IPL 2026 Auction: ಸ್ಪಿನ್ ಕೊರತೆ ನೀಗಿಸಲು RCB ಮಾಸ್ಟರ್ ಪ್ಲಾನ್: ಭಾರತೀಯ ಬೌಲರ್ ಟಾರ್ಗೆಟ್
ಇಂಡಿಯನ್ ಪ್ರೀಮಿಯರ್ ಲೀಗ್ ರಿಟೆನ್ಷನ್ ಪಟ್ಟಿಯನ್ನು ಮಾಲೀಕರು ರಿಲೀಸ್ ಮಾಡಿದ್ದಾರೆ. ಇನ್ನು ಆಟಗಾರರನ್ನು ಹರಾಜಿನಲ್ಲಿ ಕೊಳ್ಳಲು ಫ್ರಾಂಚೈಸಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಕೈ ಬಿಟ್ಟ ಆಟಗಾರರಲ್ಲಿ ತಮ್ಮ ತಂಡಕ್ಕೆ ಬೇಕಾಗಿರುವ ಆಟಗಾರರ ಪಟ್ಟಿಯನ್ನು ಮಾಲೀಕರು ಫೈನಲ್ ಮಾಡುತ್ತಿದ್ದಾರೆ. ಇದರಂತೆ ಆರ್‌ಸಿಬಿ ಸಹ ತನ್ನ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ತಂಡಕ್ಕೆ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಯಾವೆಲ್ಲಾ ಆಟಗಾರರಿಗೆ ಮಣೆ ಹಾಕಬಹುದು ಎಂಬ ಬಗ್ಗೆ ಈಗಾಗಲೇ ಲೆಕ್ಕಾಚಾರ ಆರಂಭವಾಗಿದೆ.
18ನೇ ಆವೃತ್ತಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಆರ್‌ಸಿಬಿ, ಎರಡನೇ ಬಾರಿ ಟ್ರೋಫಿಯ ಮೇಲೆ ತನ್ನ ಹೆಸರನ್ನು ನಮೂದಿಸಲು ಬೇಕಾಗಿರುವ ತಯಾರಿ ನಡೆಸಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ತಂಡ ಮಿನಿ ಹರಾಜಿನಲ್ಲಿ ಯಾವೆಲ್ಲಾ ಆಟಗಾರರನ್ನು ಟಾರ್ಗೆಟ್ ಮಾಡಬೇಕು ಎಂಬ ಶಾರ್ಟ್ ಲಿಸ್ಟ್ ಮಾಡುತ್ತಿದೆ. ಈ ವೇಳೆ ತಂಡ ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಯುಜುವೇಂದ್ರ ಚಹಾಲ್ ಹಾಗೂ ವನಿಂದು ಹಸರಂಗ್ ಬಳಿಕ ತಂಡದಲ್ಲಿ ನುರಿತ ಸ್ಪಿನ್ ಬೌಲರ್‌ಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಆರ್‌ಸಿಬಿ ಈ ಬಾರಿಯ ಮಿನಿ ಹರಾಜಿನಲ್ಲಿ ಒಬ್ಬ ನುರಿತ ಸ್ಪಿನ್ ಬೌಲರ್‌ಗೆ ಮಣೆ ಹಾಕುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಮೊದಲಿಗೆ ಕಾಣಿಸಿಕೊಳ್ಳುವ ಹೆಸರು 25 ವರ್ಷದ ಯುವ ಬೌಲರ್ ರವಿ ಬಿಷ್ಣೋಯಿ.
ಸ್ಪಿನ್ ಬೌಲರ್‌ಗೆ ಮಣೆ
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ರವಿ ಬಿಷ್ಣೋಯಿ ಲಕ್ನೋ ಸೂಪರ್ ಜೈಂಟ್ಸ್ ಪರ ಬೌಲಿಂಗ್ ಮಾಡಿದ್ದರು. ಆದರೆ ಫ್ರಾಂಚೈಸಿ ಇವರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಹರಾಜಿನ ಅಂಗಳಕ್ಕೆ ಬಿಟ್ಟಿದೆ. ಈಗಾಗಲೇ ಐಪಿಎಲ್‌ನಲ್ಲಿ ತನ್ನ ಬಿಗುವಿನ ದಾಳಿಯ ಮೂಲಕ ಹೆಸರು ಮಾಡಿರುವ ರವಿ ಬಿಷ್ಣೋಯಿಯನ್ನು ಆರ್‌ಸಿಬಿ ಈ ಬಾರಿ ಮಿನಿ ಹರಾಜಿನಲ್ಲಿ ಟಾರ್ಗೆಟ್ ಮಾಡಲಿದೆ. ಬಿಷ್ಣೋಯಿ ತಮ್ಮ ಲೆಗ್ ಸ್ಪಿನ್ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಇವರು ಕಳೆದ ಆವೃತ್ತಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿದ್ದರು. ಈಗ ಇವರು ಹರಾಜಿನಲ್ಲಿ ಹೊಸ ಮಾಲೀಕರ ಹುಡುಕಾಟ ನಡೆಸಲಿದ್ದಾರೆ.

ಈ ಲೆಗ್ ಸ್ಪಿನ್ ಬೌಲರ್ ಆಗಮನದಿಂದ ನಿಶ್ಚಿತವಾಗಿ ಆರ್‌ಸಿಬಿ ತಂಡದ ಸ್ಪಿನ್ ಬೌಲಿಂಗ್ ಬಲಿಷ್ಠವಾದಂತೆ ಆಗುತ್ತದೆ. ಅಲ್ಲದೆ ಇವರು ಮಧ್ಯದ ಓವರ್‌ಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕಿ, ವಿಕೆಟ್ ಬೇಟೆ ನಡೆಸಬಲ್ಲರು. ಆರ್‌ಸಿಬಿ ತನ್ನ ಖಾಲಿ ಇರುವ 6 ಸ್ಥಾನಕ್ಕಾಗಿ ಹರಾಜಿನಲ್ಲಿ ಆಟಗಾರರ ಹುಡುಕಾಟ ನಡೆಸಲಿದೆ. ಈ ವೇಳೆ ಲಕ್ನೋ ಸೂಪರ್ ಜೈಂಟ್ಸ್ ಬಿಟ್ಟ ರವಿ ಬಿಷ್ಣೋಯಿಯನ್ನು ಆರ್‌ಸಿಬಿ ಟಾರ್ಗೆಟ್ ಮಾಡಲಿದೆ. ಈ ಪ್ಲೇಯರ್‌ನನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಹರಾಜಿನಲ್ಲಿ ಹಣದ ಹೊಳೆಯನ್ನು ಹರಿಸುವ ಸಾಧ್ಯತೆ ಇದೆ. ರವಿ ಬಿಷ್ಣೋಯಿ ಐಪಿಎಲ್‌ನಲ್ಲಿ ಆಡಿದ 77 ಪಂದ್ಯಗಳಲ್ಲಿ 72 ವಿಕೆಟ್ ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications