Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2026: ಟಾಪ್‌ 9 ಆಲ್‌ರೌಂಡರ್‌ಗಳೇ ಮಾಲೀಕರ ಟಾರ್ಗೆಟ್‌

ಇಂಡಿಯನ್ ಪ್ರೀಮಿಯರ್ ಲೀಗ್‌ ಹರಾಜಿಗೆ ಸಿದ್ಧತೆಗಳು ನಡೆದಿವೆ. ಈ ಹರಾಜಿನಲ್ಲಿ ಸ್ಟಾರ್ ಆಟಗಾರರು ಅಖಾಡ ಪ್ರವೇಶಿಸಲಿದ್ದಾರೆ. ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿರುವ ಹರಾಜಿಗೆ 1355 ಆಟಗಾರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಈ ವೇಳೆ ಫ್ರಾಂಚೈಸಿಗಳು ಸ್ಟಾರ್ ಆಟಗಾರರಿಗೆ ಮಾಲೀಕರು ಹಣದ ಹೊಳೆಯನ್ನು ಹರಿಸುವ ನಿರೀಕ್ಷೆ ಇದೆ. ಈ ವೇಳೆ ಫ್ರಾಚೈಸಿಗಳು ವಿಶ್ವದ ಸ್ಟಾರ್‌ ಆಲ್‌ರೌಂಡರ್‌ಗಳಿಗೆ ಹಣದ ಹೊಳೆಯನ್ನು ಹರಿಸುವ ಸಾಧ್ಯತೆ ಇದೆ. ಹರಾಜಿನಲ್ಲಿ ಜೇಬು ತುಂಬಿಸಿಕೊಳ್ಳಲಿರುವ 9 ಆಲ್‌ರೌಂಡರ್‌ಗಳ ಪಟ್ಟಿ ಇಲ್ಲಿದೆ.

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಆಟಗಾರ ಕ್ಯಾಮರೂನ್ ಗ್ರೀನ್‌ (Cameron Green). ಇವರ ಮೂಲ ಬೆಲೆ 2 ಕೋಟಿ ರೂ. ಆಗಿದ್ದು, ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಹಣದ ಹೊಳೆ ಹರಿಸಲಿದ್ದಾರೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ಮಿಂಚಿದ್ದರಿಂದ ಮಾಲೀಕರು ಇವರ ಮೇಲೆ ಭರವಸೆ ಇಟ್ಟಿದ್ದಾರೆ. ಗ್ರೀನ್‌ ಆರ್‌ಸಿಬಿ, ಎಂಐ, ಗುಜರಾಟ್‌, ಎಲ್‌ಎಸ್‌ಜಿ ತಂಡಗಳಿಗೆ ಬೇಕಾಗುವ ಆಟಗಾರ. ಇವರ ಆಗಮನದಿಂದ ತಂಡದ ಸಂಯೋಜನೆ ಬಲ ಪಡುತ್ತದೆ.

IPL Auction 2026 Top 9 All-Rounders Are Franchise Targets High bids expected

ಕಳೆದ ಬಾರಿಯ ಮೆಗಾ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಸೇಲ್ ಆಗಿದ್ದ ಭಾರತೀಯ ಆಟಗಾರ ವೆಂಕಟೇಶ್‌ ಅಯ್ಯರ್ (Venkatesh Iyer). ಇವರನ್ನು ಕೋಲ್ಕತ್ತ ನೈಟ್ ರೈಡರ್ಸ್‌ ಖರೀದಿಸಿತ್ತು. ಆದರೆ ಇವರು ತಮ್ಮ ಘನತೆಗೆ ತಕ್ಕ ಪ್ರದರ್ಶನ ನೀಡದಾಗ ಇವರನ್ನು 2026ರ ಹರಾಜಿನ ಅಂಗಳಕ್ಕೆ ಬಿಟ್ಟಿದೆ. ಇವರು ಪವರ್‌ ಪ್ಲೇನಲ್ಲಿ ಬಿಗ್ ಹಿಟ್ ಬಾರಿಸಲುವಲ್ಲಿ ನೆರವಾಗುವ ಪ್ಲೇಯರ್‌. ಮಿಡ್ಲ್‌ ಆರ್ಡರ್‌ನಲ್ಲಿ ಎಡಗೈ ಬ್ಯಾಟರ್‌ನ ಅವಶ್ಯಕತೆ ಹಾಗೂ ಆರನೇ ಬೌಲರ್‌ ಹುಡುಕುತ್ತಿರುವ ಚೆನ್ನೈ, ಪಂಜಾಬ್‌, ಕೆಕೆಆರ್ ತಂಡಗಳು ಇವರಿಗೆ ಬಾಜಿ ಕಟ್ಟಬಹುದು.

ಲಿವಿಂಗ್‌ಸ್ಟೋನ್‌

ಆರ್‌ಸಿಬಿ ಪರ ಕಳೆದ ಬಾರಿಯ ಐಪಿಎಲ್‌ನಲ್ಲಿ ಆಡಿದ ಇಂಗ್ಲೆಂಡ್ ತಂಡದ ಲಿಯಾಮ್ ಲಿವಿಂಗ್‌ಸ್ಟೋನ್ (Liam Livingstone) ಅವರಿಗೂ ಈ ಬಾರಿ ಭಾರೀ ಡಿಮೆಂಡ್‌. ಇವರು ಸಹ ಪವರ್‌ ಹಿಟ್ಟಿಂಗ್‌ಗೆ ಹೆಸರುವಾಸಿ. ಇವರು ತಮ್ಮ ಸ್ಪಿನ್ ಪಿರ್ಕಿ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಹೀಗಾಗಿ ಇವರಿಗೆ ಪಂಜಾಬ್‌, ಆರ್‌ಸಿಬಿ, ಎಂಐ, ಎಸ್‌ಆರ್‌ಎಚ್‌ ತಂಡಗಳು ಬಾಜಿ ಕೂಗಬಹುದಾಗಿದೆ.

ವನಿಂದು ಹಸರಂಗ

ವನಿಂದು ಹಸರಂಗ (wanindu hasaranga) ಸಹ ಈ ಬಾರಿ ಹರಾಜಿನ ಅಂಗಳದಲ್ಲಿದ್ದು, ಇವರನ್ನು ಖರೀದಿಸಲು ಚೆನ್ನೈ, ಜೈಪುರ್, ಕೋಲ್ಕತ್ತಾ ತಂಡಗಳು ಮುಗಿ ಬೀಳಬಹುದು. ಇದಕ್ಕೆ ಕಾರಣ ಈ ಅಂಗಳದಲ್ಲಿ ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವಾಗುತ್ತದೆ. ಇವರು ವಿಕೆಟ್‌ ಪಡೆಯುವ ಕ್ಷಮತೆಯನ್ನು ಹೊಂದಿದ್ದು, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಿಂದಲೂ ತಂಡಕ್ಕೆ ಆಧಾರವಾಗಬಲ್ಲ ಆಟಗಾರ.

ಡ್ಯಾರಿಲ್ ಮಿಚೆಲ್

ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಡ್ಯರಿಲ್‌ ಮಿಚೆಲ್‌ಗೆ (Daryl Mitchell) ಸ್ಥಾನ. ಇವರು ಫಿನಿಷಿಂಗ್‌ ಪಾತ್ರಕ್ಕೆ ಹೆಸರುವಾಸಿಯಾದ ಆಟಗಾರ. ಇವರು ಬ್ಯಾಟಿಂಗ್ ಹಾಗೂ ಮಿಡಿಯಂ ಪೇಸ್‌ನಿಂದಲೂ ತಂಡಕ್ಕೆ ಆಧಾರವಾಬಲ್ಲ ಪ್ಲೇಯರ್.

ಮ್ಯಾಥ್ಯೂ ಶಾರ್ಟ್‌

ಆಸ್ಟ್ರೇಲಿಯಾ ತಂಡದ ಮ್ಯಾಥ್ಯೂ ಶಾರ್ಟ್‌ (Matthew Short) ಸಹ ಹರಾಜಿನ ಅಂಗಳದಲ್ಲಿರುವ ಪ್ರಮುಖ ಆಟಗಾರ. ಇವರು ಸಹ ತಮ್ಮ ಆಲ್‌ರೌಂಡರ್‌ ಎಬಿಲಿಟಿಯಿಂದ ಫ್ರಾಂಚೈಸಿಗಳ ಗಮನ ಗೆಲ್ಲಬಹುದು.

ಇಂಗ್ಲೆಂಡ್‌ ತಂಡದ ಡೇವಿಡ್‌ ವೈಸ್‌ (David Wiese) ಸಹ ಈ ಬಾರಿಯ ಹರಾಜಿನಲ್ಲಿ ಭಾರೀ ಮೊತ್ತವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳಬಲ್ಲರು. ಇವರು ಒತ್ತಡದ ಸನ್ನಿವೇಶದಲ್ಲಿ ಬಿಗ್‌ ಹಿಟ್‌ ಬಾರಿಸುವ ಕ್ಷಮತೆಯನ್ನು ಹೊಂದಿದ್ದಾರೆ. ಇನ್ನು ಬಾಂಗ್ಲಾದೇಶದ ಸ್ಟಾರ್ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್ (Shakib Al Hasan), ವೆಸ್ಟ್‌ ಇಂಡೀಸ್‌ ತಂಡದ ಅಕೇಲ್ ಹೊಸೈನ್ (Akeal Hosein) ಅವರಿಗೂ ಸಹ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಇದೆ.

Story first published: Saturday, December 6, 2025, 12:20 [IST]
Other articles published on Dec 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+