ಐಪಿಎಲ್ ಹರಾಜು ಅಚ್ಚರಿ: ರಿಕ್ಷಾ ಚಾಲನ ಮಗ ಸಿರಾಜ್ ಗೆ ಭರ್ಜರಿ ಬೆಲೆ
ಬೆಂಗಳೂರು, ಫೆಬ್ರವರಿ 21: ಆತನಿಗಿನ್ನೂ 22 ವರ್ಷ ಹರೆಯ. ಕಠಿಣ ಪರಿಶ್ರಮ, ಅವಿರತ ಸಾಧನೆಯ ಫಲವಾಗಿ ಇಂದು ಐಪಿಎಲ್ 10ರಲ್ಲಿ ಉದಯೋನ್ಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾನೆ. ಆಟೋರಿಕ್ಷಾ ಚಾಲಕರೊಬ್ಬರ ಮಗನಾಗಿರುವ ಮೊಹಮ್ಮದ್ ಸಿರಾಜ್ ಈ ಬಾರಿ ಭರ್ಜರಿ 2.6 ಕೋಟಿ ರು ಗೆ ಮಾರಾಟವಾಗಿದ್ದಾನೆ.
ಐಪಿಎಲ್ 10ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಲು ಉತ್ಸುಕನಾಗಿರುವುದಾಗಿ ಸಿರಾಜ್ ಹೇಳಿದ್ದಾನೆ. [ಐಪಿಎಲ್ 2017 : ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]
ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸಿರಾಜ್ ಗೆ 20 ಲಕ್ಷ ರು ಮೂಲಬೆಲೆ ನಿಗದಿಪಡಿಸಲಾಗಿತ್ತು. ಆದರೆ, ನಿರೀಕ್ಷೆ ಮೀರಿ ಬಿಡ್ಡಿಂಗ್ ನಡೆದು ಕೊನೆಗೆ ಸಿರಾಜ್ ಅವರು ಹೈದರಾಬಾದ್ ಪಾಲಾಗಿದ್ದಾರೆ.[4 ಕೋಟಿಗೆ ಬಿಕರಿಯಾದ ಅಫ್ಘಾನಿಸ್ತಾನದ 18ರ ಪೋರ!]
ಸಿಕ್ಕಿರುವ ಈ ಸುವರ್ಣ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ತನ್ನ ತಂದೆ, ತಾಯಿ ಮನೆ ಕಟ್ಟಿಸಿಕೊಡುವುದಾಗಿ ಸಿರಾಜ್ ಪ್ರತಿಕ್ರಿಯಿಸಿದ್ದಾರೆ. ಸಿರಾಜ್ ಅವರ ತಂದೆ ಮುಹಮ್ಮದ್ ಗೌಸ್ ಮತ್ತು ತಾಯಿ ಶಬನಾ ಬೇಗಮ್ ಅವರು ಸಂಭ್ರಮದಲ್ಲಿ ಮುಳುಗಿದ್ದಾರೆ.[ಚಿತ್ರಕೃಪೆ: ಎಎನ್ಐ]

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪ್ರದರ್ಶನ ನೆರವಾಯ್ತು
ಹೈದರಾಬಾದ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಮೆಂಟರ್ ಆಗಿದ್ಧಾರೆ. ಡೇವಿಡ್ ವಾರ್ನರ್ ಅವರು ನಾಯಕರಾಗಿರುವ ತಂಡಕ್ಕೆ ಆಯ್ಕೆಯಾಗಿರುವುದು ಖುಷಿಕೊಟ್ಟಿದೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ನೀಡಿದದ ಪ್ರದರ್ಶನ ಹಾಗೂ ಭಾರತ ‘ಎ' ಮತ್ತು ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಈಗ ಐಪಿಎಲ್ ತಂಡ ಸೇರಲು ನೆರವಾಯಿತು ಎಂದು ಸಿರಾಜ್ ಹೇಳಿದ್ದಾರೆ.

500 ರು ಮೊದಲ ಬಹುಮಾನ
25 ಓವರ್‌ಗಳ ಕ್ಲಬ್ ಮ್ಯಾಚ್ ವೊಂದರಲ್ಲಿ 20 ರನ್ನಿಗೆ ಎದುರಾಳಿ ತಂಡದ 9 ವಿಕೆಟ್ ಗಳನ್ನು ಉರುಳಿಸಿದ್ದೆ. ಆಗ ನನ್ನ ಚಿಕ್ಕಪ್ಪ ನನಗೆ 500 ರೂ. ಬಹುಮಾನ ನೀಡಿದ್ದರು. ಆಗ ನನಗೆ ಉಂಟಾಗಿದ್ದ ಆನಂದ ಈಗ 2.60 ಕೋಟಿ ರೂ.ಗೆ ಮಾರಾಟವಾದಗಲೂ ಆಗುತ್ತಿದೆ ಎಂದು ಸುದ್ದಿಗಾರರಿಗೆ ಸಿರಾಜ್ ಹೇಳಿದ್ದಾರೆ.

ತಂದೆ ಮತ್ತು ತಾಯಿಯ ತ್ಯಾಗ
ನನ್ನ ಈ ಸಾಧನೆಗೆ ತಂದೆ ಹಾಗೂ ತಾಯಿ ತ್ಯಾಗ, ಪ್ರೀತಿಯೇ ಕಾರಣ. ಆಟೋರಿಕ್ಷಾ ಚಾಲಕರಾಗಿದ್ದರೂ ನಮ್ಮ ಮೇಲೆ ಕುಟುಂಬದ ಕಷ್ಟ ಬೀಳದಂತೆ ನನ್ನಪ್ಪ ನೋಡಿಕೊಂಡರು. ಇದರಿಂದ ನಾನು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಲು ಸಾಧ್ಯವಾಯಿತು ಎಂದು ಸಿರಾಜ್ ಹೇಳಿದ್ದಾರೆ.

ಐಪಿಎಲ್ ಹರಾಜು ಅಚ್ಚರಿ ಸಿರಾಜ್
ನನ್ನ ಅಣ್ಣ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಆದರೆ, ನನಗೆ ಮೊದಲಿನಿಂದಲೂ ಓದಿಗಿಂತ ಕ್ರಿಕೆಟ್ ನತ್ತ ಆಸಕ್ತಿ ಬೆಳೆಯಿತು. ನನ್ನ ತಾಯಿಗೆ ಮಾತ್ರ ನಾನು ನನ್ನ ಅಣ್ಣನಂತೆ ಇಂಜಿನಿಯರ್ ಆಗಬೇಕು ಎಂಬ ಆಸೆಯಿತ್ತು. ಆದರೆ, ಈಗ ನನ್ನ ಬಗ್ಗೆ ಹೆಮ್ಮೆಯಿಂದ ಮೊಹಲ್ಲಾದಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ಸಿರಾಜ್ ಅವರ ಇಲ್ಲಿ ತನಕದ ಸಾಧನೆ
ಟೆನಿಸ್ ಚೆಂಡಿನಲ್ಲಿ ಕ್ರಿಕೆಟ್ ಆರಂಭಿಸಿದ ಸಿರಾಜ್ ಅವರು ವೇಗದ ಬೌಲಿಂಗ್ ಬಗ್ಗೆ ಆಸಕ್ತ ಬೆಳೆಸಿಕೊಂಡರು. ಸ್ವಂತ ಪರಿಶ್ರಮದಿಂದ ಹೈದರಾಬಾದ್ ನ ಅಂಡರ್ -22, ಮುಷ್ತಾಕ್ ಅಲಿ, ವಿಜಯ್ ಹಝಾರೆ , ರಣಜಿ ಟ್ರೋಫಿ ತಂಡಕ್ಕೆ ಆಡಿದ ಸಾಧನೆ ಮಾಡಿದರು. ಭಾರತ ‘ಎ' ತಂಡದಲ್ಲಿ ಆಡುವ ಅವಕಾಶ ಕೂಡಾ ಪಡೆದರು. ಈಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಟಿ20 ಆಡಲಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications