ಐಪಿಎಲ್ 2022: ಹರಾಜಿಗೆ ಕೆಲವೇ ಗಂಟೆಗಳಿರುವಾಗ ಎಲ್ಲಾ ಫ್ರಾಂಚೈಸಿಗಳಿಗೆ ಶಾಕ್ ಕೊಟ್ಟ ಬಿಸಿಸಿಐ!

ಐಪಿಎಲ್ 2022ರ ಆವೃತ್ತಿಗೂ ಮುನ್ನ ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಬೇರೆ ಬೇರೆ ಕಾರಣಗಳಿಗಾಗಿ ಎಲ್ಲಾ ಐಪಿಎಲ್ ಪ್ರೇಮಿಗಳು ಕೂಡ ಈ ಹರಾಜನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇತ್ತ ಎಲ್ಲಾ ಫ್ರಾಂಚೈಸಿಗಳು ಕೂಡ ಅಷ್ಟೇ ಕಾತರದಿಂದ ತಮ್ಮ ತಮ್ಮ ತಂಡಗಳನ್ನು ಕಟ್ಟಲು ತುದಿಗಾಲಲ್ಲಿ ನಿಂತಿದೆ.
ಯಾವ್ಯಾವ ಆಟಗಾರರನ್ನು ಗುರಿಯಾಗಿಸಿ ಹರಾಜು ನಡೆಸಬೇಕು? ಯಾವ ಆಟಗಾರರ ಅಗತ್ಯ ತಂಡಕ್ಕೆ ಬಹಳಷ್ಟಿದೆ? ತಂಡದ ಸಂಯೋಜನೆಯಲ್ಲಿ ಯಾವ ಆಟಗಾರರಿಗೆ ಮಹತ್ವ ನೀಡಿದರೆ ಉತ್ತಮ ಈ ಎಲ್ಲಾ ಲೆಕ್ಕಾಚಾರಗಳ ಜೊತೆಗೆ ನಾನಾ ಅಂಶಗಳನ್ನು ಮುಂದಿಟ್ಟುಕೊಂಡು ಫ್ರಾಂಚೈಸಿಗಳು ಈ ಹರಾಜಿನ ಲೆಕ್ಕಾಚಾರವನ್ನು ನಡೆಸುತ್ತಿವೆ. ಶನಿವಾರ ಹಾಗೂ ಭಾನುವಾರ ಬೆಂಗಳುರಿನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಈ ಎಲಲ್ಆ ಕುತೂಹಲಗಳಿಗೆ ಸ್ಪಷ್ಟ ಉತ್ತರಗಳು ದೊರೆಯಲಿದೆ.
ಆದರೆ ಈ ಕುತೂಹಲಕಾರಿ ಮೆಗಾ ಹರಾಜು ಪ್ರಕ್ರಿಯೆ ನಡೆಯುವ ಮುನ್ನವೇ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಇದು ಹರಾಜಿಗಾಗಿ ಎದುರು ನೋಡುತ್ತಿರುವ ಫ್ರಾಂಚೈಸಿಗಳಿಗೆ ಸಿಹಿಸುದ್ದುಯಂತೂ ಅಲ್ಲ.. ಹಾಗಾದರೆ ಬಿಸಿಸಿಐ ನೀಡಿದ ಆ ಸುದ್ದಿ ಯಾವುದು? ಮುಂದೆ ಓದಿ..

ಮಾರ್ಚ್ 27ರಿಂದ ಐಪಿಎಲ್ ಆರಂಭ ಸಾಧ್ಯತೆ
ಈ ಬಾರಿಯ ಐಪಿಎಲ್ ಆವೃತ್ತಿಯ ಆರಂಭಿಕ ದಿನಾಂಕವನ್ನು ಬಿಸಿಸಿಐ ಈವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಬಿಸಿಸಿಐ ಮೂಲಗಳ ಮಾಹಿತಿಯ ಪ್ರಕಾರ ಮಾರ್ಚ್ ತಿಂಗಳ 27ನೇ ತಾರೀಕಿಗೆ ಈ ಐಪಿಎಲ್ ಆವೃತ್ತಿ ಆರಂಭವಾಗಲಿದೆ ಎನ್ನಲಾಗುತ್ತಿದೆ. ಬಿಸಿಸಿಐ ನೀಡಿರುವ ಕಹಿ ಸುದ್ದಿ ಕೂಡ ಇದಕ್ಕೆ ಸಂಬಂಧಿಸಿದ್ದಾಗಿದ್ದು ವಿದೇಶಿ ಆಟಗಾರರ ಲಭ್ಯತೆಯ ಬಗ್ಗೆ ಬಿಸಿಸಿಐ ಫ್ರಾಂಚೈಸಿಗಳಿಗೆ ಮಾಹಿತಿಯನ್ನು ನೀಡಿದೆ.

ಇಂಗ್ಲೆಂಡ್, ವಿಂಡೀಸ್, ದ. ಆಫ್ರಿಕಾ ಆಟಗಾರರ ಅಲಭ್ಯತೆ
ಐಪಿಎಲ್ ಹರಾಜಿಗೆ ಕೆಲವೇ ಗಂಟೆಗಳಿರುವಾಗಿ ಬಿಸಿಸಿಐ ಫ್ರಾಂಚೈಸಿಗಳಲ್ಲಿ ಹಂಚಿಕೊಂಡಿರುವ ಕಹಿ ಸುದ್ದಿ ಇಂಗ್ಲೆಂಡ್, ವೆಸ್ಟ್ ಇಂಡಿಸ್ ಹಾಗೂ ದಕ್ಷಿಣ ಆಪ್ರಿಕಾ ಕ್ರಿಕೆಟ್ ತಂಡದ ಆಟಗಾರರಿಗೆ ಸಂಬಂಧಿಸಿದ್ದಾಗಿದೆ. ಐಪಿಎಲ್ 2022ರ ಆವೃತ್ತಿಯ ಆರಂಭಿಕ ಕೆಲ ಪಂದ್ಯಳಿಗೆ ಈ ರಾಷ್ಟ್ರಗಳ ಆಟಗಾರರು ಲಭ್ಯವಾಗುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ತಿಳಿಸಿದೆ. ಆದರೆ ಈ ಆಟಗಾರರು ಆರಂಭಿಕ ಕೆಲ ಪಂದ್ಯಗಳಿಗೆ ಮಾತ್ರವೇ ಅಲಭ್ಯವಾಗಲಿದ್ದು ನಂತರ ಲಭ್ಯವಾಗಲಿದ್ದಾರೆ ಎಂದು ತಿಳಿಸಿದೆ. ರಾಷ್ಟ್ರೀಯ ತಂಡಗಳ ಜವಾಬ್ಧಾರಿಯ ನಂತರ ಈ ಆಟಗಾರರು ಕಡ್ಡಾಯ ಕ್ವಾರಂಟೈನ್ ಪೂರೈಸಬೇಕಿರುವ ಕಾರಣದಿಂದಾಗಿ ಈ ಅನನುಕೂಲತೆಗಳು ಉಂಟಾಗಲಿದೆ ಎನ್ನಲಾಗಿದೆ.

ಯಾವ್ಯಾವ ಸರಣಿಗಳು ಅಡ್ಡಿಯಾಗಲಿದೆ?
ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡಿಸ್ ತಂಡಗಳು ಮಾರ್ಚ್ ತಿಂಗಳಲ್ಲಿ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಮಾರ್ಚ್ 12ರಿಂದ ಈ ಸರಣಿ ಆರಂಭವಾಗಲಿದ್ದು ಮಾರ್ಚ್ 28ರಂದುಯ ಸರಣಿ ಮುಕ್ತಾಯವಾಗಲಿದೆ. ಹೀಗಾಗಿ ಸರಣಿಯಲ್ಲಿ ಭಾಗಿಯಾಗಲಿರುವ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡದ ಆಟಗಾರರು ಆರಂಭಿಕ ಕೆಲ ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಕಡ್ಡಾಯ ಕ್ವಾರಂಟೈನ್ ಕೂಡ ಇರುವುದರಿಂದಾಗಿ ಕೆಲ ಆಟಗಾರರು ಅಲಭ್ಯವಾಗುವ ಸಾಧ್ಯತೆಯಿದೆ. ಇನ್ನು ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ಮಧ್ಯೆ 3 ಏಕದಿನ ಪಂದ್ಯಗಳ ಸರಣಿ ಹಾಗೂ 2 ಟೆಸ್ಟ್ ಪಂದ್ಯಗಳ ಸರಣಿ ಆಯೋಜನೆಯಾಗಲಿದೆ. ಇದು ಮಾರ್ಚ್ 18ರಿಂದ ಏಪ್ರಿಲ್ 11ರವರೆಗೆ ನಡೆಯಲಿದೆ. ಇದು ಕೂಡ ಐಪಿಎಲ್ ಆರಂಭದ ಸಂದರ್ಭದಲ್ಲಿಯೇ ನಡೆಯುವ ಕಾರಣ ಆಟಗಾರರ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗಲಿದೆ.

5 ದಿನಗಳ ಕಡ್ಡಾಯ ಕ್ವಾರಂಟೈನ್
ಇನ್ನು ಐಪಿಎಲ್‌ನಲ್ಲಿ ಭಾಗಿಯಾಗಲಿರುವ ವಿದೇಶಿ ಆಟಗಾರರು 5 ದಿನಗಳ ಕಡ್ಡಾಯ ಕ್ವಾರಂಟೈನ್ ಪೂರೈಸಬೇಕಿದೆ. ಅದಾದ ಬಳಿಕವೇ ತಂಡದ ಬಯೋಬಬಲ್‌ಗೆ ಅವಕಾಶ ನೀಡಲಾಗುತ್ತಿದೆ. ಇದು ಈ ಬಾರಿ ಐಪಿಎಲ್ ಟೂರ್ನಿಯ ಸಂಪೂರ್ಣ ಪಂದ್ಯಗಳು ಭಾರತದಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ. ಮಹಾರಾಷ್ಟ್ರದ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಟೂರ್ನಿಯನ್ನು ಆಯೋಜಿಸುವುದು ಬಿಸಿಸಿಐನ ಉದ್ದೇಶವಾಗಿದೆ. ಆದರೆ ಈ ಬಗ್ಗೆ ಬಿಸಿಸಿಐ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications