಸ್ ಮಾಡಲಾಗಿದೆ. ಇವರು ಲೀಗ್‌ನ ಮಧ್ಯದಲ್ಲಿ ದೇವದತ್ ಪಡಿಕ್ಕಲ್ ಬದಲಿಗೆ ತಂಡವನ್ನು ಸೇರಿಕೊಂಡಿದ್ದರು. ಅಲ್ಲದೆ ತಂಡದ ಪರ ನಾಕೌಟ್ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೂ ಮಯಾಂಕ್ ಅವರನ್ನು ಆರ್‌ಸಿಬಿ ಉಳಿಸಿಕೊಂಡಿಲ್ಲ. ಇವರನ್ನು ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ 2 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಈಗ ಇವರು ಹರಾಜು ಅಂಗಳಕ್ಕೆ ಎಂಟ್ರಿ ನೀಡಲಿದ್ದಾರೆ.

ಆರ್‌ಸಿಬಿ ತಂಡದ ಪರ ಕಳೆದ ಮೂರು ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದ ಮನೋಜ್ ಬಾಂಡಗೆ ಅವರನ್ನು ಉಳಿಸಿಕೊಳ್ಳುವಲ್ಲಿ ಮಾಲೀಕರು ವಿಫಲರಾಗಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಕೆಲವೇ ಕೆಲವು ಪಂದ್ಯಗಳಲ್ಲಿ ಆಡಿದ್ದರು. ಇದನ್ನು ಬಿಟ್ಟರೆ ಇವರನ್ನು ಅಭಿಮಾನಿಗಳ ಬೆಂಚ್ ಮೇಲೆ ನೋಡಿದ್ದು ಹೆಚ್ಚು. ಇವರಿಗೆ ಆರ್‌ಸಿಬಿ ಮೂಲ ಬೆಲೆ ನೀಡಿ ಖರೀದಿಸಿತ್ತು.
ಅಭಿನವ್‌ಗೆ ಗೇಟ್ ಪಾಸ್
ಸನ್‌ರೈಸರ್ಸ್ ಹೈದರಾಬಾದ್ ಪರ ಕಳೆದ ಆವೃತ್ತಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದ ಮಧ್ಯಮ ಕ್ರಮಾಂಕದ ಆಟಗಾರ ಅಭಿನವ್ ಮನೋರ್ ಅವರನ್ನು ತಂಡ ಹರಾಜು ಅಂಗಳಕ್ಕೆ ಕಳುಹಿಸಿದೆ. ಇವರು ಮಿಡ್ಲ್ ಆರ್ಡರ್ ಹಾಗೂ ಡೆತ್ ಓವರ್‌ಗಳಲ್ಲಿ ಬಿಗ್ ಹಿಟ್ ಬಾರಿಸುವ ಕ್ಷಮತೆಯನ್ನು ಹೊಂದಿರುವ ಆಟಗಾರ. ಇವರನ್ನು ಎಸ್‌ಆರ್‌ಎಚ್ ತಂಡ 3.20 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿತ್ತು. ಈ ಬಾರಿ ಇವರು ಹರಾಜು ಅಂಗಳ ಪ್ರವೇಶಿಸಲಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿಕೆಟ್ ಕೀಪರ್ ಬ್ಯಾಟರ್ ಲವನಿತ್ ಸಿಸೋಡಿಯಾ ಅವರನ್ನು ಮೂಲ ಬೆಲೆಗೆ ಖರೀದಿಸಿತ್ತು. ಆದರೆ ಇವರಿಗೆ ಆಡುವ ಅವಕಾಶಗಳು ಹೆಚ್ಚಾಗಿ ಸಿಗಲಿಲ್ಲ. ಯುವ ಆಟಗಾರನನ್ನು ತಂಡ ಈ ಬಾರಿ ಹರಾಜು ಅಂಗಳಕ್ಕೆ ಬಿಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications